
ಹೌದು, ವಾಟ್ಸಾಪ್ ತನ್ನ ಬಳಕೆದಾರಿಗೆ ಹೊಸ ಮಾದರಿಯ ಫೀಚರ್ಸ್ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಫೀಚರ್ಸ್ ಆಂಡ್ರಾಯ್ಡ್‌ನಿಂದ ಐಒಎಸ್‌ಗೆ ಚಾಟ್ ಹಿಸ್ಟರಿಯನ್ನು ಟ್ರಾನ್ಸಫರ್ ಮಾಡಲು ಅನುಮತಿಸಲಿದೆ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಾಟ್ಸಾಪ್ ಸಿಇಒ ವಿಲ್ ಕ್ಯಾಥ್‌ಕಾರ್ಟ್ ಕೂಡ ಶೀಘ್ರದಲ್ಲೇ ವಾಟ್ಸಾಪ್ ಅಪ್ಲಿಕೇಶನ್ ಆಂಡ್ರಾಯ್ಡ್‌ನಿಂದ ಐಒಎಸ್‌ಗೆ ಚಾಟ್ ಹಿಸ್ಟರಿಯನ್ನು ವರ್ಗಾಯಿಸುವ ಫೀಚರ್ಸ್ ಪಡೆಯಲಿದೆ ಎಂದು ಹೇಳಿದ್ದಾರೆ. ಹಾಗಾದ್ರೆ ವಾಟ್ಸಾಪ್‌ನ ಈ ಹೊಸ ಫೀಚರ್ಸ್ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಚಾಟ್ ಮೈಗ್ರೇಷನ್ ಫೀಚರ್ಸ್ ಪರಿಚಯಿಸಲು ಮುಂದಾಗಿದೆ. ಇದಕ್ಕೂ ಮೊದಲು ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗೆ ತಮ್ಮ ಚಾಟ್ ಹಿಸ್ಟರಿಯನ್ನು ಟ್ರಾನ್ಸಫರ್ ಮಾಡುವುದು ಕಷ್ಟಕರವಾಗಿತ್ತು. ಇದರಿಂದ ಹೊಸ ಆಪರೇಟಿಂಗ್ ಸಿಸ್ಟಮ್‌ಗೆ ಹೋಗುವುದರಿಂದ ಹಳೆಯ ಚಾಟ್‌ಗಳನ್ನು ಕಳೆದುಕೊಳ್ಳಬೇಕಾಗಿತ್ತು. ಆದರೆ ಇದೀಗ ವಾಟ್ಸಾಫ್ ತನ್ನ ಚಾಟ್ ಬಿಸ್ಟರಿ ಟ್ರಾನ್ಸಫರ್ ವಿಷಯವನ್ನು ಸಾಕಷ್ಟು ಸರಳಗೊಳಿಸಿದೆ. ಸದ್ಯ iOS ಬಳಕೆದಾರರು ಈಗ ತಮ್ಮ ಚಾಟ್‌ಗಳನ್ನು ಸ್ಯಾಮ್‌ಸಂಗ್ ಹಾಗೂ ಪಿಕ್ಸೆಲ್ ಡಿವೈಸ್‌ಗಳಿಗೆ ಸುಲಭವಾಗಿ ವರ್ಗಾಯಿಸಬಹುದು.ಆದರೆ ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ 12 ಚಾಲನೆಯಲ್ಲಿರುವ ಎಲ್ಲಾ ಫೋನ್‌ಗಳು ಚಾಟ್ ಟ್ರಾನ್ಸಫರ್ ಫೀಚರ್ಸ್ ಪಡೆಯಲಿವೆ ಎಂದು ಅಂದಾಜಿಸಲಾಗಿದೆ.

ವಾಟ್ಸಾಪ್ ತನ್ನ ಹೊಸ ಅಪ್ಡೇಟ್‌ನಲ್ಲಿ ಆಂಡ್ರಾಯ್ಡ್ ಟು ಐಒಎಸ್ ಚಾಟ್ ಟ್ರಾನ್ಸಫರ್ ಫೀಚರ್ಸ್ ಅನ್ನು ಪರೀಕ್ಷಿಸುತ್ತಿದೆ. ಆಂಡ್ರಾಯ್ಡ್ 2.21.20.11 ವಾಟ್ಸಾಪ್ ಬೀಟಾದಲ್ಲಿ ಈ ಹೊಸ ಅಪ್ಡೇಟ್ ಅನ್ನು ವಾಬೇಟಾಇನ್ಫೋ ಟ್ರ್ಯಾಕ್ ಮಾಡಿದೆ. ಇದನ್ನು “ಆಂಡ್ರಾಯ್ಡ್‌ನಿಂದ ಚಾಟ್ ಹಿಸ್ಟರಿ ಟ್ರಾನ್ಸಫರ್” ಎಂಬ ಆಯ್ಕೆಯಲ್ಲಿ ಗುರುತಿಸಲಾಗಿದೆ ಎಂದು ವರದಿಯಾಗಿದೆ. ಇನ್ನು ಈ ಹೊಸ ಫೀಚರ್ಸ್‌ನಲ್ಲಿ ಚಟ್ ಟ್ರಾನ್ಸಫರ್ ಮಾಡುವ ಮುನ್ನ ವಾಟ್ಸಾಪ್ ನಿಮ್ಮ ಅನುಮತಿಯನ್ನು ಕೇಳುತ್ತದೆ ಎಂದು ಹೇಳಲಾಗಿದೆ. ಸದ್ಯ ಈ ಫೀಚರ್ಸ್ ಅಭಿವೃದ್ಧಿ ಹಂತದಲ್ಲಿದೆ, ಮುಂದಿನ ಅಪ್ಡೇಟ್‌ನಲ್ಲಿ ಮಾತ್ರ ಈ ಫೀಚರ್ಸ್ ಲಭ್ಯವಿರುತ್ತದೆ.

ಇದಲ್ಲದೆ, ವಾಟ್ಸಾಪ್ ಬ್ಯುಸಿನೆಸ್ ಅಕೌಂಟ್ ಬಳಸುವವರಿಗಾಗಿ ಸರ್ಚ್ ಫಿಲ್ಟರ್ ಅನ್ನು ಹೆಚ್ಚು ಮಾಡಲು ಮುಂದಾಗಿದೆ. ಬ್ಯುಸಿನೆಸ್ ಅಕೌಂಟ್ ಮೂಲಕ ಬಳಕೆದಾರರು ತಮ್ಮ ಹತ್ತಿರದ ವ್ಯವಹಾರಗಳನ್ನು ಫಿಲ್ಟರ್ ಮಾಡಲು ಅನುಕೂಲವಾಗಲಿದೆ. ಸರ್ಚ್ ಫಿಲ್ಟರ್ ಫೀಚರ್ಸ್ ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿನ ವಾಟ್ಸಾಪ್ ಬ್ಯುಸಿನೆಸ್ ಬೀಟಾ ಆವೃತ್ತಿಯಲ್ಲಿ ಪರಿಯಿಸಲಾಗಿದೆ. ನಿಮ್ಮ ಚಾಟ್‌ಗಳು ಮತ್ತು ಸಂದೇಶಗಳಿಗಾಗಿ ನೀವು ಸರ್ಚ್ ಮಾಡಿದರೆ ನಿಮಗೆ ಅನೇಕ ಆಯ್ಕೆಗಳನ್ನು ನೀಡಲಿದೆ. ಸಂಪರ್ಕಗಳು, ಸಂಪರ್ಕವಿಲ್ಲದವರು ಮತ್ತು ಓದದಿರುವುದು ಎನ್ನುವ ಆಯ್ಕೆಗಳನ್ನು ನೀಡಲಿದೆ ಎಂದು ವಾಟ್ಸಾಪ್ ಹೇಳಿದೆ.

ಈ ಆಯ್ಕೆಗಳ ಮೂಲಕ ಬಳಕೆದಾರರು ಅಗತ್ಯವಿರುವ ಮಾಹಿತಿಯನ್ನು ಸುಲಭವಾಗಿ ಪ್ರವೇಶಿಸಬಹುದು. ಫೋಟೋಗಳು, gifಗಳು, ವೀಡಿಯೊಗಳು, ಆಡಿಯೋ, ಲಿಂಕ್‌ಗಳು ಮತ್ತು ಡಾಕ್ಯುಮೆಂಟ್‌ಗಳನ್ನು ಸರ್ಚ್ ಮಾಡಲು ಇದರಿಂದ ಸುಲಭವಾಗಲಿದೆ. ಇದರಿಂದ ನೀವು ಹುಡುಕಲು ಬಯಸುವ ಪೈಲ್ ಸಂಪರ್ಕದಲ್ಲಿರುವವರು, ಸಂಪರ್ಕವಿಲ್ಲದವರು, ಓದದಿರುವುದು ಆಯ್ಕೆಗಳಲ್ಲಿ ಹುಡುಕಬಹುದಾಗಿದೆ. ಈ ಹೆಚ್ಚುವರಿ ವರ್ಗಗಳು ಬಳಕೆದಾರರಿಗೆ ಸರ್ಚ್ ಅನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಫೀಚರ್ಸ್ ವಾಟ್ಸಾಪ್ ಬ್ಯುಸಿನೆಸ್ ಆವೃತ್ತಿಯಲ್ಲಿ ಮಾತ್ರ ಲಭ್ಯವಾಗಲಿದೆ. ಸಾಮಾನ್ಯ ವಾಟ್ಸಾಪ್ ಅಕೌಂಟ್‌ನಲ್ಲಿ ಈ ಫೀಚರ್ಸ್ ಲಭ್ಯವಿರುವುದಿಲ್ಲ. ಏಕೆಂದರೆ ಈ ಫೀಚರ್ಸ್ ವಾಟ್ಸಾಪ್ ಬ್ಯುಸಿನೆಸ್ ಅಕೌಂಟ್‌ನಲ್ಲಿ ಮಾತ್ರ ಉಪಯುಕ್ತವಾಗಿರಲಿದೆ ಎಂದು ಹೇಳಲಾಗಿದೆ.

ಇದಲ್ಲದೆ ವಾಟ್ಸಾಪ್ ಕೆಲವು ದಿನಗಳ ಹಿಂದೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಾಯ್ಸ್ ಮೆಸೇಜ್ ಪ್ರಿವ್ಯೂ ಫೀಚರ್ಸ್ ಪರಿಚಯಿಸಿದೆ. ಇದು ನೀವು ವಾಯ್ಸ್ ಮೆಸೇಜ್ ಅನ್ನು ಕಳುಹಿಸುವುದಕ್ಕೂ ಮೊದಲು ಪ್ರಿವ್ಯೂ ಮಾಡಲು ಅವಕಾಶ ನೀಡಲಿದೆ. ಇದರಿಂದ ನೀವು ನಿಮ್ಮ ಸಂದೇಶವನ್ನು ಸರಿಯಾಗಿ ಕಳುಹಿಸಿದ್ದೀರಾ ಇಲ್ಲವೇ ಅನ್ನೊದನ್ನ ಪರಿಶೀಲಿಸಲು ಅವಕಾಶ ನೀಡಲಿದೆ. ಅಲ್ಲದೆ ಟೆಕ್ಸ್ಟ್ ಮೆಸೇಜ್ ಮಾಡುವುದಕ್ಕಿಂತ ಪರಿಣಾಮಕಾರಿಯಾಗಿ ವಾಯ್ಸ್‌ಮೆಸೇಜ್ ಸೆಂಡ್ ಮಾಡಲು ಸಾಧ್ಯವಾಗಲಿದೆ.
Read more…
[wpas_products keywords=”smartphones under 15000 6gb ram”]