ಹೈಲೈಟ್ಸ್:
- ದೇಶದ ದೈನಂದಿನ ಪಾಸಿಟಿವಿಟಿ ದರ ಶೇ 16.41ರಿಂದ ಶೇ 17.94ಕ್ಕೆ ಏರಿಕೆ
- 20 ಲಕ್ಷಕ್ಕೆ ಏರಿಕೆಯಾದ ಸಕ್ರಿಯ ಪ್ರಕರಣಗಳು, ಶೇ 5.23ರಷ್ಟು ಸಕ್ರಿಯ ದರ
- 703 ಕೊರೊನಾ ಸೋಂಕಿತರು ಸಾವು, ಒಟ್ಟು ಮರಣ ಸಂಖ್ಯೆ 4,88,396ಕ್ಕೆ
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,47,254 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 2,51,777 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಇದರಿಂದ ಒಟ್ಟು ಗುಣಮುಖರಾದವರ ಸಂಖ್ಯೆ 3,60,58,806ಕ್ಕೆ ಏರಿಕೆ ಕಂಡಿದೆ. ದೇಶದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳು 20,18,825ಕ್ಕೆ ತಲುಪಿದ್ದು, ಸಕ್ರಿಯ ಪ್ರಕರಣಗಳ ಪ್ರಮಾಣ ಶೇ 5.23ರಷ್ಟಿದೆ. ಚೇತರಿಕೆ ದರ ಶೇ 93.50ಯಷ್ಟಿದೆ.
ಕೋವಿಡ್ ಜಿನೋಮ್ ಸೀಕ್ವೆನ್ಸಿಂಗ್‌ಗೆ ತೀವ್ರ ಹಿನ್ನಡೆ: ಅನುದಾನವಿಲ್ಲದೆ 5 ಲ್ಯಾಬ್‌ಗಳು ಬಂದ್
ದೈನಂದಿನ ಪಾಸಿಟಿವಿಟಿ ದರ ಶೇ 17.94ಕ್ಕೆ ಹೆಚ್ಚಳವಾಗಿದೆ. ವಾರದ ಪಾಸಿಟಿವಿಟಿ ದರ ಶೇ 16.56ಕ್ಕೆ ಮುಟ್ಟಿದೆ. 703 ಕೊರೊನಾ ಸೋಂಕಿತರು ಗುರುವಾರ ಮೃತಪಟ್ಟಿದ್ದು, ಒಟ್ಟು ಮರಣ ಸಂಖ್ಯೆ 4,88,396ಕ್ಕೆ ತಲುಪಿದೆ. ಹಾಗೆಯೇ ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳು 9,692ಕ್ಕೆ ತಲುಪಿದೆ.
ಇನ್ನೊಂದೆಡೆ ಲಸಿಕೆ ಅಭಿಯಾನ ಚುರುಕಿನಿಂದ ಸಾಗುತ್ತಿದ್ದು, ಒಟ್ಟು ಕೋವಿಡ್ ಡೋಸ್ ಸಂಖ್ಯೆ 160 ಕೋಟಿ ಗಡಿ ದಾಟಿದೆ. ದೇಶದ ಶೇ 94ರಷ್ಟು ಅರ್ಹ ವಯಸ್ಕರು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಶೇ 72ರಷ್ಟು ವಯಸ್ಕರು ಎರಡೂ ಡೋಸ್ ಪಡೆದಿದ್ದಾರೆ.
ರಾಜ್ಯವಾರು ಕೋವಿಡ್ ಪ್ರಕರಣಗಳಲ್ಲಿ ಗುರುವಾರ ಕರ್ನಾಟಕವು ಮಹಾರಾಷ್ಟ್ರವನ್ನು ಮತ್ತೆ ಹಿಂದಿಕ್ಕಿದೆ. ಗುರುವಾರ ಕರ್ನಾಟಕದಲ್ಲಿ 47,754 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಬೆಂಗಳೂರು ನಗರವೊಂದರಲ್ಲಿಯೇ 30 ಸಾವಿರಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗಿವೆ.
ಕರ್ನಾಟಕ ರಾಜ್ಯದಲ್ಲಿ ಗುರುವಾರ ಕೊರೊನಾ ಪಾಸಿಟಿವಿಟಿ ದರ ಶೇ. 18.48 ರಷ್ಟು ದಾಖಲಾಗಿದೆ. ಗುರುವಾರ ರಾಜ್ಯಾದ್ಯಂತ 22,143 ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ರಾಜ್ಯಾದ್ಯಂತ ಗುಣಮುಖರಾಗಿ ಡಿಸ್ಚಾರ್ಜ್ ಆದವರ ಒಟ್ಟು ಸಂಖ್ಯೆ 30,45,177ಕ್ಕೆ ಏರಿಕೆ ಕಂಡಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 2,93,231ಕ್ಕೆ ಏರಿಕೆ ಕಂಡಿದೆ. ಈ ಪೈಕಿ ಬೆಂಗಳೂರು ನಗರವೊಂದರಲ್ಲೇ 2 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ.
ಕರ್ನಾಟಕ ರಾಜ್ಯಾದ್ಯಂತ ಗುರುವಾರ 47,754 ಕೊರೊನಾ ಹೊಸ ಕೇಸ್..! ಬೆಂಗಳೂರಲ್ಲೇ 30,540 ಪ್ರಕರಣ..!
ಕೇರಳದಲ್ಲಿ 46,387 ಮಂದಿಗೆ ಸೋಂಕು ತಗುಲಿದೆ. ಕೇರಳದಲ್ಲಿ ಎರಡನೇ ಅಲೆಯಲ್ಲಿ ಕೂಡ ದಿನವೊಂದರಲ್ಲಿ ಇಷ್ಟು ಪ್ರಕರಣ ದಾಖಲಾಗಿರಲಿಲ್ಲ. ಮಹಾರಾಷ್ಟ್ರದಲ್ಲಿ 46,197 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಗುಜರಾತ್‌ನಲ್ಲಿ 24,485 ಸೋಂಕಿತರು ಪತ್ತೆಯಾಗಿದ್ದಾರೆ. ದಿಲ್ಲಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಗುರುವಾರ 12,306 ಸೋಂಕಿತರು ದಾಖಲಾಗಿದ್ದಾರೆ.
Read more
[wpas_products keywords=”deal of the day sale today offer all”]