Online Desk
ನಟಿ ರವೀನಾ ಟಂಡನ್ ಅವರು ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಕೆಜಿಎಫ್ 2’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್‌ನಲ್ಲಿ ಆದ ಬೇಸರದ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ರವೀನಾ ಟಂಡನ್ ಅವರಿಗೆ ಸಂಜಯ್ ದತ್ ಜೊತೆ ಕೆಲಸ ಮಾಡುವ ಆಸೆಯಿತ್ತು. ಆದರೆ ಸಂಜಯ್ ದತ್, ರವೀನಾ ಜೊತೆಯಾಗಿ ನಟಿಸುವ ಒಂದು ದೃಶ್ಯವೂ ‘ಕೆಜಿಎಫ್ 2’ ಚಿತ್ರದಲ್ಲಿ ಇಲ್ಲವಂತೆ. ನಾನು, ಸಂಜಯ್ ದತ್ ಒಟ್ಟಾಗಿ ಇರುವ ದೃಶ್ಯವನ್ನು ಮಾಡಿ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೂ ಹೇಳಿದರೂ ಪ್ರಯೋಜನಕ್ಕೆ ಬಾರಲಿಲ್ಲವಂತೆ.
“ನಾವು ಈ ಹಿಂದೆ ಇದ್ದಂತೆ ಸೆಟ್‌ನಲ್ಲಿ ಎಂಜಾಯ್ ಮಾಡುತ್ತೇವೆ ಎಂದುಕೊಂಡಿದ್ದೆ. ಆದರೆ ಈ ಚಿತ್ರದಲ್ಲಿ ಒಟ್ಟಿಗೆ ತೆರೆ ಹಂಚಿಕೊಳ್ಳಲಾಗಲಿಲ್ಲ. ನಮ್ಮ ಶೂಟಿಂಗ್ ಶೆಡ್ಯೂಲ್ ಬೇರೆ ಬೇರೆ ಇತ್ತು ” ಎಂದು ರವೀನಾ ಟಂಡನ್ ಬೇಸರ ಹೊರಹಾಕಿದ್ದಾರೆ.
ಮಹಿಳಾ ರಾಜಕಾರಣಿಯ ಪಾತ್ರದಲ್ಲಿ ರವೀನಾ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ‘ಡೆತ್ ವಾರೆಂಟ್ ನೀಡುವ ಮಹಿಳೆ’ ಎಂದು ರವೀನಾ ಪಾತ್ರವನ್ನು ನಿರ್ದೇಶಕ ಪ್ರಶಾಂತ್ ನೀಲ್ ಈ ಹಿಂದೆ ಬಣ್ಣಿಸಿದ್ದರು. ದಿವಂಗತ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಪಾತ್ರದಿಂದ ಪ್ರೇರಣೆ ಪಡೆದ ರಮೀಕಾ ಸೇನ್ ಪಾತ್ರದಲ್ಲಿ ರವೀನಾ ಟಂಡನ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕೆಜಿಎಫ್-2 ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನ, ಪಾತ್ರ ಸಾಗುವ ರೀತಿ ಊಹಿಸಲು ಅಸಾಧ್ಯ: ರವೀನಾ ಟಂಡನ್
ರಮೀಕಾ ಸೇನ್ ತುಂಬ ಪವರ್‌ಫುಲ್ ಪಾತ್ರ. ಅವಳು ಚಿತ್ರದಲ್ಲಿ ಹೀರೋ, ವಿಲನ್ ಕೂಡ ಅವಳೇ ಆಗಿರುತ್ತಾಳೆ. ಚಿತ್ರದಲ್ಲಿ ಬಹಳ ಆಸಕ್ತಿಕರವಾದ ಕಥೆ ಇದೆ. ‘ಪಾರ್ಟ್ 1’ರಲ್ಲಿ ರಮೀಕಾ ಸೇನ್ ಪಾತ್ರವು ರಾಕಿ ಭಾಯ್‌ಗೆ ಡೆತ್ ವಾರಂಟ್ ಅನ್ನು ಜಾರಿ ಮಾಡುತ್ತದೆ. ಈಗ ಪಾರ್ಟ್ 2ನಲ್ಲಿ ರಮೀನಾ ಎಂಟ್ರಿ ಇರಲಿದೆ. ಒಟ್ಟಿನಲ್ಲಿ ರವೀನಾ ಟಂಡನ್, ಸಂಜಯ್ ದತ್ ಕನ್ನಡದ ಸಿನಿಮಾದಲ್ಲಿ ನಟಿಸಿರೋದು ವೀಕ್ಷಕರಿಗೆ ದೊಡ್ಡ ಖುಷಿಯ ವಿಚಾರ.
ಸಂಜಯ್ ಮತ್ತು ನಾನು ಹಳೆಯ ಕಾಲದಂತೆಯೇ ಸೆಟ್‌ನಲ್ಲಿ ಎಂಜಾಯ್ ಮಾಡಬಹುದು ಎಂದುಕೊಂಡಿದ್ದೆವು. ಆದರೆ ಬೇಸರದ ಸಂಗತಿ ಎಂದರೆ ನಾವು ಒಟ್ಟಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ನಮ್ಮ ಶೂಟಿಂಗ್ ಶೆಡ್ಯೂಲ್‌ಗಳು ಎಂದಿಗೂ ಒಟ್ಟಿಗೇ ಬಂದಿಲ್ಲ. ನಾವಿಬ್ಬರೂ ಒಟ್ಟಾಗಿ ಕಾಣಿಸಿಕೊಳ್ಳುವ ರೀತಿ ಮಾಡಿ ಎಂದು ಪ್ರಶಾಂತ್‌ಗೆ ವಿನಂತಿಸಿದ್ದೆವು. ಆದರೆ ಸ್ಕ್ರಿಪ್ಟ್‌ನಲ್ಲಿ ಅದಕ್ಕೆ ಎಲ್ಲಿಯೂ ಅವಕಾಶವಿಲ್ಲ ಎಂದು ಅವರು ಹೇಳಿದ್ದರು’ ಎಂದಿದ್ದಾರೆ.
‘ಕೆಜಿಎಫ್ 2’ನಲ್ಲಿ ಅಧೀರನಾಗಿ ಸಂಜಯ್ ದತ್ ಹಾಗೂ ಪ್ರಧಾನ ಮಂತ್ರಿ ರಮಿಕಾ ಸೇನ್ ಆಗಿ ರವೀನಾ ಟಂಡನ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರಿಂದ ಸ್ಫೂರ್ತಿ ಪಡೆದಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಇದು ಇಂದಿರಾ ಗಾಂಧಿ ಪಾತ್ರವಲ್ಲ ಎನ್ನುವ ಮೂಲಕ ರವೀನಾ ಟಂಡನ್ ಸ್ಪಷ್ಟನೆ ನೀಡಿದ್ದಾರೆ.
Read more…
[wpas_products keywords=”party wear dress for women stylish indian”]