Karnataka news paper

ಉತ್ತರ ಪ್ರದೇಶ ಚುನಾವಣೆ: ಕಾಂಗ್ರೆಸ್ ನ 41 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ, 16 ಮಹಿಳೆಯರಿಗೆ ಟಿಕೇಟ್ 


The New Indian Express

ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ 41 ಅಭ್ಯರ್ಥಿಗಳನ್ನೊಳಗೊಂಡ ಎರಡನೇ ಪಟ್ಟಿಯನ್ನು ಜ.20 ರಂದು ಬಿಡುಗಡೆ ಮಾಡಿದೆ.

ಎರಡನೇ ಪಟ್ಟಿಯಲ್ಲಿ 16 ಮಹಿಳೆಯರ ಹೆಸರನ್ನು ಕಾಂಗ್ರೆಸ್ ಘೋಷಣೆ ಮಾಡಿದ್ದು, ಪೂನಮ್ ಪಂಡಿತ್ ಅವರನ್ನು ಸ್ಯಾನ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸಲಾಗಿದೆ. ಪೂನಮ್ ಪಂಡಿತ್ ಅಂತಾರಾಷ್ಟ್ರೀಯ ಖ್ಯಾತಿಯ ಶೂಟರ್ ಆಗಿದ್ದು ಕೃಷಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಪ್ರಚಲಿತರಾಗಿದ್ದರು.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಶೇ.40 ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. 

ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್ ತನ್ನ ಭರವಸೆಯನ್ನು ಪೂರ್ಣಗೊಳಿಸಿದೆ. ಎರಡನೇ ಪಟ್ಟಿಯಲ್ಲಿ ಮೀಸಲು ಕ್ಷೇತ್ರವಾದ ಆಗ್ರಾ ಕಂಟೋನ್ಮೆಂಟ್ ನಿಂದ ಸಿಕಂದರ್ ವಾಲ್ಮೀಕಿ ಅವರನ್ನು ಕಣಕ್ಕೆ ಇಳಿಸಲಾಗಿದೆ. ವಾಲ್ಮೀಕಿ, ಅಖಿಲ ಭಾರತೀಯ ವಾಲ್ಮೀಕಿ ಮಹಾಸಭಾದ ಜಿಲ್ಲಾ ಅಧ್ಯಕ್ಷರಾಗಿದು, ಉತ್ತರ ಪ್ರದೇಶ ನಗರ ನಿಗಮ ಜಲ ಇಲಾಖೆಯ ಕರ್ಮಚಾರಿ ಸಂಘದ ರಾಜ್ಯಾಧ್ಯಕ್ಷರೂ ಆಗಿದ್ದಾರೆ.





Read more

[wpas_products keywords=”deal of the day”]