ಹೈಲೈಟ್ಸ್:
- ಅಂತ್ಯ ಸಂಸ್ಕಾರ ಸಿದ್ಧತೆಯಲ್ಲಿದ್ದಾಗ ಕಣ್ತೆರೆದ ವ್ಯಕ್ತಿ
- ಕಾಸರಗೋಡಿನ ಬದಿಯಡ್ಕದಲ್ಲಿ ನಡೆದ ಘಟನೆ
- ಕೂಡಲೇ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು, ಚೇತರಿಕೆ
ಬದಿಯಡ್ಕ ಸಮೀಪದ ವಾಂತಿಚ್ಚಾಲು ನಿವಾಸಿ ಗುರುವ(60) ಎಂಬವರನ್ನು ಕಳೆದ ಸೋಮವಾರ ಅಸೌಖ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಮಂಗಳೂರು ಆಸ್ಪತ್ರೆಯಲ್ಲಿಅವರನ್ನು ತೀವ್ರ ನಿಗಾ ವಿಭಾಗಕ್ಕೆ ದಾಖಲಿಸಲಾಗಿತ್ತು. 2-3 ದಿನಗಳ ಚಿಕಿತ್ಸೆ ನೀಡಿದ್ದರೂ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ.
ಕೊನೆಗೆ ವೈದ್ಯರು ರೋಗಿಯ ಆಕ್ಸಿಜನ್ ಸಂಪರ್ಕ ತೆಗೆಯುವುದಾಗಿಯೂ, ಅವರನ್ನು ಮನೆಗೆ ಕೊಂಡೊಯ್ಯುವಂತೆ ಸೂಚಿಸಿದರು. ಆಕ್ಸಿಜನ್ ನೀಡುವುದನ್ನು ನಿಲ್ಲಿಸಿದರೆ ಅರ್ಧ ಗಂಟೆಯೊಳಗೆ ಮೃತಪಡುತ್ತಾರೆಂದು ವೈದ್ಯರು ಹೇಳಿದ್ದರು. ಈ ಬಗ್ಗೆ ಊರಿಗೆ ಫೋನಾಯಿಸಿದ ಗುರುವ ಅವರ ಸಂಬಂಧಿಕರು, ಅಂತ್ಯ ಸಂಸ್ಕಾರ ಸಿದ್ಧತೆಗೆ ಸೂಚಿಸಿದ್ದರು. ಅಂತ್ಯಸಂಸ್ಕಾರದ ಸಿದ್ಧತೆ ನಡೆದು, ಸಂಬಂಧಿಕರು ವಾಂತಿಚ್ಚಾಲು ಮನೆಗೆ ಆಗಮಿಸತೊಡಗಿದರು.
`ಮೃತಪಟ್ಟಿದ್ದಾರೆ’ ಎಂದು ತಿಳಿದುಕೊಂಡಿದ್ದ ವ್ಯಕ್ತಿ ಅಂತ್ಯಕ್ರಿಯೆಯ ವೇಳೆ ಎದ್ದು ಕುಳಿತಿದ್ದರು…!
ಈ ಮಧ್ಯೆ ಆಂಬ್ಯುಲೆನ್ಸ್‌ನಲ್ಲಿ ಗುರುವ ಅವರನ್ನು ಕರೆತರುತ್ತಿದ್ದಾಗ ಉಪ್ಪಳ ತಲುಪಿದಾಗ ಅವರು ಕೈಕಾಲುಗಳನ್ನು ಅಲ್ಲಾಡಿಸುತ್ತಿದ್ದು, ಕಣ್ತೆರೆದಿದ್ದಾರೆ. ಅನಂತರ ಬದಿಯಡ್ಕಕ್ಕೆ ಕರೆ ತಂದು ಅಲ್ಲಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಪರಿಶೀಲಿಸಿದಾಗ ಗುರುವ ಇನ್ನೂ ಜೀವಂತವಾಗಿರುವುದಾಗಿ ತಿಳಿದುಬಂತು.
ಕೂಡಲೇ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ, ನಂತರ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ತೀವ್ರ ನಿಗಾ ಘಟಕದಲ್ಲಿಇರಿಸಲಾಯಿತು. ಇದೀಗ ತೀವ್ರ ನಿಗಾ ಘಟಕದಿಂದ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
Read more
[wpas_products keywords=”deal of the day sale today offer all”]