The New Indian Express
ಸಂತೋಷ್ ಆನಂದರಾಮ್ ನಿರ್ದೇಶನದ ರಾಘವೇಂದ್ರ ಸ್ಟೋರ್ಸ್ (1972 ರಿಂದ) ಸಿನಿಮಾದಲ್ಲಿ ನಟ ಜಗ್ಗೇಶ್ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಚಿತ್ರದ ನಾಯಕಿ ಶ್ವೇತಾ ಶ್ರೀವಾತ್ಸವ್ ಕೂಡ ನಟಿಸುತ್ತಿದ್ದಾರೆ.
ನಟಿ ಶ್ವೇತಾ ಡಿಸೆಂಬರ್ ನಿಂದಲೇ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.ಕಿರಗೂರಿನ ಗಯ್ಯಾಳಿಗಳು ಮತ್ತು ಹೋಪ್ ನಟಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದರೂ, ತಮ್ಮ ಸಿನಿಮಾ ಬಗ್ಗೆ ಎಲ್ಲಿಯೂ ಮಾಹಿತಿ ನೀಡಿರಲಿಲ್ಲ.
ಇದೇ ಮೊದಲ ಬಾರಿಗೆ ಶ್ವೇತಾ ಅವರು ಜಗ್ಗೇಶ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಇದು ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಹೊಂಬಾಳೆ ಫಿಲ್ಮ್ಸ್ ಜೊತೆಗಿನ ಅವರ ಮೊದಲ ಸಿನಿಮಾವಾಗಿದೆ. ಮೈಸೂರು, ಚಿಕ್ಕಮಗಳೂರು ಮತ್ತು ತೀರ್ಥಹಳ್ಳಿ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಚಿತ್ರೀಕರಣ ನಡೆಸಿದ್ದಾರೆ.
ಇದನ್ನೂ ಓದಿ: ರಾಘವೇಂದ್ರ ಸ್ಟೋರ್ಸ್ ಸಿನಿಮಾ ಸ್ಕ್ರಿಪ್ಟ್ ಗೆ ಮಂತ್ರಾಲಯದಲ್ಲಿ ದೊರೆತ ಪ್ರೇರಣೆ ಕಾರಣ: ನಟ ಜಗ್ಗೇಶ್
ಈ ಹಿಂದೆ ಸಿನಿಮಾ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದ ನಟ ಜಗ್ಗೇಶ್ ರಾಘವೇಂದ್ರ ಸ್ಟೋರ್ಸ್ ಬಗ್ಗೆ ಕೆಲ ಮಾಹಿತಿ ಹಂಚಿಕೊಂಡಿದ್ದರು. ಸಮಾಜದ ಕೌಟುಂಬಿಕ ಸಮಸ್ಯೆಗಳನ್ನು ಪ್ರತಿಬಿಂಬಿಸುವ ವಿಷಯವಾಗಿದೆ ಮತ್ತು ಚಿತ್ರವು ಎಲ್ಲಾ ವಯಸ್ಸಿನ ಪ್ರೇಕ್ಷಕರನ್ನು ರಂಜಿಸಲಿದೆ ಎಂದು ಹೇಳಿದ್ದರು.
Read more…
[wpas_products keywords=”party wear dress for women stylish indian”]