Karnataka news paper

40 ಕಿ.ಮೀ.ವರೆಗೂ ಆಂಬ್ಯುಲೆನ್ಸ್ ಗೆ ದಾರಿಬಿಟ್ಟು ಕೊಡದೆ ಉದ್ಧಟತನ : ಮಂಗಳೂರಿನ ಕಾರು ಚಾಲಕನ ಬಂಧನ


ಹೈಲೈಟ್ಸ್‌:

  • ಆಂಬ್ಯುಲೆನ್ಸ್ ಗೆ ದಾರಿಬಿಟ್ಟು ಕೊಡದೆ ಯುವಕನ ಉದ್ಧಟತನ
  • ಮಂಗಳೂರಿನ ಪೊಲೀಸರಿಂದ ಕಾರು ಚಾಲಕನ ಬಂಧನ
  • ಸುಮಾರು 40 ಕಿ.ಮೀ.ವರೆಗೂ ಆಂಬ್ಯುಲೆನ್ಸ್ ಗೆ ದಾರಿ ಕೊಡದ ಯುವಕ

ಮಂಗಳೂರು : ಮಂಗಳೂರಿನಿಂದ ಭಟ್ಕಳಕ್ಕೆ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಗೆ ದಾರಿಬಿಟ್ಟು ಕೊಡದೆ ಕಾರು ಚಾಲಕನೊಬ್ಬ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಹುಚ್ಚಾಟ ಮೆರೆದ ಘಟನೆ ಬುಧವಾರ ಸಂಜೆ ನಡೆದಿದ್ದು, ಕಾರು ಚಾಲಕ ಅತ್ತಾವರ ನಿವಾಸಿ ಮೌನೀಶ್‌ ಎಂಬಾತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ನಗರದ ಫಾದರ್‌ ಮುಲ್ಲರ್‌ ಆಸ್ಪತ್ರೆಯಿಂದ ರೋಗಿಯನ್ನು ಬುಧವಾರ ಸಂಜೆ ಭಟ್ಕಳಕ್ಕೆ ಮತ್ತೊಂದು ಖಾಸಗಿ ಆಸ್ಪತ್ರೆಗೆ ಸೇರಿದ ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯುಲಾಗುತ್ತಿತ್ತು. ಈ ಆಂಬ್ಯುಲೆನ್ಸನ್ನು ಬೆಳ್ತಂಗಡಿ ಚಾಲಕ ಅಯೂಬ್‌ ಎಂಬವರು ಚಲಾಯಿಸುತ್ತಿದ್ದರು. ಮಂಗಳೂರಿನಿಂದ ಹೊರಟ ಆಂಬ್ಯುಲೆನ್ಸ್‌ ಮೂಲ್ಕಿ ತಲುಪಿದಾಗ ಒಂದು ಕಾರು ಓವರ್‌ಟೇಕ್‌ ಮಾಡಿತ್ತು. ಆ ಬಳಿಕ ಎಲ್ಲೂ ಸೈಡ್‌ ಬಿಟ್ಟುಕೊಡದೆ ಉಡುಪಿಯವರೆಗೂ ಕಾರು ಚಾಲಕ ಹುಚ್ಚಾಟ ಮೆರೆದಿದ್ದ.

ಸುಮಾರು 40 ಕಿ.ಮೀ.ವರೆಗೂ ಕಾರು ಚಾಲಕನು ಸೈಡ್‌ ನೀಡದೆ ತೊಂದರೆ ನೀಡಿದ್ದು, ಕಾರಿನಲ್ಲಿ ಇನ್ನೊಬ್ಬ ಪ್ರಯಾಣಿಕನಿದ್ದ. ಇದನ್ನು ಆಂಬ್ಯುಲೆನ್ಸ್‌ನಲ್ಲಿದ್ದವರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಇದು ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕಾರು ಚಾಲಕನನ್ನು ಬಂಧಿಸಿದ್ದಾರೆ.

ನಂಜನಗೂಡಿನಲ್ಲಿ ಹುರುಳಿ ಒಕ್ಕಣೆ ಎಫೆಕ್ಟ್: ನಡುರಸ್ತೆಯಲ್ಲಿ ಆಂಬ್ಯುಲೆನ್ಸ್‌ನಲ್ಲೇ ಗಂಟೆಗಟ್ಟಲೆ ನರಳಾಡಿದ ಗರ್ಭಿಣಿ..

ಕಾರು ಚಾಲಕ ಆಂಬ್ಯುಲೆನ್ಸ್‌ಗೆ ದಾರಿ ಬಿಟ್ಟುಕೊಡದೆ ಕೈ ಸನ್ನೆ ಮಾಡುತ್ತಾ ವಿಚಿತ್ರವಾಗಿ ವರ್ತಿಸುತ್ತಿದ್ದ. ಆದಾಗ್ಯೂ ಐಸಿಯು ಆಂಬ್ಯುಲೆಸ್ಸ್‌ನ ವೆಂಟಿಲೇಟರ್‌ನಲ್ಲಿದ್ದ ರೋಗಿಯನ್ನು 1 ಗಂಟೆ 40 ನಿಮಿಷದಲ್ಲಿ ತಲುಪಿಸಿದ್ದೇನೆ. ಇದೇ ಕಾರಿನ ಚಾಲಕ ಬುಧವಾರ ರಾತ್ರಿಯ ವೇಳೆ ಉಡುಪಿಯಿಂದ ಮಂಗಳೂರಿಗೆ ರೋಗಿಯನ್ನು ಕರೆದು ತರುತ್ತಿದ್ದ ಇನ್ನೊಂದು ಆಂಬ್ಯುಲೆನ್ಸ್‌ಗೆ ಅಡ್ಡಿಪಡಿಸಿದ ಬಗ್ಗೆಯೂ ಹೇಳಲಾಗಿದೆ. ಈ ವಿಚಾರವನ್ನು ಮಂಗಳೂರು ಪೊಲೀಸರ ಅಂಬ್ಯುಲೆನ್ಸ್‌ ಚಾಲಕ ತಂದಿದ್ದಾರೆ.

ತುರ್ತು ಸೇವೆಯ ಆ್ಯಂಬುಲೆನ್ಸ್‌ಗೆ ಅಡ್ಡಿಪಡಿಸಿದ ಕಾರು ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲು ಆಂಬ್ಯುಲೆಸ್ಸ್‌ ಚಾಲಕರು ಆಗ್ರಹಿಸಿದ್ದಾರೆ. ಈ ಬಗ್ಗೆ ಆಂಬ್ಯುಲೆನ್ಸ್‌ ಚಾಲಕ ಮಂಗಳೂರು ಉತ್ತರ ಸಂಚಾರಿ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹುಚ್ಚಾಟ ನಡೆಸಿದ ಕಾರು ಚಾಲಕ ಮೌನೀಶ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.



Read more

[wpas_products keywords=”deal of the day sale today offer all”]