Online Desk
ಮಂಡ್ಯ: ಪಟ್ಟಣದ ಟಿಪ್ಪು (ಜಾಮಿಯಾ) ಮಸೀದಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಮಂಗಳವಾರದಿಂದ ನ್ಯಾಯಾಂಗ ಬಂಧನದಲ್ಲಿದ್ದ ಅರಸೀಕರೆಯ ಕಾಳಿಕಾಶ್ರಮದ ಋಷಿಕುಮಾರ ಸ್ವಾಮೀಜಿ ಅವರಿಗೆ ಪಟ್ಟಣದ ಹೆಚ್ಚುವರಿ ಕಿರಿಯ ಶ್ರೇಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ.
1 ಲಕ್ಷ ರು. ಮೌಲ್ಯದ ಬಾಂಡ್ ಜತೆಗೆ, ಪ್ರಕರಣದ ಸಾಕ್ಷಿಗಳನ್ನು ಬೆದರಿಸಬಾರದು ಎಂಬ ಷರತ್ತು ವಿಧಿಸಿ ನ್ಯಾಯಾಧೀಶರಾದ ಆಯೇಷಾ ಪಿ.ಮಜೀದ್ ಜಾಮೀನು ಮಂಜೂರು ಮಾಡಿದ್ದಾರೆ. ಕೋಮು ಸಾಮರಸ್ಯ ಕದಡುವ ಹೇಳಿಕೆ ನೀಡಿದ್ದ ಆರೋಪದ ಮೇಲೆ ಪಟ್ಟಣ ಠಾಣೆ ಪೊಲೀಸರು ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಿ ಮಂಗಳವಾರ ಬಂಧಿಸಿದ್ದರು.
ಜೈಲಿನಿಂದ ಬಿಡುಗಡೆ ಆದ ಕಾಳಿ ಸ್ವಾಮೀಜಿಗೆ ಅದ್ಧೂರಿ ಸ್ವಾಗತ ದೊರಕಿದೆ. ಹಾರ ಹಾಕಿ ಕಾಳಿ ಸ್ವಾಮಿ ಪರ ಘೋಷಣೆ ಕೂಗಿ ಸ್ವಾಗತ ಮಾಡಲಾಗಿದೆ.
ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವುವಂತೆ ಕಾಳಿ ಸ್ವಾಮೀಜಿ ಬಿಡುಗಡೆ ಮಾಡಿದ್ದ ವಿವಾದಾತ್ಮಕ ವಿಡಿಯೋ ಹಿನ್ನೆಲೆಯಲ್ಲಿ ಸಮಾಜದಲ್ಲಿ ಕೋಮುಸೌಹಾರ್ದತೆ ಹಾನಿ ಆಗುವ ನಿಟ್ಟಿನಲ್ಲಿ ಪೊಲೀಸರು ಸ್ವಾಮೀಜಿಯನ್ನು ವಶಕ್ಕೆ ಪಡೆದಿದ್ದರು.
Read more
[wpas_products keywords=”deal of the day”]