Karnataka news paper

ಗೋವಾದಲ್ಲಿ ಬಿಜೆಪಿಗೆ ಟಕ್ಕರ್ ನೀಡಲು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸಿದ್ಧತೆ: ರಾಜ್ಯಾದ್ಯಂತ ಪ್ರವಾಸ


Source : The New Indian Express

ಪಣಜಿ: ತೀರಾ ಇತ್ತೀಚಿನವರೆಗೂ ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ ಅಸ್ತಿತ್ವವನ್ನೇ ಹೊಂದಿರಲಿಲ್ಲ. ಆದರೀಗ ಪರಿಸ್ಥಿತಿ ಬದಲಾಗಿದೆ. ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ. 

ಇದನ್ನೂ ಓದಿ: ಗೋವಾ ಚುನಾವಣೆ: ಮಹಿಳೆಯರ ಖಾತೆಗೆ ಪ್ರತಿ ತಿಂಗಳು 5000 ರೂ. ನಗದು ವರ್ಗಾವಣೆ- ಟಿಎಂಸಿ ಘೋಷಣೆ

ಮಮತಾ ಬ್ಯಾನರ್ಜಿ ಸೋಮವಾರ ಗೋವಾ ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಿದ್ದಾರೆ. ಪ್ರವಾಸ ಸಂದರ್ಭ ಸ್ಥಳೀಯ ನಾಯಕರು, ಪ್ರಮುಖರನ್ನು ಭೇಟಿ ಮಾಡಲಿದ್ದಾರೆ. 

ಇದನ್ನೂ ಓದಿ: ಕುಳಿತೆ ರಾಷ್ಟ್ರಗೀತೆಯನ್ನು ಆರಂಭಿಸಿ, ಅರ್ಧಂಬರ್ಧ ಹಾಡಿದ ಮಮತಾ ಬ್ಯಾನರ್ಜಿ: ವಿಡಿಯೋ ಕುರಿತು ರಾಜಕೀಯ ನಾಯಕರ ವ್ಯಂಗ್ಯ

ಅಸ್ತಿತ್ವವೇ ಇಲ್ಲದ ಪಕ್ಷ ಟಿಎಂಸಿ ಯಾವ ರೀತಿ ಚುನಾವಣೆಗೆ ಸಜ್ಜುಗೊಳ್ಳಲಿದೆ, ಬಿಜೆಪಿಗೆ ಸವಾಲು ಒಡ್ಡಲಿದೆ ಎನ್ನುವುದು ಕುತೂಹಲದ ವಿಷಯವಾಗಿದೆ. ಗೋವಾಗೆ ಇದು ಮಮತಾರ ಎರಡನೇ ಪ್ರವಾಸವಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ತೊರೆದ ಗೋವಾ ಮಾಜಿ ಸಿಎಂ ಬಿಜೆಪಿಗೆ ಸೇರ್ಪಡೆ? 



Read more