ಅರ್ಜಿದಾರರಿಗೆ 2006ರಲ್ಲಿ ಅರ್ಕಾವತಿ ಬಡಾವಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕೋಟಾದಲ್ಲಿ ನಿವೇಶನ ಸಂಖ್ಯೆ 589 ಹಂಚಿಕೆಯಾಗಿತ್ತು. ಅವರು 7,58,500 ರೂ. ಪಾವತಿಸಬೇಕಿತ್ತು. ಅವರು 2006ರ ಆ.14ರಂದು 3.65 ಲಕ್ಷ ಪಾವತಿಸಿದ್ದರು ಮತ್ತು 2006ರ ಅ.11ರಂದು 1 ಲಕ್ಷ ಪಾವತಿಸಿದ್ದರು. ಉಳಿದ ಹಣ ಪಾವತಿಸಿರಲಿಲ್ಲ. ಹಾಗಾಗಿ ಬಿಡಿಎ 2009ರ ಆ.5ರಂದು ನೋಟಿಸ್ ನೀಡಿ, ಉಳಿದ ಹಣ ಪಾವತಿಸದೇ ಇರುವುದಕ್ಕೆ ನಿವೇಶನ ಹಂಚಿಕೆಯನ್ನು ಏಕೆ ರದ್ದುಗೊಳಿಸಬಾರದು ಎಂದು ಕೇಳಿತ್ತು. ಆನಂತರ 2009ರ ನ.13 ರಂದು ಅವರು ಪಾವತಿಸಿದ್ದ ಹಣ ವಾಪಸ್ ನೀಡಿ ನಿವೇಶನ ಹಂಚಿಕೆ ರದ್ದುಗೊಳಿಸಿತು. ಆದರೆ ಆ ಹಣವನ್ನು ಮತ್ತೆ ಬಿಡಿಎ ಖಾತೆಗೆ ಮರು ಠೇವಣಿ ಮಾಡಿದ್ದಾಗಿ ಅವರು ಹೇಳಿದ್ದಾರೆ.
ಆನಂತರ ಅರ್ಜಿದಾರರಾದ ಲತಾ, ಬಿಡಿಎ ನಿವೇಶನ ಹಂಚಿಕೆ ರದ್ದುಗೊಳಿಸಿರುವುದನ್ನು ಪ್ರಶ್ನಿಸಿದ್ದರು. ಜತೆಗೆ ಸಣ್ಣ ನಿವೇಶನದಾರರಿಗೆ ಮೂರು ವರ್ಷಗಳಲ್ಲಿ ಕಂತುಗಳಲ್ಲಿ ಹಣ ಪಾವತಿಗೆ ಅವಕಾಶ ಕಲ್ಪಿಸುವ ಬಿಡಿಎ ನಿಯಮ 13(1)ರ ಸಿಂಧುತ್ವವನ್ನು ಪ್ರಶ್ನಿಸಿದ್ದರು. ಆದರೆ ಏಕಸದಸ್ಯ ಪೀಠ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಮೇಲ್ಮನವಿ ಸಲ್ಲಿಸಿದ್ದರು.
Read more
[wpas_products keywords=”deal of the day sale today offer all”]