
ಬೀರತ್: ಇಸ್ಲಾಮಿಕ್ ಸ್ಟೇಟ್ ಸಮೂಹದ ಉಗ್ರರು ಸಿರಿಯಾದ ಜೈಲೊಂದಕ್ಕೆ ಗುರುವಾರ ನುಗ್ಗಿ ಅಲ್ಲಿದ್ದ ಜಿಹಾದಿಗಳನ್ನು ಬಿಡಿಸಿಕೊಂಡು ಪರಾರಿಯಾಗಿದ್ದಾರೆ.
ಖುರ್ದಿಶ್ ಆಡಳಿತದ ಜೈಲಿಗೆ ನುಗ್ಗಿರುವ ಉಗ್ರರು, ತಮ್ಮ ಸಹಚರರನ್ನು ಅಲ್ಲಿಂದ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಎಷ್ಟು ಉಗ್ರರು ಪರಾರಿಯಾಗಿದ್ದಾರೆ ಎನ್ನುವ ಕುರಿತು ಮಾಹಿತಿ ಲಭ್ಯವಾಗಿಲ್ಲ ಎಂದು ವಾರ್ ಮಾನಿಟರ್ ಹೇಳಿದೆ.
ಜೈಲಿನ ಗೇಟಿನ ಮುಂಭಾಗದಲ್ಲಿ ಕಾರ್ ಬಾಂಬ್ ಒಂದನ್ನು ಸ್ಫೋಟಿಸಲಾಗಿದೆ. ಬಳಿಕ ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ನಡೆಸಿ, ನಂತರ ಮತ್ತೊಂದು ಬಾಂಬ್ ಅನ್ನು ಜೈಲಿನ ಗೋಡೆಯ ಬಳಿ ಉಗ್ರರು ಸ್ಫೋಟಿಸಿದ್ದಾರೆ.
ಅದಾದ ಬಳಿಕ ಇಸ್ಲಾಮಿಕ್ ಸ್ಟೇಟ್ ಉಗ್ರರು ಜೈಲಿನಲ್ಲಿದ್ದ ತಮ್ಮವರನ್ನು ಕರೆದುಕೊಂಡು ಪರಾರಿಯಾಗಿದ್ದಾರೆ.
ಧರ್ಮನಿಂದನೆಯ ಮೆಸೇಜ್ ಕಳುಹಿಸಿದ ಪಾಕ್ ಮಹಿಳೆಗೆ ಮರಣದಂಡನೆ ಶಿಕ್ಷೆ
ದಾಳಿ ನಡೆದಿರುವುದನ್ನು ಖುರ್ದಿಶ್ ನೇತೃತ್ವದ ಸಿರಿಯನ್ ಡೆಮಾಕ್ರಟಿಕ್ ಫೋರ್ಸ್ ದೃಢಪಡಿಸಿ ಹೇಳಿಕೆ ನೀಡಿದೆ. ಆದರೆ ಜೈಲಿನಲ್ಲಿದ್ದ ಕೈದಿಗಳು ಪರಾರಿಯಾಗಿರುವುದನ್ನು ಬಹಿರಂಗಪಡಿಸಿಲ್ಲ.
Read more from source
[wpas_products keywords=”deals of the day offer today electronic”]