The New Indian Express
2020 ರ ದೆಹಲಿ ಗಲಭೆ ಪ್ರಕರಣದಲ್ಲಿ ಮನೆಗೆ ಬೆಂಕಿ ಹಚ್ಚಿದ್ದ ಅಪರಾಧಿಗೆ ದೆಹಲಿ ಕೋರ್ಟ್ ಜ.20 ರಂದು 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಕಳೆದ ತಿಂಗಳು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾಗಿದ್ದ ವಿರೇಂದ್ರ ಭಟ್ ಅವರು ವ್ಯಕ್ತಿಯೋರ್ವ ಗಲಭೆಯ ಗುಂಪಿನಲ್ಲಿ ಭಾಗಿಯಾಗಿದ್ದು ಸಾಬೀತಾಗಿದೆ ಎಂದು ತೀರ್ಪು ಪ್ರಕಟಿಸಿದ್ದರು. ಈ ಗುಂಪು ಗಲಭೆ ವೇಳೆ ಮನೆಯೊಂದಕ್ಕೆ ಬೆಂಕಿ ಹಚ್ಚಿತ್ತು.
ಸಿಎಎ, ಎನ್ಆರ್ ಸಿ ಜಾರಿಯ ಸಂದರ್ಭದಲ್ಲಿ ನಡೆದಿದ್ದ ಗಲಭೆಯ ಪ್ರಕರಣಗಳಲ್ಲಿ ಇದು ಮೊದಲ ತೀರ್ಪಾಗಿದೆ. ಅಪರಾಧಿ ಯಾದವ್ ಗೆ 12,000 ರೂಪಾಯಿ ದಂಡ ಹಾಕಲಾಗಿದೆ. ಶಿಕ್ಷೆಯ ಪ್ರಮಾಣದ ಸಂಬಂಧ ವಿವರವಾದ ತೀರ್ಪು ಇನ್ನಷ್ಟೇ ಲಭ್ಯವಾಗಬೇಕಿದೆ.
Read more
[wpas_products keywords=”deal of the day”]