Karnataka news paper

ಖಾಸಗಿ ಕ್ಷಣದ ಪೋಟೋಗಳನ್ನು ಇಟ್ಟುಕೊಂಡು ಗೆಳತಿಗೆ ಬ್ಲ್ಯಾಕ್‌ಮೇಲ್‌ : ಬೆಂಗಳೂರಿನ ವ್ಯಕ್ತಿ ಬಂಧನ


ಹೈಲೈಟ್ಸ್‌:

  • ಖಾಸಗಿ ಪೋಟೋಗಳನ್ನು ಇಟ್ಟುಕೊಂಡು ಗೆಳತಿಗೆ ಬ್ಲ್ಯಾಕ್‌ಮೇಲ್‌
  • ಮ್ಯಾಟ್ರಿಮೋನಿ ವೆಬ್‌ಸೈಟ್‌ಯಲ್ಲಿ ಪರಿಚಯವಾಗಿದ್ದ ಯುವತಿಗೆ ಮೋಸ
  • ಆರೋಪಿಯನ್ನು ಬಂಧಿಸಿದ ಬೆಂಗಳೂರು ಈಶಾನ್ಯ ವಿಭಾಗದ ಸಿಇಎನ್‌ ಪೊಲೀಸರು

ಬೆಂಗಳೂರು : ಮ್ಯಾಟ್ರಿಮೋನಿ ವೆಬ್‌ಸೈಟ್‌ಯಲ್ಲಿ ಪರಿಚಯವಾಗಿದ್ದ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗಿದ್ದ ಖಾಸಗಿ ಪೋಟೊಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸಿಇಎನ್‌ ಪೊಲೀಸರು ಬಂಧಿಸಿದ್ದಾರೆ.

ರಾಜಾಜಿನಗರದ ನಿವಾಸಿ ವಿಜಯ್‌ ಕುಮಾರ್‌ ಬಂಧಿತ. ಕೆಲ ತಿಂಗಳ ಹಿಂದೆ ಯುವತಿಯು ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಳು. ಯುವತಿಯರಿಗೆ ವಂಚಿಸುವ ಉದ್ದೇಶದಿಂದಲೇ ಬಂಧಿತ ಆರೋಪಿ ಕೂಡ ನೋಂದಾಯಿಸಿದ್ದ. ವೆಬ್‌ಸೈಟ್‌ನಲ್ಲಿ ಇಬ್ಬರ ಪರಿಚಯವಾಗಿ ಇಬ್ಬರ ನಡುವೆ ಸಲುಗೆ ಬೆಳೆದಿತ್ತು ಎಂದು ಪೊಲೀಸರು ತಿಳಿಸಿದರು.

ಸಲುಗೆಯಿಂದ ಇದ್ದ ಇಬ್ಬರು ಆಗಾಗ ಭೇಟಿಯಾಗುತ್ತಿದ್ದರು. ಕೆಲ ದಿನಗಳ ಬಳಿಕ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಈ ವೇಳೆ, ಯುವತಿಯೊಂದಿಗೆ ಏಕಾಂಗಿಯಾಗಿದ್ದಾಗ ಆರೋಪಿ ತನ್ನ ಮೊಬೈಲ್‌ನಲ್ಲಿ ಕೆಲ ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದ. ಬಳಿಕ ಇದೇ ಫೋಟೊಗಳನ್ನು ಇಟ್ಟುಕೊಂಡು ಯುವತಿಗೆ ಹಣ ನೀಡುವಂತೆ ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ.

ಮದ್ಯ, ಡ್ರಗ್ಸ್‌ ಖರೀದಿಗೆ ವರದಕ್ಷಿಣೆ ತರುವಂತೆ ಪತಿಯಿಂದ ಪತ್ನಿಗೆ ಬ್ಲ್ಯಾಕ್‌ಮೇಲ್‌..!

ಇದಕ್ಕೆ ಸೊಪ್ಪು ಹಾಕದಿದ್ದರಿಂದ ಯುವತಿಯ ಹೆಸರಿನಲ್ಲಿ ಇನ್‌ಸ್ಟಾಗ್ರಾಮ್‌ ಖಾತೆ ತೆರೆದು ಫೋಟೊಗಳನ್ನು ಅಪ್‌ಲೋಡ್‌ ಮಾಡಿದ್ದ. ಇದರಿಂದ ಆತಂಕಗೊಂಡ ಯುವತಿಯು ಆರೋಪಿಗೆ 50 ಸಾವಿರ ರೂಪಾಯಿ ನೀಡಿ, ನಕಲಿ ಖಾತೆ ಡಿಲೀಟ್‌ ಮಾಡುವಂತೆ ಹೇಳಿದರೂ ಮತ್ತೆ ಹೆಚ್ಚು ಹಣ ನೀಡುವಂತೆ ಬೆದರಿಸುತ್ತಿದ್ದ.

ಹಣ ನೀಡದಿದ್ದರೆ ಕುಟುಂಬಸ್ಥರಿಗೆ ಹಾಗೂ ಸಂಬಂಧಿಕರ ಪ್ರೊಫೈಲ್‌ಗಳಿಗೆ ಫೋಟೋ ಟ್ಯಾಗ್‌ ಮಾಡುವುದಾಗಿ ಹೆದರಿಸುತ್ತಿದ್ದ. ಹೀಗಾಗಿ, ಯುವತಿ ಈ ಸಂಬಂಧ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಳು. ದೂರಿನನ್ವಯ ಆರೋಪಿಯನ್ನು ವಿದ್ಯಾರಣ್ಯಪುರದಲ್ಲಿ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.



Read more

[wpas_products keywords=”deal of the day sale today offer all”]