The New Indian Express
ತುಮಕೂರು: ಸರಿಯಾಗಿ ವ್ಯಾಸಂಗ ಮಾಡದ 7 ವರ್ಷದ ವಿದ್ಯಾರ್ಥಿಗೆ 2011ರಲ್ಲಿ ಕಠಿಣ ಶಿಕ್ಷೆ ವಿಧಿಸಿದ್ದಕ್ಕಾಗಿ ಆಕೆ ತನ್ನ ಎಡಗಣ್ಣಿನ ದೃಷ್ಟಿ ಕಳೆದುಕೊಂಡಿದ್ದಳು, ಈ ಹಿನ್ನೆಲೆಯಲ್ಲಿ ಖಾಸಗಿ ಶಾಲೆಯೊಂದರ ಶಿಕ್ಷಕಿಗೆ ಮೂರು ಜೈಲು ಶಿಕ್ಷೆ ಮತ್ತು 10 ಸಾವಿರ ರು. ದಂಡ ವಿಧಿಸಿ ಇಲ್ಲಿನ ಮೂರನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ತುಮಕೂರಿನ ಭಾರತ್ ಮಾತಾ ಶಾಲೆಯ ಶಿಕ್ಷಕಿ ರಹತ್ ಫಾತಿಮಾ ಅವರಿಗೆ ಶಿಕ್ಷೆ ವಿಧಿಸಲಾಗಿದೆ. ಫೆಬ್ರವರಿ 17 2011 ರಂದು ಸರಿಯಾಗಿ ಓದುತ್ತಿಲ್ಲವೆಂಬ ಕಾರಣಕ್ಕೆ ಶಿಕ್ಷಕಿ ಬಾಲಕಿಗೆ ಕೋಲಿನಿಂದ ಹೊಡೆದಿದ್ದರು, ಇದರಿಂದ ಬಾಲಕಿಯ ಎಡಗಣ್ಣಿಗೆ ಗಾಯವಾಗಿತ್ತು.
ಕೂಲಿ ಕಾರ್ಮಿಕನ ಮಗಳಾಗಿದ್ದ ಬಾಲಕಿ ಈಗ ಪ್ರಥಮ ಪಿಯುಸಿ ಓದುತ್ತಿದ್ದಾಳೆ. ಆಕೆಗೆ ಹಲವು ಬಾರಿ ಚಿಕಿತ್ಸೆ ನೀಡಿದರೂ ದೃಷ್ಟಿ ಬರಲಿಲ್ಲ. ಈ ಸಂಬಂಧ ತಿಲಕ್ ಪಾರ್ಕ್ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿ ತನಿಖೆ ಕೈಗೊಂಡಿದ್ರು.
Read more
[wpas_products keywords=”deal of the day”]