ಹೈಲೈಟ್ಸ್:
- ಬೆಳಗಾವಿ ಸುವರ್ಣಸೌಧದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ
- ನಾನು ಮುಖ್ಯಮಂತ್ರಿಯಾದರೆ ಕರ್ನಾಟಕದ ಇತಿಹಾಸವೇ ಬದಲಾವಣೆ ಆಗುತ್ತದೆ
- ಮುಖ್ಯಮಂತ್ರಿ ಬದಲಾವಣೆ ಕಾಂಗ್ರೆಸ್ ಸೃಷ್ಟಿಸಿರುವ ಸುದ್ದಿ, ಅಂತಹ ಸೂಚನೆ ಇಲ್ಲ
- ಭ್ರಷ್ಟಾಚಾರದ ಜನಕ ಹೋಗಿದ್ದಾರೆ, ಸೂಪರ್ ಸಿಎಂ ವೇಳೆ ಇದ್ದ ಭ್ರಷ್ಟಾಚಾರ ಈಗ ಇಲ್ಲ
ಸುವರ್ಣಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ವಿಚಾರವಾಗಿ ಮಾಹಿತಿ ಇಲ್ಲ. ಸಚಿವ ಸಂಪುಟದಲ್ಲಿ ಬದಲಾವಣೆ ಆಗುತ್ತೆ ಎಂದು ಕೇಳಿದ್ದೇನೆ ಅಷ್ಟೇ. ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಬರುತ್ತೆ. ಮುಂದಿನ ಕಾರ್ಯಕ್ರಮ ಶುರುವಾಗುತ್ತೆ ಎಂದು ಮಾರ್ಮಿಕವಾಗಿ ಹೇಳಿದರು.
ಬೆಳಗಾವಿ ಅಧಿವೇಶನಕ್ಕೆ ಶಾಸಕರ ನಿರಾಸಕ್ತಿ, ಮೊದಲ ದಿನ ಕೇವಲ 80 ಶಾಸಕರಷ್ಟೇ ಹಾಜರ್!
ರಾಜಕೀಯದಲ್ಲಿ ವಂಶಪಾರಂಪರ್ಯಕ್ಕೆ ಮನ್ನಣೆ ಕೊಡಬಾರದು. ಹಂತ ಹಂತವಾಗಿ ಹೈಕಮಾಂಡ್ ಇದನ್ನು ಮುಕ್ತ ಮಾಡುತ್ತೆ. ಮುಖ್ಯಮಂತ್ರಿ ಬದಲಾವಣೆ ಕಾಂಗ್ರೆಸ್ ಸೃಷ್ಟಿಸಿದ ಸುದ್ದಿ. ಅಂತಹ ಯಾವುದೇ ಲಕ್ಷಣ ಇಲ್ಲ ಎಂದು ತಿಳಿಸಿದರು.
ಬಸವರಾಜ ಬೊಮ್ಮಾಯಿ ಆಡಳಿತದಲ್ಲಿ ತೃಪ್ತಿ ಇದೆಯೇ ಪ್ರಶ್ನೆಗೆ ಅವರು, ತೃಪ್ತಿ- ಅತೃಪ್ತಿ ಇನ್ನು ಗೊತ್ತಾಗುತ್ತದೆ. ಭ್ರಷ್ಟಾಚಾರದ ಜನಕ ಹೋಗಿದ್ದಾರೆ. ಹೀಗಾಗಿ ಈಗ ಭ್ರಷ್ಟಾಚಾರ ಕಡಿಮೆ ಆಗುತ್ತಿದೆ. ಸೂಪರ್ ಸಿಎಂ ಇದ್ದಾಗಿನ ಪ್ರಮಾಣದಲ್ಲಿ ಭ್ರಷ್ಟಾಚಾರ ಇಲ್ಲ ಎಂದು ಬಿಎಸ್ ಯಡಿಯೂರಪ್ಪ ಮತ್ತು ಅವರ ಮಗ ಬಿವೈ ವಿಜಯೇಂದ್ರ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಕುಟುಕಿದರು.
ಬಿಜೆಪಿ ತರುವ ಮಸೂದೆಗಳನ್ನು ವಿರೋಧ ಮಾಡೋದೆ ಸಿದ್ದರಾಮಯ್ಯ ಸ್ವಭಾವ : ಬಿಎಸ್ ಯಡಿಯೂರಪ್ಪ
ರಾಜ್ಯದಲ್ಲಿ ಸಿವಿಲ್ ಕಾಮಗಾರಿಗಳ ಮಂಜೂರಾತಿಗೆ ಶೇ 40ರಷ್ಟು ಕಮಿಷನ್ ನೀಡಬೇಕಾಗಿದೆ. ಇದರಿಂದ ಗುಣಮಟ್ಟದ ಕೆಲಸ ಮಾಡಲು ಸಾಧ್ಯವೇ? ಎಂದು ರಾಜ್ಯಪಾಲರಿಗೆ ಗುತ್ತಿಗೆದಾರರರು ಪತ್ರ ಬರೆದ ಪ್ರಸಂಗಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಗುತ್ತಿಗೆದಾರರು ಈಗ ಪತ್ರ ಬರೆದಿರುವುದಲ್ಲ. ಈ ಹಿಂದೆ ಅವರು ಭಯದಲ್ಲಿ ಇದ್ದರು, ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ನಿರ್ಭೀತಿಯಿಂದ ರಾಜ್ಯಪಾಲರಿಗೆ ಮನವಿ ಕೊಟ್ಟಿದ್ದಾರೆ ಎಂದರು.
ಸಂಪುಟ ಪುನಾರಚನೆಯ ಚರ್ಚೆ ವಿಚಾರವಾಗಿ ಮಾತನಾಡಿದ ಯತ್ನಾಳ್, ಸಂಪುಟದಲ್ಲಿ ಯಾರು ನಿಷ್ಕ್ರಿಯರಾಗಿ ಇದ್ದಾರೆಯೋ ಅವರನ್ನು ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ತಾವು ಮುಖ್ಯಮಂತ್ರಿ ಆಗುವ ಕಾಲ ಮುಂದೆ ಒಮ್ಮೆ ಬಂದೇ ಬರುತ್ತದೆ. ಯತ್ನಾಳ್ ಸಮಯ ಮುಗಿಯಿತು ಎನ್ನುವ ಭ್ರಮೆ ಇದ್ದರೆ ಅದನ್ನು ತಲೆಯಿಂದ ತೆಗೆಯಿರಿ. ಸಿಎಂ ಮಾಡಿ ಎಂದು ದಿಲ್ಲಿಗೆ ಹೋಗಿಲ್ಲ. ಯಾರನ್ನೂ ಕೇಳಿಲ್ಲ ಎಂದು ಕೆಲವು ತಿಂಗಳ ಹಿಂದೆ ಯತ್ನಾಳ್ ಹೇಳಿದ್ದರು.