PTI
ವಿಶ್ವಸಂಸ್ಥೆ: ಭಾರತಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಶೇ.26 ರಷ್ಟು ಕುಸಿತ ಕಂಡುಬಂಡಿದೆ.
ವಿಶ್ವಸಂಸ್ಥೆಯ ವರದಿಯ ಪ್ರಕಾರ 2021 ರ ಅವಧಿಯಲ್ಲಿ ಶೇ.26 ರಷ್ಟು ಕುಸಿತ ದಾಖಲಾಗಿರುವುದು ಉಲ್ಲೇಖಗೊಂಡಿದ್ದು 2020 ರಲ್ಲಿ ದಾಖಲೆಯಾಗಿದ್ದ ಎಂ&ಎ ಡೀಲ್ ಗಳು ಪುನರಾವರ್ತನೆಯಾಗದೇ ಇರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ಬುಧವಾರದಂದು ವ್ಯಾಪಾರ ಮತ್ತು ಅಭಿವೃದ್ಧಿ ಮೇಲಿನ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಜಾಗತಿಕ ಮಟ್ಟದಲ್ಲಿ ವಿದೇಶಿ ನೇರ ಬಂಡವಾಳಕ್ಕೆ ಸಂಬಂಧಿಸಿದ ಈ ವರದಿ ಪ್ರಕಟವಾಗಿದ್ದು, 2020 ರಲ್ಲಿದ್ದ 929 ಬಿಲಿಯನ್ ಡಾಲರ್ ನಿಂದ 2021 ರಲ್ಲಿ 1.65 ಟ್ರಿಲಿಯನ್ ಡಾಲರ್ ಗೆ ಏರಿಕೆಯಾಗುವ ಮೂಲಕ 2021 ರಲ್ಲಿ ಬಲಿಷ್ಠವಾಗಿ ಏರಿಕೆಯಾಗಿದೆ. ಇದು ಕೋವಿಡ್-19 ಅವಧಿಗೂ ಮುನ್ನ ಇದ್ದ ಮಟ್ಟವನ್ನೂ ದಾಟಿದೆ ಎಂದು ಹೇಳಿದೆ.
ಇದನ್ನೂ ಓದಿ: ಎಲಾನ್ ಮಸ್ಕ್ ಭಾರತೀಯ ಟೆಲಿಕಾಂ ಕ್ಷೇತ್ರಕ್ಕೆ ಬಂದರೆ ಏನಾಗಬಹುದು?
ಅಭಿವೃದ್ಧಿಯಾಗುತ್ತಿರುವ ರಾಷ್ಟ್ರಗಳಲ್ಲಿ ಹೂಡಿಕೆ ಹರಿದುಬರುತ್ತಿರುವುದು ಉತ್ತೇಜನಕಾರಿಯಾಗಿದೆ. ಆದರೆ ಅಭಿವೃದ್ಧಿಯಾಗಿರುವ ದೇಶಗಳಲ್ಲಿ ವಿದೇಶಿ ಹೂಡಿಕೆ ಸ್ಥಗಿತಗೊಂಡಿರುವುದು ಆತಂಕಕಾರಿ ಪರಿಸ್ಥಿತಿ ಎಂದು ವಿಶ್ವಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.
Read more…
[wpas_products keywords=”deal of the day”]