Karnataka news paper

ಕ್ರಿಸ್ಮಸ್‌ನಿಂದ ನ್ಯೂ ಇಯರ್‌ವರೆಗೆ.. ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ – ಭಾಗ 42


ಕಳೆದ ವಾರದಲ್ಲಿ ಹೇಳಿದಂತೆ, ಥ್ಯಾಂಕ್ಸ್ ಗಿವಿಂಗ್ ಹಬ್ಬದ ನಂತರ ಕ್ರಿಸ್ಮಸ್ ಹಬ್ಬದ ತಯಾರಿಕೆ ಆರಂಭವಾಗುತ್ತದೆ. ಕ್ರಿಸ್ಮಸ್ ಮರಗಳನ್ನು ತಂದು ಮನೆಯಲ್ಲಿ ನಿಲ್ಲಿಸಿ ಅದನ್ನುಅಲಂಕರಿಸುವುದೇ ಮಕ್ಕಳಿಗೆ ಅತ್ಯಂತ ಖುಷಿ ತರುವ ಒಂದು ಚಟುವಟಿಕೆ ಎಂದರೆ ತಪ್ಪಾಗಲಾರದು. ಮರಕ್ಕೆ ದೀಪಾಲಂಕಾರ ಮಾಡುವುದು, ಅದಕ್ಕೆ ಅಂದ ಚಂದ ornaments ಹಾಕುವುದು, ಮರದ ಬುಡಕ್ಕೆ ಕೆಂಪು ಅಥವಾ ಕ್ರಿಸ್ಮಸ್ ಥೀಮ್ ಇರುವ ಬಟ್ಟೆಯನ್ನು ಹಾಸುವುದು ಕೂಡ ಚಟುವಟಿಕೆಯಲ್ಲಿ ಒಂದು. ಇದರ ಜೊತೆ ಮುಖ್ಯವಾಗಿ ಕ್ರಿಸ್ಮಸ್ ಮರಕ್ಕೆ stocking ಅನ್ನೂ ತೂಗಿಬಿಡಲಾಗುತ್ತದೆ. ಕಿಸ್ಮಸ್ ಥೀಮ್ ಇರುವ ಸಾಕ್ಸ್ ಒಂದರ ಮೇಲೆ ಹೆಸರನ್ನು ಬರೆದು ತೂಗಿ ಬಿಡುವುದು ಸಂಪ್ರದಾಯ. ಆ ಸಾಕ್ಸ್‌ನಲ್ಲಿ ಸಾಂತಾ ಬಂದು ಉಡುಗೊರೆಯನ್ನು ತುಂಬುತ್ತಾನೆ ಎಂಬ ನಂಬಿಕೆ ಮಕ್ಕಳದ್ದು. ಇದರಂತೆ ಮತ್ತೊಂದು ನಂಬಿಕೆ ಎಂದರೆ, wrap ಮಾಡಿರುವ giftbox ಅನ್ನು ಗಿಡದ ಕೆಳಗೆ ಸಾಂತಾ ಚಿಮಣಿಯಿಂದ ಇಳಿದು ಬಂದು ಇರಿಸುತ್ತಾನೆ ಎಂದು. ತಮಗಾಗಿ ಉಡುಗೊರೆಯನ್ನು ತಂದು ನೀಡುವ ಸಾಂತಾನಿಗಾಗಿ ಮಕ್ಕಳು ಒಂದು ಲೋಟ ಹಾಲಿನ ಜೊತೆ ಒಂದೆರಡು cookie ಕೂಡಾ ಇಡುತ್ತಾರೆ.

ಎಷ್ಟೋ ಮನೆ ಮನೆಗಳ ಮೇಲೆ ದೀಪಾಲಂಕಾರ ಮಾಡಿರುತ್ತಾರೆ. ಕೆಲವೊಂದು ಸಿಂಪಲ್ ಆಗಿ ಮಾಡಿದ್ದರೆ, ಕೆಲವು ಅಲಂಕಾರಗಳು ಮಾತ್ರ ಕಣ್ಣಿಗೆ ಹಬ್ಬವೇ ಸರಿ. ಇಂಥಾ ದೀಪಾಲಂಕಾರ ನೋಡಲೆಂದೇ ಡಿಸೆಂಬರ್ ತಿಂಗಳಲ್ಲಿ, ಆಸಕ್ತರು, ನಗರ ಪ್ರದಕ್ಷಿಣೆ ಮಾಡುತ್ತಾರೆ. ಕೆಲವರು, ನಮ್ಮಂತೆ, ಅವರದ್ದೇ ಕಾರಿನಲ್ಲಿ ಓಡಾಡಿದರೆ, ಬೇರೆ ನಗರಗಳಿಂದ ಬಸ್‌ನಲ್ಲಿ ಬರುವವರೂ ಇದ್ದಾರೆ. ಸ್ಥಿತಿವಂತರು ಲಿಮೋಸೀನ್ ಕಾರಿನಲ್ಲೂ ಬರುತ್ತಾರೆ.

‘ಮುಂಗಾರು ಮಳೆ’ ಮನ ತಣಿಸಿದ ಸನ್ನಿವೇಶ: ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ – ಭಾಗ 37
Limousine ಒಂದು ವೈಭವೋಪೇತ ಕಾರು. ಬಾಡಿಗೆಗೆ ದೊರೆಯುವ ಈ ಕಾರಿಗೆ ಒಬ್ಬ ಡ್ರೈವರ್ ಇದ್ದೇ ಇರುತ್ತಾನೆ. ಇವರನ್ನು ಡ್ರೈವರ್ ಎನ್ನದೆ Chauffeur ಎನ್ನುತ್ತಾರೆ. ಮರ್ಸಿಡಿಸ್ ಬೆಂಜ್ ಎ ಕ್ಲಾಸ್ ಲಿಮೋಸೀನ್ ಕಾರಿನ ಬೆಲೆ ಕೇವಲ ನಲವತ್ತೊಂದರಿಂದ ನಲವತ್ಮೂರು ಲಕ್ಷ ರೂಪಾಯಿ. ಈ ಕಾರನ್ನು ಓಡಿಸುವಾತನಿಗೆ ಕೊಂಚ ದೊಡ್ಡ ಹೆಸರು ಬೇಡವೇ? ಈ ಲಕ್ಸುರಿ ಕಾರಿನ ಮತ್ತೊಂದು ವಿಶೇಷತೆ ಏನಪ್ಪಾ ಎಂದರೆ Chauffeur ಸೀಟಿನ ಹಿಂಬದಿಯಲ್ಲಿ ಒಂದು ಗಾಜಿನ ತೆರೆಯಿದ್ದು, ಈ ಕಡೆ ಮಾತು ಆ ಕಡೆ ಕೇಳಿಸುವುದಿಲ್ಲ. ಬೇಕಿದ್ದರೆ ತೆರೆಯನ್ನು ಕೆಳಕ್ಕೆ ಇಳಿಸಬಹುದು ಬಿಡಿ. ಇರಲಿ, ಇಂಥಾ ದಿನಗಳಲ್ಲಿ, ಹತ್ತರಿಂದ ಹದಿನಾರು ಮಂದಿ ಕೂರುವ ಕಾರಿನ ಬಾಡಿಗೆ, ಒಂದು ಘಂಟೆಗೆ, ಕೇವಲ 250 ಡಾಲರ್ಸ್. ಕಡಿಮೆ ಸೀಟ್ ಇದ್ದರೆ ಕಡಿಮೆ ಬಾಡಿಗೆ.

ಸಾಮಾನ್ಯವಾಗಿ ಯಾವುದೇ ಅಂಗಡಿಗೆ ಕಾಲಿಟ್ಟರೂ ‘ಲೆಟ್ ಇಟ್ ಸ್ನೋ’ ಹಾಡುಗಳೂ ಮತ್ತಿತರ ಕ್ರಿಸ್ಮಸ್ ಗೀತೆಗಳು ದಿನವಿಡೀ ಮೂಡಿಬರುತ್ತಲೇ ಇರುತ್ತದೆ. ಅಂಗಡಿಗಳಲ್ಲಿ ಸೇಲ್‌ಗಳು ಸಾಮಾನ್ಯ. ಸಂಜೆಯ ನಂತರ ಬೀದಿಗಳು ಹೆಚ್ಚು ಬ್ಯುಸಿ ಆಗುತ್ತದೆ. ಅಂಗಡಿಗಳೂ ತುಂಬಿ ತುಳುಕುತ್ತಿರುತ್ತದೆ. ಒಟ್ಟಿನಲ್ಲಿ ಹಬ್ಬದ ವಾತಾವರಣ ಎಲ್ಲೆಡೆ ಕಾಣುತ್ತಲೇ ಇರುತ್ತದೆ.

‘ಸಂಪದ’ ಬರಹ ಯಾನದ ಜೊತೆ ‘ಕಲಿ ನಲಿ’..! ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ – ಭಾಗ 38
ಕ್ರಿಸ್ಮಸ್ ಹಬ್ಬದ ಹಿಂದಿನ ದಿನ ಎಲ್ಲೆಡೆ ಧಾವಂತ ಎದ್ದು ಕಾಣುತ್ತದೆ. ಹಲವು ಬಾರಿ ಕ್ರಿಸ್ಮಸ್ ಮರದ ಕೆಳಗೆ ಇಡಲೆಂದು ತರುವ ಗಿಫ್ಟ್ ಅನ್ನು ಇಂದು ನಾಳೆ ಅಂತ ಮುಂದೆ ತಳ್ಳೀ ತಳ್ಳೀ ಕ್ರಿಸ್ಮಸ್ ಈವ್ ದಿನದ ಅಂಗಡಿ ಅಲೆಯೋದು ಸಾಮಾನ್ಯ. ಈ ಸನ್ನಿವೇಶಕ್ಕೆ ಬರೀ ಸಮಯ ಅಥವಾ ಕಡೆಯ ಘಳಿಗೆ ಅಂತ ಹೇಳಲಾಗದು. ಎಷ್ಟೋ ಸಾರಿ, ಹೆಚ್ಚು ಸಮಯ ಕೆಲಸ ಮಾಡಿ ಅಥವಾ ಸಂಜೆಯ ವೇಳೆ ಮಗದೊಂದು ಕೆಲಸ ಮಾಡಿ, ದುಡ್ಡು ಹೊಂದಿಸಿ ಉಡುಗೊರೆ ತರುವಂಥಾ ಸನ್ನಿವೇಶಗಳೂ ಇರುತ್ತದೆ. ಅಮೆರಿಕ ಎಂದ ಮಾತ್ರಕ್ಕೆ, ಹಣ ಗಿಡದಲ್ಲಿ ಬೆಳೆಯೋದಿಲ್ಲ, ದೇಶದಲ್ಲಿ ಪ್ರಿಂಟ್ ಆಗುವ ನೋಟುಗಳೆಲ್ಲಾ ನಮ್ಮ ಜೇಬಿನಲ್ಲೇ ಇದೆ ಎಂಬುದು ಮಿಥ್ಯ. ಡಿಸೆಂಬರ್ ತಿಂಗಳ ಹದಿನೈದರ ನಂತರ, ಹಲವಾರು ಕಂಪನಿಗಳಲ್ಲಿ Contractors ಗಳಿಗೆ ಕಡ್ಡಾಯ ರಜೆ ನೀಡಿ ಜನವರಿಯಲ್ಲಿ ವಾಪಸ್ ಬರುವಂತೆ ಹೇಳಲಾಗುತ್ತದೆ. ಕೆಲಸ ಇಲ್ಲಾ ಎಂದ ಮೇಲೆ, ಸಂಬಳವೂ ಇರುವುದಿಲ್ಲ.

ಸಾಮಾನ್ಯವಾಗಿ ಡಿಸೆಂಬರ್ ಕೊನೆಯ ವಾರ ಅಥವಾ ಇಪ್ಪತ್ತೈದರ ನಂತರ ಕಚೇರಿಗಳಲ್ಲಿ ಜನಸಂಖ್ಯೆ ಬಹಳ ಕಡಿಮೆ ಇರುತ್ತದೆ. ದಿನಗಳೆದಂತೆ ಡಿಸೆಂಬರ್ 31 ಕೂಡ ಬಂದೇ ಬಿಡ್ತು. ಕೋವಿಡ್ ಇಲ್ಲದಿರುವ ಸಮಯದಲ್ಲಿ ನಾವು ನಾಲ್ಕೈದು ಸಂಸಾರಗಳು ಸೇರಿ ಹೊಸ ವರ್ಷಾಗಮನವನ್ನು ಆಚರಿಸುತ್ತಿದ್ದೆವು. ಕೆಲವೊಮ್ಮೆ ಒಂದೆರಡು ಆಹ್ವಾನವಿದ್ದು ಎಲ್ಲೆಡೆ ಇಂತಿಷ್ಟು ಕಾಲ ಅಂತ ಇದ್ದಿದ್ದೂ ಉಂಟು. ಇಂಡಿಯಾ ಅಸೋಸಿಯೇಷನ್ ಅವರು ಕೂಡ ಇಂಥಾ ಪಾರ್ಟಿ ಹಮ್ಮಿಕೊಂಡರೂ ನಾವೆಂದೂ ಹೋಗಿಲ್ಲ. ನ್ಯೂಯಾರ್ಕ್‌ನಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಟಿವಿಯಲ್ಲಿ ನೋಡುತ್ತಾ, ಬಾಲ್ ಡ್ರಾಪ್ ವೀಕ್ಷಿಸಿ, ಹೊಸ ವರ್ಷವನ್ನು ಆದರದಿಂದ ಬರಮಾಡಿಕೊಂಡು, ಆ ನಂತರ ಮನೆಗೆ ತಲುಪುವಷ್ಟರಲ್ಲಿ ಸಾಮಾನ್ಯವಾಗಿ ಎರಡು ಘಂಟೆಯ ಹಗಲು. ಸಾಮಾನ್ಯವಾಗಿ ಮನೆಗೆ ಬಂದ ಮೇಲೆ ಭಾರತಕ್ಕೆ ಕರೆ ಮಾಡಿ, ಮನೆಯ ಜನರಿಗೆ ವಿಶ್ ಮಾಡುವುದೂ ವಾಡಿಕೆ. ಜನವರಿ ಒಂದನೆಯ ತಾರೀಖು ಕಚೇರಿಗೆ ರಜೆ ಇರುವ ಕಾರಣ, ಏಳುವುದು ತಡವೂ ಆಗುತ್ತದೆ.

ಅಮೆರಿಕದ ಶಿಕ್ಷಣ ಪದ್ದತಿ ಭಾರತಕ್ಕಿಂಥಾ ಎಷ್ಟೊಂದು ಭಿನ್ನ..! ಶ್ರೀನಾಥ್ ಭಲ್ಲೆ ಅನುಭವ ಕಥನ – ಭಾಗ 39
ನಾಟಕ ಮುಗಿದ ಮೇಲೆ ಅಂಕ ಪರದೆ ಇಳಿಯಲೇ ಬೇಕಲ್ಲವೇ? ಹೀಗೆಯೇ ಹಬ್ಬಗಳೂ ಸಹ. ಕ್ರಿಸ್ಮಸ್ ಹಬ್ಬವಾದ ನಂತರ ಜನವರಿ ಹತ್ತರವರೆಗೆ ಸಮಯ ನೀಡಿರುತ್ತಾರೆ. ಇಷ್ಟರೊಳಗೆ ದೀಪಾಲಂಕಾರಗಳು ಕೆಳಕ್ಕೆ ಇಳಿಯಲೇಬೇಕು. ಸೂಕ್ತ ಕಾರಣವಿಲ್ಲದೇ ಇದ್ದು, ಅಲಂಕಾರಗಳನ್ನು ತೆಗೆಯದೇ ಹೋದರೆ ದಂಡ ತೆರಬೇಕಾಗುತ್ತದೆ. ಮೊದಲಿಗೆ ಕ್ರಿಸ್ಮಸ್ ಮರಗಳು ಶೋ ಪೀಸ್‌ನಂಥದ್ದಾದರೆ ಅದನ್ನು ತೆಗೆದಿರಿಸಿ ಮರುಬಳಕೆ ಮಾಡುತ್ತಾರೆ. ನಿಜ ಮರವನ್ನು ಕಡಿದು ತಂದು ಇರಿಸಿದ್ದಾದರೆ, ಅವುಗಳನ್ನು ಸ್ಥಳೀಯ Dump Yardಗೆ ಒಯ್ದು ಕೊಡಬೇಕು. ಹಲವು ಕಮ್ಯೂನಿಟಿಗಳಲ್ಲಿ, ಅಂಥಾ ಮರವನ್ನು ನಿಗದಿತ ದಿನಗಳಲ್ಲಿ ಹೊರಕ್ಕೆ ಇರಿಸಿದರೆ, ಅದನ್ನು ಕೌಂಟಿಯವರೇ ತೆಗೆದುಕೊಂಡು ಹೋಗುತ್ತಾರೆ. ಇಂಥಾ ಮರಗಳನ್ನು ಒಯ್ದು, ತರಿದು, ಹುಳ ಹುಪ್ಪಟೆ ಬಾರದಂತೆ ಸಂಸ್ಕ್ರರಿಸಿ, Mulch ಮಾಡುತ್ತಾರೆ. ಇವುಗಳನ್ನು ಗಿಡಗಳಿಗೆ ಬಳಸಲಾಗುತ್ತದೆ. ಒಟ್ಟಾರೆ ಅವು ದಂಡವಾಗುವುದಿಲ್ಲ. ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ನೀತಿ.

ನವೆಂಬರ್ ಕೊನೆಯಿಂದ ಡಿಸೆಂಬರ್ ತಿಂಗಳ ಕೊನೆಯ ಮಧ್ಯೆ ಯಾವುದೇ ಸಮಯದಲ್ಲೂ ಅವರ ಕಾಲೆಂಡರ್ ರೀತ್ಯಾನುಸಾರ ಆಚರಿಸಲ್ಪಡುವ ಮತ್ತೊಂದು ದೀಪದ ಹಬ್ಬ ಎಂದರೆ Jewish ಹಬ್ಬವಾದ ಹನುಕ್ಕಾ (Hanukkah). ಅಮೆರಿಕಾದಲ್ಲಿ ಈ ಹಬ್ಬವನ್ನೂ ಆಯಾ ಪಂಗಡವರು ಆಚರಿಸುತ್ತಾರೆ. ಒಂಬತ್ತು ದೀಪಗಳ ಸಾಲಿನಲ್ಲಿ ಮಧ್ಯದ ದೀಪ ಮಿಕ್ಕ ಎಂಟರಿಗಿಂತ ಎತ್ತರ ಅಥವಾ ತಗ್ಗಿನಲ್ಲಿ ಕಟ್ಟಿರುತ್ತಾರೆ. ಮೊದಲು ಈ ದೀಪವನ್ನು ಬೆಳಗಿಸಿ ಹಬ್ಬ ಆರಂಭವಾಗುತ್ತದೆ. ಎಂಟು ದಿನಗಳು ಮತ್ತು ಎಂಟು ರಾತ್ರಿಗಳು ನಡೆಯುವ ಈ ಹಬ್ಬದ ಪ್ರತಿ ರಾತ್ರಿ ಒಂದು ಹಚ್ಚದ ದೀಪವನ್ನು ಬೆಳಗುತ್ತಾರೆ. ಎಂಟನೆಯ ರಾತ್ರಿ ಒಂಬತ್ತೂ ದೀಪಗಳು ಬೆಳಗಿರುತ್ತದೆ. ಅಂದಿನ ರಾತ್ರಿಗೆ ಹಬ್ಬ ಮುಗಿಯಿತು ಅಂತ.

ಅಮೆರಿಕದ ಮಹಾ ಚಳಿಯಲ್ಲಿ ಸ್ನೋ ಸಂಭ್ರಮ..! ಶ್ರೀನಾಥ್ ಭಲ್ಲೆ ಅನುಭವ ಕಥನ – ಭಾಗ 40
ರಷ್ಯಾ ದೇಶದವರ ಕ್ರಿಸ್ಮಸ್ ಹಬ್ಬವು ಜನವರಿ ಏಳರಂದು. ಅಮೆರಿಕದಲ್ಲಿರುವ ರಷ್ಯಾದವರು ಕೂಡ ಅದೇ ದಿನದಂದು ಆಚರಿಸುತ್ತಾರೆ. ಇಲ್ಲಿನ ರಷ್ಯಾದವರಿಗೆ ಎರಡು ಕ್ರಿಸ್ಮಸ್ ಮತ್ತು ಎರಡು ಹೊಸ ವರ್ಷದ ಸಂಭ್ರಮ ಎಂದರೆ ತಪ್ಪಾಗಲಾರದು. ಜನವರಿ ಹತ್ತರ ಹೊತ್ತಿಗೆ ಕ್ರಿಸ್ಮಸ್ ಹಬ್ಬದ ದೀಪಾಲಂಕಾರ ಕೆಳಕ್ಕೆ ಇಳಿಸಬೇಕು ಎಂಬ ನೀತಿ ನಿಯಮವು ರಷ್ಯಾದವರಿಗೆ ವಿಸ್ತರಿಸಲಾಗಿರುತ್ತದೆ.

ಇಷ್ಟು ವಿಷಯಗಳು ನೋಡಿ ಅಮೇರಿಕಾದಲ್ಲಿನ ಅಕ್ಟೋಬರ್ ಕೊನೆಯಿಂದ ಜನವರಿ ಮೊದಲ ವಾರದವರೆಗೆ. ಮುಂದಿನ ಮಾತು ಅಮೇರಿಕಾದಲ್ಲಿ ಮಕ್ಕಳ ಮನೆಗೆ ಬರುವ ಅಪ್ಪ-ಅಮ್ಮನ ಬಗ್ಗೆ.. ಅಲ್ಲಾ! ಬರೀ ಅಪ್ಪ-ಅಮ್ಮನ ಬಗ್ಗೆ ಮಾತು ಅಂತೀರಾ? ಅತ್ತೆ-ಮಾವ ಬರೋದಿಲ್ವೇ? ಐನಾತಿ ವಿಷ್ಯ ನೋಡಿ, ಈ ಅತ್ತೆ-ಮಾವ ಕೂಡಾ ಇಬ್ಬರಲ್ಲೊಬ್ಬರ ತಾಯಿ-ತಂದೆಯೇ ಅಲ್ಲವೇ?

ಪ್ರೇತಾತ್ಮಗಳಿಗಾಗಿ ಒಂದು ಹಬ್ಬ..! ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ – ಭಾಗ 41



Read more

[wpas_products keywords=”deal of the day sale today offer all”]