Karnataka news paper

ಎಸ್ಎಸ್ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷಾ ವೇಳಾಪಟ್ಟಿ ಪ್ರಕಟ, ಫೆಬ್ರವರಿ 21 ರಿಂದ 26ರವರೆಗೆ ಪರೀಕ್ಷೆ


The New Indian Express

ಬೆಂಗಳೂರು: 2021-22ನೇ ಸಾಲಿನ ಎಸ್​ಎಸ್​ಎಲ್​ಸಿ ಪೂರ್ವಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಾಲಾ ಶಿಕ್ಷಣ ಪರೀಕ್ಷಾ ಮಂಡಳಿ ಗುರುವಾರ ಪ್ರಕಟಿಸಿದೆ.

ಪರೀಕ್ಷೆಯ ವೇಳಾಪಟ್ಟಿಯ ಪ್ರಕಾರ, ಫೆಬ್ರವರಿ 21 ರಿಂದ ಫೆಬ್ರವರಿ​ 26ರವರೆಗೆ ಪೂರ್ವಸಿದ್ಧತಾ ಪರೀಕ್ಷೆಗಳು ನಡೆಯಲಿವೆ.

ಇದನ್ನು ಓದಿ: 2021-2022ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಫೆಬ್ರವರಿ 21ರಂದು ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು ಇಂಗ್ಲಿಷ್, ಸಂಸ್ಕೃತ ಪರೀಕ್ಷೆ ನಡೆಯಲಿದ್ದು, ಫೆಬ್ರವರಿ 22 ರಂದು ಕೋರ್ ಸಬ್ಜೆಕ್ಟ್ ಸಮಾಜಶಾಸ್ತ್ರ, ಫೆ. 23 ದ್ವೀತಿಯ ಭಾಷೆ ಕನ್ನಡ, ಇಂಗ್ಲಿಷ್, ಫೆ. 24 ಕೋರ್ ಸಬ್ಜೆಕ್ಟ್ ಗಣಿತ, ಫೆ 25 ತೃತೀಯ ಭಾಷೆ ಹಿಂದಿ, ಕನ್ನಡ, ಇಂಗ್ಲಿಷ್. ಅರೇಬಿಕ್, ಪರ್ಷಿಯನ್, ಉರ್ದು ಸಂಸ್ಕೃತ, ಕೊಂಕಣಿ, ತುಳು ಹಾಗೂ ಫೆಬ್ರವರಿ 26ರಂದು ಕೋರ್ ಸಬ್ಜೆಕ್ಟ್ ವಿಜ್ಞಾನ ಪರೀಕ್ಷೆ ನಡೆಯಲಿದೆ.





Read more

[wpas_products keywords=”deal of the day”]