Karnataka news paper

ವಿಶ್ವ ದಾಖಲೆ: ಏಕಾಂಗಿಯಾಗಿ ಪ್ರಪಂಚ ಸುತ್ತಿ ಬಂದ ವಿಶ್ವದ ಕಿರಿಯ ಮಹಿಳಾ ಪೈಲಟ್ 19 ವರ್ಷದ ಜಾರಾ


The New Indian Express

ಲಂಡನ್: ಬ್ರಿಟನ್- ಬೆಲ್ಜಿಯಂ ನಾಗರಿಕತ್ವ ಹೊಂದಿರುವ ವಿಮಾನ ಚಾಲಕಿ ಜಾರಾ ರುದರ್ ಫೋರ್ಡ್ ವಿನೂತನ ವಿಶ್ವ ದಾಖಲೆಯನ್ನು ಬರೆದಿದ್ದಾರೆ. 

ಇದನ್ನೂ ಓದಿ: ವೀಲ್ ಚೇರ್ ಮ್ಯಾರಾಥಾನ್: 24 ಗಂಟೆಯಲ್ಲಿ 213 ಕಿ.ಮೀ; ಪ್ಯಾರಾ ಅಥ್ಲೀಟ್ ಕಮಲಕಾಂತ್ ನಾಯಕ್ ವಿಶ್ವದಾಖಲೆ

ಏಕಾಂಗಿಯಾಗಿ ವಿಮಾನದಲ್ಲಿ ಪ್ರಪಂಚ ಸುತ್ತಿ ಬಂದ ವಿಶ್ವದ ಕಿರಿಯ ಮಹಿಳಾ ಪೈಲಟ್ ಎನ್ನುವ ಗಿನ್ನೆಸ್ ದಾಖಲೆ 19 ವರ್ಷದ ಜಾರಾ ಅವರ ಮುಡಿಗೇರಿದೆ.

ಇದನ್ನೂ ಓದಿ: ವಿಶ್ವ ದಾಖಲೆ: 1000 ಕೋಟಿ views ಪಡೆದ ಜಗತ್ತಿನ ಮೊದಲ ಯೂಟ್ಯೂಬ್ ವಿಡಿಯೊ ‘ಬೇಬಿ ಶಾರ್ಕ್ ಡ್ಯಾನ್ಸ್’

ಈ ಹಿಂದೆ ಈ ದಾಖಲೆ ಅಮೆರಿಕದ ವಿಮಾನ ಚಾಲಕಿ ಶೇಸ್ಟಾ ವೈಜ್ ಅವರ ಹೆಸರಲ್ಲಿತ್ತು. ಅವರು ಆ ದಾಖಲೆ ಮಾಡಿದಾಗ ಶೇಸ್ಟಾ ಅವರಿಗೆ 30 ವರ್ಷ ವಯಸ್ಸು.

ಇದನ್ನೂ ಓದಿ: ಸೌದಿ ಅರೇಬಿಯಾ: ಉತ್ಖನನ ವೇಳೆ 4,500 ವರ್ಷಗಳ ಹಿಂದಿನ ಹೆದ್ದಾರಿ ಪತ್ತೆ!

155 ದಿನಗಳ ಪಯಣದ ಅವಧಿಯಲ್ಲಿ ಜಾರಾ ಅವರು 5 ಖಂಡಗಳು, 41 ದೇಶಗಳಿಗೆ ಭೇಟಿ ನೀಡಿದ್ದಾರೆ. ಜಾರಾ ಮೊದಲ ಬಾರಿಗೆ ವಿಮಾನ ಚಾಲನೆ ಮಾಡಿದಾಗ ಅವರಿಗೆ 14 ವರ್ಷ ಎನ್ನುವುದು ಅಚ್ಚರಿಯ ಸಂಗತಿ.

ಇದನ್ನೂ ಓದಿ: 1 ಗಂಟೆಯಲ್ಲಿ ಅತಿ ಹೆಚ್ಚು ಜನರಿಗೆ ಮೆಹಂದಿ ಹಚ್ಚಿದ ಭಾರತದ ಯುವತಿ: ಪಾಕ್ ಮಹಿಳೆಯ ಗಿನ್ನೆಸ್ ದಾಖಲೆ ಧೂಳಿಪಟ



Read more

[wpas_products keywords=”deal of the day”]