The New Indian Express
ರಾಂಚಿ: ಜಾರ್ಖಂಡ್ ರಾಜ್ಯದ ದುಮರ್ತರ್ ಎನ್ನುವ ಕುಗ್ರಾಮದಲ್ಲಿ ಪಾಠ ಹೇಳಿಕೊಡುವ ಮೇಷ್ಟರನ್ನು ಜಪಾನಿನ ಒಸಾಕಾ ವಿವಿ ಗುರುತಿಸಿ ಬೆನ್ನು ತಟ್ಟಿದೆ. ಕೊರೊನಾ ಸಮಯದಲ್ಲಿ ದೇಶಾದ್ಯಂತ ಲಾಕ್ ಡೌನ್ ಹೇರಲ್ಪಟ್ಟಾಗ ಮಕ್ಕಳು ಶಾಲೆಯಿಂದ ದೂರವೇ ಉಳಿದಿದ್ದರು.
ಇದನ್ನೂ ಓದಿ: ಇಡೀ ಗ್ರಾಮವೇ ಎನ್ನ ಪಾಠಶಾಲೆ, ಮನೆ ಗೋಡೆಗಳೇ ಕಪ್ಪು ಹಲಗೆ ಎಂದ ಶಿಕ್ಷಕನಿಗೆ ನವದೆಹಲಿ ಬುಲಾವ್
ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಭಯ ಬೀಳುತ್ತಿದ್ದ ಸಮಯದಲ್ಲಿ ಮಕ್ಕಳಿಗೆ ಪಾಠ ಹೇಳಲು ಜಾರ್ಖಂಡ್ ನ ಸರ್ಕಾರಿ ಶಾಲಾ ಶಿಕ್ಷಕ ಸಪನ್ ಕುಮಾರ್ ವಿನೂತನ ಮಾರ್ಗ ಕಂಡುಕೊಂಡಿದ್ದರು.
ಇದನ್ನೂ ಓದಿ: ಲಾಕ್ ಡೌನ್ ಸಮಯದಲ್ಲಿ ವಿನೂತನವಾಗಿ ಧ್ವನಿವರ್ಧಕದಲ್ಲಿ ಪಾಠ ಮಾಡಿದ ಮೇಷ್ಟ್ರು: MX Player ನಲ್ಲಿ ಸಾಕ್ಷ್ಯಚಿತ್ರ
ಸಪನ್ ಕುಮಾರ್ ಅವರು ಇಡೀ ಗ್ರಾಮವನ್ನೇ ಶಾಲಾ ಕೊಠಡಿಯನ್ನಾಗಿ ಮಾರ್ಪಾಡು ಮಾಡಿದ್ದರು. ಗ್ರಾಮದ ಮನೆಗಳ ಗೋಡೆಗಳ ಮೇಲೆ ಕಪ್ಪು ಹಲಗೆಯನ್ನು ಅಳವಡಿಸಿದರು. ಪ್ರತಿ ಹಲಗೆಯ ಎದುರು ಒಬ್ಬ ವಿದ್ಯಾರ್ಥಿಯನ್ನು ಕುಳ್ಳಿರಿಸಿ ತಾವು ಧ್ವನಿವರ್ಧಕದ ಸಹಾಯದಿಂದ ಮಕ್ಕಳಿಗೆ ಪಾಠ ಹೇಳಿಕೊಟ್ಟಿದ್ದರು.
ಇದನ್ನೂ ಓದಿ: ವೀಲ್ ಚೇರ್ ಮ್ಯಾರಾಥಾನ್: 24 ಗಂಟೆಯಲ್ಲಿ 213 ಕಿ.ಮೀ; ಪ್ಯಾರಾ ಅಥ್ಲೀಟ್ ಕಮಲಕಾಂತ್ ನಾಯಕ್ ವಿಶ್ವದಾಖಲೆ
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಪೋಷಕರಿಗೆ ಇದ್ದ ಭಯ ದೂರ ಮಾಡಿದ್ದು ಶಿಕ್ಷಕ ಸಪನ್ ಕುಮಾರ್ ಅವರ ಹೆಗ್ಗಳಿಕೆ. ಅವರ ಸಾಧನೆಯನ್ನು ಗುರುತಿಸಿರುವ ಜಪಾನಿನ ಒಸಾಕಾ ವಿವಿ ಮೆಚ್ಚುಗೆ ವ್ಯಕ್ತಪಡಿಸಿದೆ. ಅಲ್ಲದೆ ವಿಡಿಯೊ ಕಾಲ್ ಮೂಲಕ ವಿವಿಯ ವಿದ್ಯಾರ್ಥಿಗಳಿಗೆ ಸಪನ್ ಕುಮಾರ್ ಅವರಿಂದ ತರಭೇತಿ ಕಾರ್ಯಾಗಾರ ಏರ್ಪಡಿಸಿದ್ದಾರೆ.
ಇದನ್ನೂ ಓದಿ: ಇದೇ ಮೊದಲು: ಅಂಧ ವ್ಯಕ್ತಿಗೆ ರಾಜಕೀಯ ಪಕ್ಷದ ಕಾರ್ಯದರ್ಶಿ ಸ್ಥಾನ; ಮಾದರಿಯಾದ ಸಿಪಿಎಂ
Read more
[wpas_products keywords=”deal of the day”]