Karnataka news paper

ಆಟಗಳ ಮೂಲಕ ಪಾಠ: ಕೊಯಮತ್ತೂರು ಸರ್ಕಾರಿ ಶಾಲಾ ಶಿಕ್ಷಕಿಗೆ ಸಾರಾಭಾಯಿ ರಾಷ್ಟ್ರೀಯ ಪುರಸ್ಕಾರ


The New Indian Express

ಕೊಯಮತ್ತೂರು: ಮಕ್ಕಳಿಗೆ ಪಾಠ ಕಲಿಸಲು ವಿನೂತನ ಹಾಗೂ ಕ್ರಿಯಾಶೀಲ ಚಟುವಟಿಕೆಗಳನ್ನು ಆವಿಷ್ಕರಿಸಿದ ಶಿಕ್ಷಕಿ ಕೊಯಮತ್ತೂರಿನ ಸರ್ಕಾರಿ ಶಾಲಾ ಶಿಕ್ಷಕಿ ಜೆ. ಯುವರಾಣಿ ಅವರಿಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನೀಡುವ 2021ನೇ ಸಾಲಿನ ಪ್ರತಿಷ್ಟಿತ ಸಾರಾಭಾಯಿ ರಾಷ್ಟ್ರೀಯ ಪುರಸ್ಕಾರ ಲಭಿಸಿದೆ.

ಇದನ್ನೂ ಓದಿ:  ಪಾಠ ಹೇಳಲು ವಿನೂತನ ಮಾರ್ಗ: ಜಾರ್ಖಂಡ್ ಸರ್ಕಾರಿ ಶಿಕ್ಷಕನ ಬೆನ್ನು ತಟ್ಟಿದ ಜಪಾನಿನ ಒಸಾಕಾ ವಿವಿ

ಜೆ. ಯುವರಾಣಿ ಅವರು ಬೊಮ್ಮನಂಪಾಳ್ಯಂ ಗ್ರಾಮದಲ್ಲಿ ಮಿಡಲ್ ಸ್ಕೂಲ್ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಲಿಕೆಯ ಜೊತೆಗೆ ಕಲೆಯನ್ನು ಮಿಳಿತಗೊಳಿಸುವುದು ಅವರ ಪಾಠ ಮಾಡುವ ಶೈಲಿಯಾಗಿದೆ.

ಇದನ್ನೂ ಓದಿ: ವಿಶ್ವ ದಾಖಲೆ: ಏಕಾಂಗಿಯಾಗಿ ಪ್ರಪಂಚ ಸುತ್ತಿ ಬಂದ ವಿಶ್ವದ ಕಿರಿಯ ಮಹಿಳಾ ಪೈಲಟ್ 19 ವರ್ಷದ ಜಾರಾ

ಯುವರಾಣಿ ಅವರು ಪಠ್ಯವನ್ನು ಅನಿಮೇಟೆಡ್ ವಿಡಿಯೋಗಳನ್ನಾಗಿ ಪರಿವರ್ತಿಸಿ ಅವುಗಳ ಮೂಲಕ ಮಕ್ಕಳಿಗೆ ಆಸಕ್ತಿದಾಯಕವಾಗಿ ಪಾಠ ಮಾಡುತ್ತಾ ಬಂದಿದ್ದಾರೆ. ಅದಕ್ಕಾಗಿ ಅವರು ಇದುವರೆಗೂ ೨೫೦ ಅನಿಮೇಟೆಡ್ ವಿಡಿಯೋಗಳನ್ನು ಸೃಷ್ಟಿಸಿದ್ದಾರೆ. 

ಇದನ್ನೂ ಓದಿ: ಅತ್ಯಂತ ವೇಗವಾಗಿ ಮೌಂಟ್ ಎವರೆಸ್ಟ್ ಏರಿದ ಏಕಾಂಗಿ: ಭಾರತೀಯನ ದಾಖಲೆ

ಮಕ್ಕಳಿಗೆ ಆಟ ಎಂದರೆ ಇಷ್ಟ ಹೀಗಾಗಿ ಅವರಿಗೆ ಪಾಠ ಮಾಡಬೇಕೆಂದರೆ ಅವರ ನಿಯಮಗಳ ಪ್ರಕಾರವೇ ಹೋದರೆ ಚೆನ್ನ. ಹೀಗಾಗಿ ತಾವು ಈ ವಿನೂತನ ಪಾಠ ಮಾಡುವ ಶೈಲಿ ಅಳವಡಿಸಿಕೊಂಡಿದ್ದಾಗಿ ಯುವರಾಣಿ ಹೇಳುತ್ತಾರೆ. ಫೆ. 28ರಂದು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಇದನ್ನೂ ಓದಿ: ವೀಲ್ ಚೇರ್ ಮ್ಯಾರಾಥಾನ್: 24 ಗಂಟೆಯಲ್ಲಿ 213 ಕಿ.ಮೀ; ಪ್ಯಾರಾ ಅಥ್ಲೀಟ್ ಕಮಲಕಾಂತ್ ನಾಯಕ್ ವಿಶ್ವದಾಖಲೆ



Read more

[wpas_products keywords=”deal of the day”]