ಹೈಲೈಟ್ಸ್:
- ‘ಗಿಣಿರಾಮ’ ಧಾರಾವಾಹಿ ಸದ್ಯಕ್ಕಂತೂ ಮುಗಿಯಲ್ಲ ಎಂದ ನಟ ರಿತ್ವಿಕ್ ಮಾತಾಡ್
- ಅಂತೆ ಕಂತೆ ಪುರಾಣಗಳಿಗೆ ಬ್ರೇಕ್ ಹಾಕಿದ ನಟ ರಿತ್ವಿಕ್ ಮಾತಾಡ್
- ಮುಂಬರುವ ಎಪಿಸೋಡ್ ಶೂಟಿಂಗ್‌ನಲ್ಲಿ ಬ್ಯುಸಿಯಾದ ಧಾರಾವಾಹಿ ತಂಡ
“ಗಿಣಿರಾಮ ಧಾರಾವಾಹಿ ಅಂತ್ಯವಾಗುತ್ತಿಲ್ಲ. ವೀಕ್ಷಕರನ್ನು ಈ ಧಾರಾವಾಹಿ ಎಂದಿನಂತೆ ಮನರಂಜಿಸುತ್ತೆ. ಯಾಕೆ ಈ ರೀತಿ ಗಾಸಿಪ್ ಹರಡಿತು ಎಂದು ತಿಳಿಯುತ್ತಿಲ್ಲ. ಈ ವಿಷಯವಾಗಿ ನನಗೆ ಸಾಕಷ್ಟು ಫೋನ್, ಮೆಸೇಜ್ ಬಂತು. ಇಷ್ಟು ಬೇಗ ಗಿಣಿರಾಮ ಧಾರಾವಾಹಿ ಅಂತ್ಯವಾಗುತ್ತಿಲ್ಲ” ಎಂದು ರಿತ್ವಿಕ್ ಮಾತಾಡ್ ಹೇಳಿದ್ದಾರೆ.
ಪ್ರಾರಂಭದಲ್ಲಿ ಉತ್ತರ ಕರ್ನಾಟಕದ ಭಾಷೆ ಮಾತನಾಡೋದು ಕಷ್ಟ ಆಗ್ತಿತ್ತು: ‘ಗಿಣಿರಾಮ’ ಧಾರಾವಾಹಿ ನಟಿ ಚೈತ್ರಾ ರಾವ್
ಇಂದು ಸಂಪೂರ್ಣ ಸುಳ್ಳು ವದಂತಿ. ಈ ವದಂತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡವರಿಗೂ ಕೂಡ ಇದರ ಬಗ್ಗೆ ಸತ್ಯಾಂಶ ಗೊತ್ತಿರೋದಿಲ್ಲ. ಈ ರೀತಿ ವದಂತಿ ನಂಬಬೇಡಿ ಎಂದು ಎಲ್ಲರಿಗೂ ಮನವಿ ಮಾಡುವೆ. ಗಿಣಿರಾಮ ಧಾರಾವಾಹಿ ಅಂತ್ಯಗೊಳಿಸುವ ಕುರಿತು ಯಾವುದೇ ಚರ್ಚೆಯಾಗಿಲ್ಲ. ಈ ರೀತಿ ವದಂತಿ ಹಬ್ಬಿಸಲೇಬೇಡಿ” ಎಂದು ರಿತ್ವಿಕ್ ಮಾತಾಡ್ ಹೇಳಿದ್ದಾರೆ.
“ಮುಂಬರುವ ಎಪಿಸೋಡ್ ಬಗ್ಗೆ ನಾವು ಶೂಟಿಂಗ್ ಮಾಡುತ್ತಿದ್ದೇವೆ. ಮುಂಜಾಗ್ರತೆ ಕ್ರಮ ಕೈಗೊಂಡು ನಾವು ಶೂಟಿಂಗ್ ಮಾಡುತ್ತಿದ್ದೇವೆ. ಇನ್ನೂ ಸಾಕಷ್ಟು ಎಪಿಸೋಡ್‌ಗಳನ್ನು ಶೂಟಿಂಗ್ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಸಾಕಷ್ಟು ತಿರುವುಗಳೊಂದಿಗೆ ಗಿಣಿರಾಮ ಧಾರಾವಾಹಿ ಬರಲಿದೆ” ಎಂದು ರಿತ್ವಿಕ್ ಮಾತಾಡ್ ಹೇಳಿದ್ದಾರೆ.
ರಿಷಿಕೇಶದಲ್ಲಿ ‘ಗಿಣಿರಾಮ’ ಧಾರಾವಾಹಿ ಶೂಟಿಂಗ್ ವೇಳೆ ಆ ಸಾಧು ಹೇಳಿದ ಮಾತು ಅರ್ಥಪೂರ್ಣವಾಗಿತ್ತು: ನಟ ರಿತ್ವಿಕ್
ಶಿವರಾಮ ಹಾಗೂ ಮಹತಿ, ಆಯಿಸಾಹೇಬ ಬದುಕಿನ ಸುತ್ತ ‘ಗಿಣಿರಾಮ’ ಧಾರಾವಾಹಿ ಕಥೆ ಸಾಗುತ್ತಿದೆ. ವಾರಾಣಸಿಯಲ್ಲಿ ಗಿಣಿರಾಮ ತಂಡ ಸಾಕಷ್ಟು ದಿನ ಶೂಟಿಂಗ್ ಮಾಡಿದೆ. ಅದರ ಎಪಿಸೋಡ್‌ಗಳು ಈಗಾಗಲೇ ಪ್ರಸಾರ ಆಗಿವೆ.
ಈ ಕುರಿತು ‘ಗಿಣಿರಾಮ’ ಧಾರಾವಾಹಿ ನಟ ರಿತ್ವಿಕ್ ಮಾತಾಡ್ ಈ ಹಿಂದೆ ‘ವಿಜಯ ಕರ್ನಾಟಕ ವೆಬ್’ ಜೊತೆ ರಿಷಿಕೇಶದ ಶೂಟಿಂಗ್ ಅನುಭವದ ಬಗ್ಗೆ ಹೇಳಿದ್ದರು. ಬೆಳಗ್ಗೆ 4 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಗಿಣಿರಾಮ ಶೂಟಿಂಗ್ ನಡೆದಿತ್ತು. ಬೆಳಗ್ಗೆ 6 ಗಂಟೆಗೆ ಧಾರಾವಾಹಿ ತಂಡ ಶೂಟಿಂಗ್ ನಡೆಯುವ ಸ್ಥಳಕ್ಕೆ ಹೋಗಬೇಕಾಗಿತ್ತು. ಆಗ 10 ಡಿಗ್ರಿ ತಾಪಮಾನ ಇತ್ತು. ಆ ಚಳಿಯಲ್ಲಿ ಡೈಲಾಗ್ ಹೇಳಲಾಗದೆ ಧಾರಾವಾಹಿ ತಂಡ ಕಷ್ಟಪಟ್ಟಿದೆ. ಸಾಕಷ್ಟು ತಯಾರಿ ಮಾಡಿಕೊಂಡು ಗಿಣಿರಾಮ ಧಾರಾವಾಹಿ ಶೂಟಿಂಗ್ ಮಾಡಿರೋದು ಸಹಾಯ ಆಗಿತ್ತು. ಯಾವ ಲೋಕೇಶನ್‌ನಲ್ಲಿ ಏನು ಶೂಟ್ ಮಾಡಬೇಕು ಎಂಬ ಸ್ಪಷ್ಟತೆಯಿಂದ ಸೀರಿಯಲ್ ತಂಡ ಶೂಟಿಂಗ್ ಮಾಡಿದೆ. ಕೆಲ ಕನ್ನಡಿಗರು ‘ಗಿಣಿರಾಮ’ ಧಾರಾವಾಹಿ ತಂಡವನ್ನು ಮಾತನಾಡಿಸಿದ್ದರು.
Read more
[wpas_products keywords=”deal of the day sale today offer all”]