Karnataka news paper

ರಾಜ್ಯ ಸರಕಾರಗಳ ಸಾಲದ ವೆಚ್ಚ ಭಾರೀ ಹೆಚ್ಚಳ, ಬಡ್ಡಿಗೇ ಹೆಚ್ಚಿನ ಮೊತ್ತ


ಹೊಸದಿಲ್ಲಿ: ರಾಜ್ಯ ಸರಕಾರಗಳು ಹಣಕಾಸು ಮಾರುಕಟ್ಟೆಯಿಂದ ಪಡೆಯುವ ತಮ್ಮ ಸಾಲಗಳಿಗೆ ಹೆಚ್ಚಿನ ಬಡ್ಡಿ ದರವನ್ನು ನೀಡಬೇಕಾಗುತ್ತಿದೆ. ಇದರ ಪರಿಣಾಮ ಕಳೆದ ತಿಂಗಳಿನಿಂದ ರಾಜ್ಯ ಸರಕಾರಗಳ ಸಾಲದ ಬಾಬ್ತು ವೆಚ್ಚದಲ್ಲಿ ಶೇ. 0.09ರಿಂದ ಶೇ. 0.14 ತನಕ ಏರಿಕೆಯಾಗಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರಾಜ್ಯ ಅಭಿವೃದ್ಧಿ ಸಾಲ ಕುರಿತ ಬಾಂಡ್‌ಗಳ (ಎಸ್‌ಡಿಎಲ್‌) ಹರಾಜನ್ನು ಘೋಷಿಸಿದೆ. 12 ರಾಜ್ಯ ಸರಕಾರಗಳು ಒಟ್ಟು 20,659 ಕೋಟಿ ರೂ.ಗಳ ಬಾಂಡ್‌ಗಳನ್ನು ಬಿಡುಗಡೆಗೊಳಿಸಿವೆ. ಈ ಬಾಂಡ್‌ಗಳ ಅವಧಿ 5 ರಿಂದ 20 ವರ್ಷಗಳ ತನಕ ಇದೆ. ಉತ್ತರ ಪ್ರದೇಶ ಸರಕಾರ 3,000 ಕೋಟಿ ರೂ.ಗಳ ಬಾಂಡ್‌ಗಳನ್ನು ಮಾರಾಟ ಮಾಡಿದೆ. ಇದರ ಬಡ್ಡಿ ದರ ಶೇ. 7.24. ಪಶ್ಚಿಮ ಬಂಗಾಳ. ಗೋವಾ, ಬಿಹಾರ, ಮಣಿಪುರ ಕೂಡ ಬಾಂಡ್‌ಗಳನ್ನು ಮಾರಾಟ ಮಾಡಿವೆ. ಬಾಂಡ್‌ಗಳ ಬಡ್ಡಿ ದರಗಳು ಹಣದುಬ್ಬರ ಹೆಚ್ಚಳವಾದೊಡನೆ ಏರಿಕೆಯಾಗುತ್ತದೆ.

ಕೇರ್‌ ರೇಟಿಂಗ್‌ ಏಜೆನ್ಸಿಯ ಇತ್ತೀಚಿನ ವರದಿಯ ಪ್ರಕಾರ, ಎಲ್ಲ ರಾಜ್ಯಗಳ ಒಟ್ಟು ಬಜೆಟ್‌ ಗಾತ್ರವು ಕೇಂದ್ರ ಸರಕಾರದ ಬಜೆಟ್‌ ಗಾತ್ರಕ್ಕಿಂತಲೂ ದೊಡ್ಡದು. ಅಭಿವೃದ್ಧಿಯ ಜವಾಬ್ದಾರಿಯು ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮಾನವಾಗಿ ಹರಡಿದೆ. 2021 – 22ರಲ್ಲಿ ಕೇಂದ್ರ ಸರಕಾರದ ಬಜೆಟ್‌ ವೆಚ್ಚ 34.8 ಲಕ್ಷ ಕೋಟಿ ರೂ.ಗಳಾಗಿದ್ದರೆ, ರಾಜ್ಯಗಳ ಬಜೆಟ್‌ಗಳ ಒಟ್ಟು ವೆಚ್ಚ 42.9 ಲಕ್ಷ ಕೋಟಿ ರೂ.ಗಳಾಗಿದೆ. ವಾಸ್ತವವಾಗಿ ಹಣಕಾಸು ಆಯೋಗ ಕೇಂದ್ರದ ಆದಾಯದಲ್ಲಿ ಶೇ. 41 ಪಾಲನ್ನು ರಾಜ್ಯಗಳಿಗೆ ವರ್ಗಾವಣೆ ಮಾಡಬೇಕು ಎಂದು ಕಡ್ಡಾಯಗೊಳಿಸಿದೆ.

ಈ ವರ್ಷ ರಾಜ್ಯ ಸರ್ಕಾರ ಮಾಡಿರುವ ಒಟ್ಟು ಸಾಲ ಬರೋಬ್ಬರಿ ₹96,509 ಕೋಟಿ!; ವಿಧಾನಸಭೆಯಲ್ಲಿ ಬಹಿರಂಗ
ದೇಶದ ಆರ್ಥಿಕತೆಗೆ ಓಮಿಕ್ರಾನ್‌ ಹೊಡೆತ ಪ್ರಮಾಣ ಸೀಮಿತ

ಹೊಸದಿಲ್ಲಿ: ಭಾರತದ ಆರ್ಥಿಕತೆಗೆ ಓಮಿಕ್ರಾನ್‌ ವೈರಸ್‌ನಿಂದ ಉಂಟಾಗ­ಬಹು­ದಾದ ಹಾನಿಯ ಪ್ರಮಾಣ ಸೀಮಿತ ಎಂದು ಆರ್ಥಿಕ ತಜ್ಞರು ಸಮೀಕ್ಷೆಯಲ್ಲಿಅಭಿಪ್ರಾಯ ವ್ಯಕ್ತಪಡಿ­ಸಿದ್ದಾರೆ. ರಾಯ್ಟರ್ಸ್ ಸಂಸ್ಥೆಯು ಜನವರಿ 11-18ರ ಅವಧಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ 45 ಮಂದಿ ಆರ್ಥಿಕ ತಜ್ಞರು, ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಶೇ. 5 ಇರಬಹುದು ಎಂದಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಶೇ. 6ರ ಜಿಡಿಪಿ ಪ್ರಗತಿಯನ್ನು ನಿರೀಕ್ಷಿಸಲಾಗಿತ್ತು.

ಏಷ್ಯಾದ ಮೂರನೆಯ ಅತಿ ದೊಡ್ಡ ಅರ್ಥಿಕತೆಯಾಗಿರುವ ಭಾರತವು ಕೋವಿಡ್‌ ಎರಡನೆಯ ಅಲೆ ಉಪ­ಶಮನ­ವಾದ ನಂತರ ಚೇತರಿಸುತ್ತಿತ್ತು. ಆದರೆ ನಾನಾ ರಾಜ್ಯಗಳಲ್ಲಿ ಓಮಿಕ್ರಾನ್‌ ಕೇಸ್‌ಗಳು ಜಾಸ್ತಿಯಾದ ನಂತರ ಮತ್ತೆ ನಿರ್ಬಂಧಗಳೂ ಜಾರಿಯಾಗುತ್ತಿವೆ. ಹೀಗಿದ್ದರೂ, ಎರಡನೆಯ ಅಲೆಯ ಮಾದರಿಯಲ್ಲಿ ಭಾರಿ ಹಾನಿಯನ್ನು ಇದು ಉಂಟು ಮಾಡಲಾರದು ಎಂದು ಆರ್ಥಿಕ ತಜ್ಞರು ಭಾವಿಸಿದ್ದಾರೆ. ಜನವರಿ-ಮಾರ್ಚ್ ತ್ರೈಮಾಸಿಕ­ದಲ್ಲಿ ಹಣದುಬ್ಬರ ಶೇ. 5.8 ಇರಬಹುದು ಎಂದು ಅಂದಾಜಿಸಲಾಗಿದೆ.



Read more…

[wpas_products keywords=”deal of the day”]