ಹೈಲೈಟ್ಸ್:
- #ವಿಕ ವೆಬ್ ಸಿನಿಮಾ ಅವಾರ್ಡ್ಸ್ – 2021ರ ವಿಜೇತರ ಘೋಷಣೆ
- ‘ಅತ್ಯುತ್ತಮ ಗಾಯಕ’ ಪ್ರಶಸ್ತಿಗೆ ಆಯ್ಕೆಯಾದ ವಿಜಯ್ ಪ್ರಕಾಶ್
- ‘ಯುವರತ್ನ’ ಚಿತ್ರದ ‘ಪಾಠಶಾಲಾ’ ಹಾಡನ್ನು ಹಾಡಿದ್ದ ವಿಜಯ್ ಪ್ರಕಾಶ್
‘ವಿಜಯ ಕರ್ನಾಟಕ ವೆಬ್ ಸಿನಿಮಾ ಅವಾರ್ಡ್ಸ್-2021’ರ ‘ಅತ್ಯುತ್ತಮ ಗಾಯಕ’ ಪ್ರಶಸ್ತಿಗೆ ‘ಯುವರತ್ನ’ ಚಿತ್ರದ ‘ಪಾಠಶಾಲಾ’ ಹಾಡಿಗೆ ದನಿಯಾಗಿದ್ದ ವಿಜಯ್ ಪ್ರಕಾಶ್ ಆಯ್ಕೆಯಾಗಿದ್ದಾರೆ.
ವಿಕ ವೆಬ್ ಸಿನಿಮಾ ಅವಾರ್ಡ್ಸ್: ‘ಅತ್ಯುತ್ತಮ ಗಾಯಕ’ ವಿಭಾಗದಲ್ಲಿ ಅಧಿಕ ಮತಗಳನ್ನು ಪಡೆದಿರುವವರು..
ಅತ್ಯುತ್ತಮ ಗಾಯಕ – ವಿಜಯ್ ಪ್ರಕಾಶ್
2021ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ಧನಂಜಯ, ಪ್ರಕಾಶ್ ರೈ ಅಭಿನಯದ ‘ಯುವರತ್ನ’ ಚಿತ್ರ ಬಿಡುಗಡೆಯಾಗಿತ್ತು. ‘ಯುವರತ್ನ’ ಸಿನಿಮಾದಲ್ಲಿನ ‘ಪಾಠಶಾಲಾ’ ಹಾಡಿಗೆ ವಿಜಯ್ ಪ್ರಕಾಶ್ ದನಿಯಾಗಿದ್ದರು. ‘ಪಾಠಶಾಲಾ’ ಹಾಡು ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ‘ವಿಜಯ ಕರ್ನಾಟಕ ವೆಬ್’ ವತಿಯಿಂದ ನಡೆಸಿದ ‘ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್’ನಲ್ಲೂ ‘ಅತ್ಯುತ್ತಮ ಗಾಯಕ’ ವಿಭಾಗದಲ್ಲಿ ‘ಪಾಠಶಾಲಾ’ ಹಾಡನ್ನು ಹಾಡಿದ್ದ ವಿಜಯ್ ಪ್ರಕಾಶ್ ಅವರಿಗೆ ಅತೀ ಹೆಚ್ಚು ಮತಗಳು ಲಭ್ಯವಾಗಿವೆ. ಹೀಗಾಗಿ ಗಾಯಕ ವಿಜಯ್ ಪ್ರಕಾಶ್ ‘ಅತ್ಯುತ್ತಮ ಗಾಯಕ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಯಾರೆಲ್ಲಾ ನಾಮನಿರ್ದೇಶನಗೊಂಡಿದ್ದರು..?
‘ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್’ನಲ್ಲಿ ‘ಅತ್ಯುತ್ತಮ ಗಾಯಕ’ ವಿಭಾಗದಲ್ಲಿ ವಿಜಯ್ ಪ್ರಕಾಶ್ ಜೊತೆಗೆ ಸಂಚಿತ್ ಹೆಗಡೆ (ಚಿತ್ರ: ಸಲಗ), ಚಂದನ್ ಶೆಟ್ಟಿ (ಚಿತ್ರ: ಪೊಗರು), ಸಿದ್ಧಾರ್ಥ್ ಬೆಳಮಣ್ಣು (ಚಿತ್ರ: ನಿನ್ನ ಸನಿಹಕೆ), ಪಂಚಂ ಜೀವ (ಚಿತ್ರ: ಸಖತ್) ನಾಮನಿರ್ದೇಶನಗೊಂಡಿದ್ದರು.
‘ವಿಕ ವೆಬ್ ಸಿನಿಮಾ ಅವಾರ್ಡ್ಸ್-2021’; ಪುನೀತ್ ರಾಜ್‌ಕುಮಾರ್ ‘ಅತ್ಯುತ್ತಮ ನಟ’
ವೋಟಿಂಗ್‌ನಲ್ಲಿ ಅಂತಿಮವಾಗಿ ವಿಜಯ್ ಪ್ರಕಾಶ್‌ಗೆ 74% ವೋಟ್ಸ್ ಬಿದ್ದಿವೆ. ಸಂಚಿತ್ ಹೆಗಡೆಗೆ 12%, ಚಂದನ್ ಶೆಟ್ಟಿಗೆ 6%, ಸಿದ್ಧಾರ್ಥ್ ಬೆಳಮಣ್ಣುಗೆ 5% ಹಾಗೂ ಪಂಚಂ ಜೀವಗೆ 3% ಮತಗಳು ಲಭಿಸಿವೆ. ಹೀಗಾಗಿ, ಅತಿ ಹೆಚ್ಚು ವೋಟ್ಸ್ ಪಡೆದ ವಿಜಯ್ ಪ್ರಕಾಶ್ ‘ಅತ್ಯುತ್ತಮ ಗಾಯಕ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
‘ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್’ನಲ್ಲಿ ನೀವು ನೀಡಿದ ಮತಗಳ ಆಧಾರದ ಮೇಲೆ ‘ವಿಜಯ ಕರ್ನಾಟಕ ವೆಬ್ ಸಿನಿಮಾ ಅವಾರ್ಡ್ಸ್-2021’ ಘೋಷಿಸಲಾಗಿದೆ.
Read more
[wpas_products keywords=”deal of the day sale today offer all”]