
ಬೀಜಿಂಗ್: ಅರುಣಾಚಲ ಪ್ರದೇಶದ ಮೇಲಿನ ಸಿಯಾಂಗ್ ಜಿಲ್ಲೆಯಲ್ಲಿ 17 ವರ್ಷದ ಯುವಕನನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಸಿಬ್ಬಂದಿ ಅಪಹರಿಸಿದ ಬಗ್ಗೆ ತನಗೆ ಯಾವುದೇ ಮಾಹಿತಿಯೂ ಇಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯ ತಿಳಿಸಿದೆ.
‘ಪಿಎಲ್‌ಎ ಗಡಿ ಭಾಗದಲ್ಲಿ ನಿಯಂತ್ರಣ ಸಾಧಿಸಿದ್ದು, ಅಕ್ರಮವಾಗಿ ಚೀನಾ ನೆಲದೊಳಗೆ ಪ್ರವೇಶಿಸುವುದು ಮತ್ತು ಹೊರ ಹೋಗುವ ಚಟುವಟಿಕೆಗಳನ್ನು ಹತ್ತಿಕ್ಕುತ್ತಿದೆ’ ಎಂದು ಅದು ಹೇಳಿದೆ.
ಪಿಎಲ್‌ಎ ಸಿಬ್ಬಂದಿ ಸಿಯುಂಗ್ಲಾ ಪ್ರದೇಶದ ಲುಂಗ್ಟಾ ಜೋರ್ ಎಂಬ್ಲಿಂದ ಮಿರಾಮ್ ತರೊನ್ ಎಂಬಾತನನ್ನು ಅಪಹರಿಸಿದೆ ಎಂದು ಅರುಣಾಚಲ ಪ್ರದೇಶದ ಸಂಸದ ತಪಿರ್ ಗವೊ ಅವರು ಬುಧವಾರ ಆರೋಪಿಸಿದ್ದರು. ಪಿಎಲ್‌ಎ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಆತನ ಸ್ನೇಹಿತ ಈ ಅಪಹರಣದ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ಅವರು ಹೇಳಿದ್ದರು.
ನಾಪತ್ತೆಯಾಗಿರುವ ಯುವಕನನ್ನು ಹುಡುಕುವಲ್ಲಿ ನೆರವಾಗಬೇಕು ಎಂದು ಭಾರತೀಯ ಸೇನೆ ಪಿಎಲ್‌ಎ ಅನ್ನು ಕೇಳಿಕೊಂಡಿದೆ.
Read more from source
[wpas_products keywords=”deals of the day offer today electronic”]