
ವಾಷಿಂಗ್ಟನ್: ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಯುದ್ಧ ಸಾರುವುದಕ್ಕೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಬಯಸುತ್ತಿಲ್ಲ. ಆದರೆ ಅವರು ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆ ನಡೆಸಿದ್ದೇ ಆದರೆ ‘ಭಾರಿ ಬೆಲೆ‘ ತೆರಬೇಕಾಗುತ್ತದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಎಚ್ಚರಿಸಿದ್ದಾರೆ.
ತಾವು ಅಧಿಕಾರಕ್ಕೆ ಏರಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುದ್ಧ ಸಾರುವುದಕ್ಕೆ ರಷ್ಯಾ ಇನ್ನೂ ಅಂತಿಮ ನಿರ್ಧಾರ ಕೈಗೊಂಡಂತೆ ಇಲ್ಲ, ಆದರೆ ಅದಕ್ಕೆ ತಯಾರಿ ಮಾಡಿಕೊಳ್ಳುತ್ತಿರುವುದಂತೂ ನಿಶ್ಚಿತ. ರಷ್ಯಾ ಇಂತಹ ದುಸ್ಸಾಹಸಕ್ಕೆ ಕೈಹಾಕಿದರೆ ಅಂತರರಾಷ್ಟ್ರೀಯ ಬ್ಯಾಂಕ್‌ಗಳಿಂದ ರಷ್ಯಾಕ್ಕೆ ಹಣ ದೊರಕದಂತೆ ಮಾಡುವುದು ನಿಶ್ಚಿತ ಎಂದರು.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರು ಉಕ್ರೇನ್‌ಗೆ ಭೇಟಿ ನೀಡಿದ ಬೆನ್ನಲ್ಲೇ ಬೈಡನ್ ಅವರಿಂದ ಈ ಎಚ್ಚರಿಕೆಯ ಸಂದೇಶ ಹೊರಬಿದ್ದಿದೆ. ಉಕ್ರೇನ್‌ನ ಗಡಿ ಭಾಗದಲ್ಲಿ ರಷ್ಯಾವು 1 ಲಕ್ಷ ಸೈನಿಕರನ್ನು ನಿಯೋಜಿಸಿದೆ, ಶೀಘ್ರ ಈ ಸಂಖ್ಯೆಯನ್ನು ದುಪ್ಪಟ್ಟುಗೊಳಿಸುವ ವ್ಯವಸ್ಥೆಯನ್ನೂ ಅದು ಮಾಡಿಕೊಂಡಿದೆ ಎಂದು ಬ್ಲಿಂಕೆನ್ ಅವರು ಉಕ್ರೇನ್‌ನ ರಾಜಧಾನಿ ಕಿವ್‌ನಲ್ಲಿ ಆರೋಪಿಸಿದ್ದರು.
2024ರಲ್ಲೂ ಕಮಲಾ ಹ್ಯಾರಿಸ್ ಅವರೇ ಉಪಾಧ್ಯಕ್ಷೆ ಅಭ್ಯರ್ಥಿ: 2024ರಲ್ಲಿ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ತಾವು ಸ್ಪರ್ಧಿಸಿದ್ದೇ ಆದರೆ ಕಮಲಾ ಹ್ಯಾರಿಸ್ ಅವರೇ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿರುತ್ತಾರೆ ಎಂದು ಜೋ ಬೈಡನ್ ಘೋಷಿಸಿದರು.
ಹ್ಯಾರಿಸ್ ಅವರು ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಏರಿದ ಮೊದಲ ಕಪ್ಪು ವರ್ಣೀಯ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದು, 79 ವರ್ಷದ ಬೈಡನ್ ಅವರು ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸದಿದ್ದರೆ ಕಮಲಾ ಅವರೇ ಅಭ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿರುತ್ತಾರೆ ಎಂದು ಹೇಳಲಾಗಿತ್ತು. ಆದರೆ ತಾವು ಮತ್ತೆ ಸ್ಪರ್ಧಿಸುವುದಾಗಿ ಬೈಡನ್ ಅವರು ಹೇಳುತ್ತಿದ್ದಾರೆ.
Read more from source
[wpas_products keywords=”deals of the day offer today electronic”]