Karnataka news paper

ರೇಣುಕಾಚಾರ್ಯ ಮಂತ್ರಿಯಾಗ್ಲಿ ಎಂದು ಆಶೀರ್ವಾದ ಮಾಡುತ್ತೇನೆ! ಯತ್ನಾಳ್


ಹೈಲೈಟ್ಸ್‌:

  • ಎಂಪಿ ರೇಣುಕಾಚಾರ್ಯ ಮಂತ್ರಿಯಾಗ್ಲಿ ಎಂದು ಆಶೀರ್ವಾದ ಮಾಡುತ್ತೇನೆ!
  • ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ
  • ರೇಣುಕಾಚಾರ್ಯ ಪರ ಬ್ಯಾಟಿಂಗ್ ನಡೆಸಿದ ಯತ್ನಾಳ್

ಬೆಂಗಳೂರು: ಎಂಪಿ ರೇಣುಕಾಚಾರ್ಯ ಅವರು ಸಚಿವರಾಗಲಿ ಎಂದು ನಾನು ಆಶೀರ್ವಾದ ಮಾಡುತ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ರೇಣುಕಾಚಾರ್ಯ ಪರ ಬ್ಯಾಟಿಂಗ್ ನಡೆಸಿದರು.

ಸಚಿವ ಸಂಪುಟ ರಚನೆಯಲ್ಲಿ ಅವಕಾಶ ಸಿಗುವ ವಿಚಾರವಾಗಿ ನಾನು ಏನು ಹೇಳಲು ಆಗುವುದಿಲ್ಲ. ಪಂಚರಾಜ್ಯ ಮುಗಿದ ಮೇಲೆ ಆಗುತ್ತೋ ಅಥವಾ ಅದಕ್ಕಿಂತ ಮೊದಲೇ ಆಗುತ್ತೋ ನೋಡೋಣ. ಆದ್ರೆ ಒಳ್ಳೆಯ ಬೆಳವಣಿಗೆ ಆಗುತ್ತೆ ಎಂದರು.

ರೇಣುಕಾಚಾರ್ಯ ಮಂತ್ರಿಯಾಗ್ಲಿ ಅಂತ ಆಶೀರ್ವಾದ ಮಾಡುತ್ತೇನೆ. ರೇಣುಕಾಚಾರ್ಯ ಯಾರಾದರೂ ನಾಯಕತ್ವ ಒಪ್ಪಿಕೊಂಡ್ರೆ ಅವರ ನಾಯತ್ವದಲ್ಲೇ ಇರ್ತಾರೆ ಎಂದರು.

ಇದೇ ಸಂದರ್ಭದಲ್ಲಿ ರೇಣುಕಾಚಾರ್ಯ ಬಿಎಸ್ವೈ ನಾಯಕತ್ವ ಅಥವಾ ಬಸವರಾಜ ಬೊಮ್ಮಾಯಿ ನಾಯಕತ್ವ ಒಪ್ಪಿಕೊಂಡಿದ್ದಾರಾ ಎಂಬ ಪ್ರಶ್ನೆಗೆ, ಅವರು ಬಿಜೆಪಿ ನಾಯಕತ್ವ ಒಪ್ಪಿಕೊಂಡಿದ್ದಾರೆ ಎಂದರು.

ಯತ್ನಾಳ್‌ ಅವರನ್ನು ಭೇಟಿ ಮಾಡಿದ್ದು ಆಕಸ್ಮಿಕ! ಎಂಪಿ ರೇಣುಕಾಚಾರ್ಯ

ಮೊದಲು ಕೊರೊನಾ ಸಮರ್ಥವಾಗಿ ಎದುರಿಸಬೇಕು. ಪಕ್ಷದ ಹೈಕಮಾಂಡ್ ಯಾವ ರೀತಿ ಬದಲಾವಣೆ ಮಾಡುತ್ತೆ ನೋಡೋಣ. ಗುಜರಾತ್ ಮಾದರಿಯಲ್ಲಿ ಮಾಡುತ್ತೋ ಅಥವಾ ಕರ್ನಾಟಕಕ್ಕೆ ಬೇರೆ ಮಾದರಿ ಮಾಡುತ್ತೋ ನೋಡೋಣ ಎಂದು ಹೇಳಿದರು.

ಸಚಿವ ಪುನರ್ ರಚನೆ ಇನ್ನು 15 ದಿವಸದಲ್ಲಿ ಆದ್ರೆ ಒಳ್ಳೆಯದು. ಮಾರ್ಚ್ ನಂತರ ಸಚಿವ ಸಂಪುಟ ರಚನೆ ಆದ್ರೆ ಎಂಬ ವಿಚಾರಕ್ಕೆ, ಅವಾಗ ಆದ್ರೆ ಏನು ಉಪಯೋಗ ಇಲ್ಲ, ಮಾಡುವುದಿದ್ರೆ ಇವಾಗ್ಲೇ ಮಾಡಿ. ಇಲ್ಲ ಅಂದರೆ ಶಾಸಕರಾಗಿ ಕೊನೆ ಪಕ್ಷ ಒಂದು ವರ್ಷ ಇದ್ದಾಗ ಮಾಡಿದ್ರೆ ಪರಿಣಾಮಕಾರಿಯಾಗಿ ಅಭಿವೃದ್ಧಿ ಮಾಡ್ಬಹುದು ಎಂದರು.



Read more

[wpas_products keywords=”deal of the day sale today offer all”]