ಹೈಲೈಟ್ಸ್:
- #ವಿಕ ವೆಬ್ ಸಿನಿಮಾ ಅವಾರ್ಡ್ಸ್ – 2021ರ ವಿಜೇತರ ಘೋಷಣೆ
- ‘ಅತ್ಯುತ್ತಮ ಪೋಷಕ ನಟ’ ಪ್ರಶಸ್ತಿಗೆ ಆಯ್ಕೆಯಾದ ನಟ ವಿನೋದ್ ಪ್ರಭಾಕರ್
- ‘ರಾಬರ್ಟ್’ ಚಿತ್ರದಲ್ಲಿ ಅಭಿನಯಿಸಿದ್ದ ವಿನೋದ್ ಪ್ರಭಾಕರ್
‘ವಿಜಯ ಕರ್ನಾಟಕ ವೆಬ್ ಸಿನಿಮಾ ಅವಾರ್ಡ್ಸ್-2021’ರ ‘ಅತ್ಯುತ್ತಮ ಪೋಷಕ ನಟ’ ಪ್ರಶಸ್ತಿಗೆ ‘ರಾಬರ್ಟ್’ ಸಿನಿಮಾದ ನಟ ವಿನೋದ್ ಪ್ರಭಾಕರ್ ಆಯ್ಕೆಯಾಗಿದ್ದಾರೆ.
ವಿಕ ವೆಬ್ ಸಿನಿಮಾ ಅವಾರ್ಡ್ಸ್ 2021: ‘ರಾಬರ್ಟ್’ ವಿಲನ್ ರವಿಶಂಕರ್ ದಿ ಬೆಸ್ಟ್..!
ಅತ್ಯುತ್ತಮ ಪೋಷಕ ನಟ ವಿನೋದ್ ಪ್ರಭಾಕರ್
ಕಳೆದ ವರ್ಷ.. ಅಂದ್ರೆ 2021ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಆಶಾ ಭಟ್, ರವಿಶಂಕರ್ ಅಭಿನಯದ ‘ರಾಬರ್ಟ್’ ಚಿತ್ರ ತೆರೆಗೆ ಬಂದಿತ್ತು. ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್’ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಪೋಷಕ ನಟನಾಗಿ ನಟಿಸಿದ್ದರು. ‘ರಾಬರ್ಟ್’ ಚಿತ್ರದಲ್ಲಿನ ವಿನೋದ್ ಪ್ರಭಾಕರ್ ಅವರ ಅಭಿನಯ ವೀಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ‘ವಿಜಯ ಕರ್ನಾಟಕ ವೆಬ್’ ವತಿಯಿಂದ ನಡೆಸಿದ ‘ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್’ನಲ್ಲೂ ‘ಅತ್ಯುತ್ತಮ ಪೋಷಕ ನಟ’ ವಿಭಾಗದಲ್ಲಿ ವಿನೋದ್ ಪ್ರಭಾಕರ್‌ಗೆ ಅತೀ ಹೆಚ್ಚು ವೋಟ್ಸ್ ಬಂದಿವೆ. ಹೀಗಾಗಿ ‘ರಾಬರ್ಟ್’ ಚಿತ್ರದ ನಟ ವಿನೋದ್ ಪ್ರಭಾಕರ್ ‘ಅತ್ಯುತ್ತಮ ಪೋಷಕ ನಟ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿಕ ವೆಬ್ ಸಿನಿಮಾ ಅವಾರ್ಡ್ಸ್ 2021: ‘ರಾಬರ್ಟ್’ ನಾಯಕಿ ಆಶಾ ಭಟ್ ‘ಅತ್ಯುತ್ತಮ ನಟಿ’
ಯಾರೆಲ್ಲಾ ನಾಮನಿರ್ದೇಶನಗೊಂಡಿದ್ದರು?
‘ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್’ನಲ್ಲಿ ‘ಅತ್ಯುತ್ತಮ ಪೋಷಕ ನಟ’ ವಿಭಾಗದಲ್ಲಿ ‘ರಾಬರ್ಟ್’ ಚಿತ್ರದ ವಿನೋದ್ ಪ್ರಭಾಕರ್, ‘ಯುವರತ್ನ’ ಚಿತ್ರದ ಪ್ರಕಾಶ್ ರೈ, ‘ರತ್ನನ್ ಪ್ರಪಂಚ’ ಚಿತ್ರದ ಪ್ರಮೋದ್, ‘ಸಲಗ’ ಸಿನಿಮಾದ ಧನಂಜಯ, ‘ಪುಕ್ಸಟ್ಟೆ ಲೈಫು’ ಸಿನಿಮಾದ ಅಚ್ಯುತ್ ಕುಮಾರ್ ನಾಮನಿರ್ದೇಶನಗೊಂಡಿದ್ದರು.
ವಿಕ ವೆಬ್ ಸಿನಿಮಾ ಅವಾರ್ಡ್ಸ್: ‘ಅತ್ಯುತ್ತಮ ಪೋಷಕ ನಟ’ ವಿಭಾಗದಲ್ಲಿ ವಿನೋದ್ ಪ್ರಭಾಕರ್ ಎಲ್ಲರಿಗಿಂತ ಮುಂದೆ!
ವೋಟಿಂಗ್‌ನಲ್ಲಿ ಅಂತಿಮವಾಗಿ ವಿನೋದ್ ಪ್ರಭಾಕರ್‌ಗೆ 76%, ಪ್ರಕಾಶ್ ರೈಗೆ 10%, ಪ್ರಮೋದ್‌ಗೆ 10%, ಧನಂಜಯಗೆ 3%, ಅಚ್ಯುತ್ ಕುಮಾರ್‌ಗೆ 1% ಮತಗಳು ಲಭ್ಯವಾಗಿವೆ. ಹೀಗಾಗಿ, ಅತಿ ಹೆಚ್ಚು ವೋಟ್ಸ್ ಪಡೆದ ವಿನೋದ್ ಪ್ರಭಾಕರ್ ‘ಅತ್ಯುತ್ತಮ ಪೋಷಕ ನಟ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
‘ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್’ನಲ್ಲಿ ನೀವು ನೀಡಿದ ಮತಗಳ ಆಧಾರದ ಮೇಲೆ ‘ವಿಜಯ ಕರ್ನಾಟಕ ವೆಬ್ ಸಿನಿಮಾ ಅವಾರ್ಡ್ಸ್-2021’ ಘೋಷಿಸಲಾಗಿದೆ.
Read more
[wpas_products keywords=”deal of the day party wear dress for women stylish indian”]