
ಹೌದು, ಓರಿಜಿನಲ್ ಡ್ರೈವಿಂಗ್ ಲೈಸೆನ್ಸ್ ಕಳೆದುಹೋದರೆ ಬಳಕೆದಾರರು ಸಾರಿಗೆ ಇಲಾಖೆಯಿಂದ ನಕಲಿ ಡ್ರೈವಿಂಗ್ ಲೈಸೆನ್ಸ್ (Duplicate Driving Licence) ಪಡೆಯಬಹುದು. ಆದರೆ ನಕಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಕೆಲವು ಸುಕ್ತ ಕ್ರಮಗಳನ್ನು ನೀವು ಅನುಸರಿಸಬೇಕಿದೆ. ನಿಮ್ಮ ಡ್ರೈವಿಂಗ್ ಲೈಸೆನ್ಸ್ ಕಳೆದುಹೋಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಬೇಕಿರುತ್ತದೆ. ನಕಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಎಫ್‌ಐಆರ್ ಪ್ರತಿ ಅಗತ್ಯ ಇರುತ್ತದೆ. ಹಾಗಾದರೆ ಡ್ರೈವಿಂಗ್ ಲೈಸೆನ್ಸ್ ಕಳೆದುಹೋದಾಗ ಆನ್‌ಲೈನ್ ಮೂಲಕ ನಕಲಿ ಡ್ರೈವಿಂಗ್ ಲೈಸೆಸ್ಸ್ ದಾಖಲೆಯನ್ನು ಪಡೆಯುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿ.

ಡುಬ್ಲಿಕೇಟ್ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಈ ಕ್ರಮಗಳನ್ನು ಅನುಸರಿಸಿ:
* ಮೊದಲು ರಸ್ತೆ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ (https://parivahan.gov.in/parivahan/) ಭೇಟಿ ನೀಡಿ.
* ನಂತರ ಅಲ್ಲಿ ನೀವು ಡ್ರಾಪ್ ಡೌನ್ ಮೆನುವಿನಲ್ಲಿ ಕರ್ನಾಟಕ ರಾಜ್ಯವನ್ನು ಆಯ್ಕೆಮಾಡಿ.
* ಮುಂದಿನ ವಿಂಡೋದಲ್ಲಿ, ‘ಸರ್ವಿಸ್ ಆನ್ ಡ್ರೈವಿಂಗ್ ಲೈಸೆನ್ಸ್’ ಆಯ್ಕೆಯನ್ನು ಆಯ್ಕೆ.
* ನಂತರ ದಯವಿಟ್ಟು ‘ಆನ್‌ಲೈನ್‌ನಲ್ಲಿ ಅನ್ವಯಿಸು’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
* ಕೆಳಗಿನ ಪರದೆಯಲ್ಲಿ ದಯವಿಟ್ಟು ವಿವರಗಳನ್ನು ಓದಿ ಮತ್ತು ಮುಂದಿನ ಸ್ಕ್ರೀನ್ ಅನ್ನು ಪಡೆಯಲು “ಮುಂದುವರಿಸಿ” ಆಯ್ಕೆ ಕ್ಲಿಕ್ ಮಾಡಿರಿ.
* ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, LLD ಫಾರ್ಮ್ ಅನ್ನು ಭರ್ತಿ ಮಾಡಿ.
* ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ನಿಮ್ಮ ಪ್ರಿಂಟ್ ಔಟ್ ತೆಗೆದುಕೊಂಡು ಅದನ್ನು ಇರಿಸಿಕೊಳ್ಳಿ.

* ಇದರೊಂದಿಗೆ, ನಿಮ್ಮ ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಿದ ಬಳಿಕ ಈ ಫಾರ್ಮ್ ಅನ್ನು ಹತ್ತಿರದ RTO ಕಚೇರಿಗೆ ಹೋಗಿ ಸಲ್ಲಿಸಬೇಕು.
* ಸ್ವೀಕೃತಿ ಸೇರಿದಂತೆ ಅರ್ಜಿ ನಮೂನೆಯ ಪ್ರಿಂಟೌಟ್ ತೆಗೆದುಕೊಂಡು ಹತ್ತಿರದ RTO ಕಚೇರಿಗೆ ಹೋಗಿ ಮತ್ತು RTO ಅಧಿಕಾರಿಗೆ ಅರ್ಜಿಯನ್ನು ಸಲ್ಲಿಸಿ.
* ಅವರು ಪಾವತಿಸಬೇಕಾದ ಶುಲ್ಕದ ಮೊತ್ತವನ್ನು ತಿಳಿಸುತ್ತಾರೆ.
* ಬಳಿಕ ಅಧಿಕೃತ ಕೌಂಟರ್‌ನಲ್ಲಿ ಶುಲ್ಕವನ್ನು ಪಾವತಿಸಿ ಮತ್ತು ಅರ್ಜಿಯನ್ನು ಪ್ರಕ್ರಿಯೆಗೊಳಿಸಲು ಅರ್ಜಿ ಮತ್ತು ದಾಖಲೆಗಳನ್ನು ಸಲ್ಲಿಸಿ.
* ಈ ಪ್ರಕ್ರಿಯೆ ಮುಗಿದ 30 ದಿನಗಳ ನಂತರ ನೀವು ನಕಲು DL ಅನ್ನು ಪಡೆಯುತ್ತೀರಿ.

ಆಫ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ
ನಕಲಿ ಡಿಎಲ್ ಪಡೆಯಲು ಆಫ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶ ಇದೆ. ಇದಕ್ಕಾಗಿ, ಮೊದಲು RTO ಆಫೀಸ್‌ಗೆ ಭೇಟಿ ನೀಡಿ. ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು. ನೀವು RTO ಕಚೇರಿಗೆ ಹೋಗಿ ಶುಲ್ಕವನ್ನು ಪಾವತಿಸುವ ಮೂಲಕ ಎಲ್‌ಎಲ್‌ಡಿ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ನೀವು 30 ದಿನಗಳ ನಂತರ ನಿಮ್ಮ ನಕಲಿ ಚಾಲನಾ ಪರವಾನಗಿಯನ್ನು ಪಡೆಯುತ್ತೀರಿ. ಈ ವೇಳೆ, ನೀವು ರಶೀದಿಯನ್ನು ಸಹ ಪಡೆಯುತ್ತೀರಿ, ಅದನ್ನು ಕಾಯ್ದಿಟ್ಟುಕೊಳ್ಳುವುದು ಅಗತ್ಯ. ನಕಲು DL ಅನ್ನು ಸ್ವೀಕರಿಸಿದಾಗ, ಈ ರಶೀದಿಯ ಅಗತ್ಯವಿರುತ್ತದೆ. ಈ ರಸೀದಿಯ ಮೂಲಕ ನಿಮ್ಮ ನಕಲಿ DL ಅನ್ನು ಸಹ ನೀವು ಟ್ರ್ಯಾಕ್ ಮಾಡಬಹುದು.
Read more…
[wpas_products keywords=”smartphones under 15000 6gb ram”]