ಹೈಲೈಟ್ಸ್:
- ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಓಡಿಐ ಸರಣಿ.
- ಶುಕ್ರವಾರ ಎರಡನೇ ಓಡಿಐ ಪಂದ್ಯದಲ್ಲಿ ಸೆಣಸಲಿರುವ ಭಾರತ-ದ. ಆಫ್ರಿಕಾ.
- ಎರಡನೇ ಓಡಿಐ ಪಂದ್ಯಕ್ಕೆ ಭಾರತ ತಂಡದಲ್ಲಿ ಎರಡು ಬದಲಾವಣೆ ಸಾಧ್ಯತೆ.
ಮೂರು ಪಂದ್ಯಗಳ ಏಕದಿನ ಸರಣಿಯನ್ನು ಜೀವಂತವಾಗಿ ಉಳಿಸಿಕೊಳ್ಳಬೇಕೆಂದರೆ ಟೀಮ್ ಇಂಡಿಯಾ ನಾಳಿನ(ಜ.21) ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯ. ಗೆಲ್ಲಲೇಬೇಕಾದ ಅನಿವಾರ್ಯತೆಗೆ ಒಳಗಾಗಿರುವ ಭಾರತ ತಂಡ ಎರಡನೇ ಓಡಿಐಗೆ ತನ್ನ ಆಡುವ 11ರ ಬಳಗದಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ಕೆ.ಎಲ್ ರಾಹುಲ್, ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಗ್ರ ಮೂರು ಕ್ರಮಾಂಕದಲ್ಲಿ ಆಡುವುದು ಬಹುತೇಕ ಖಚಿತ. ಆದರೆ ಕಳೆದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಹಿನ್ನೆಲೆಯಲ್ಲಿ ಶ್ರೇಯಸ್ ಅಯ್ಯರ್ ಬದಲು ನಾಲ್ಕನೇ ಕ್ರಮಾಂಕಕ್ಕೆ ಸೂರ್ಯಕುಮಾರ್ ಯಾದವ್ ಅವರನ್ನು ಕರೆ ತರಬಹುದು.
ದಕ್ಷಿಣ ಆಫ್ರಿಕಾ ವಿರುದ್ಧ 31 ರನ್‌ನಿಂದ ಸೋಲು ಒಪ್ಪಿಕೊಂಡ ಭಾರತ!
ಮೊದಲನೇ ಪಂದ್ಯದಲ್ಲಿ 17 ಎಸೆತಗಳಲ್ಲಿ 17 ರನ್ ಗಳಿಸಿ ಆಡುತ್ತಿದ್ದ ಶ್ರೇಯಸ್ ಅಯ್ಯರ್, ಶಾರ್ಟ್ ಬಾಲ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದ್ದರು. ಆ ಮೂಲಕ ಟೀಮ್ ಮ್ಯಾನೇಜ್‌ಮೆಂಟ್‌ಗೆ ನಿರಾಶೆ ಮೂಡಿಸಿದ್ದರು. ಇವರ ಜೊತೆಗೆ ರಿಷಭ್ ಪಂತ್ ಕೂಡ ಸ್ಟಂಪ್ ಔಟ್ ಆಗುವ ಮೂಲಕ ವೈಫಲ್ಯ ಅನುಭವಿಸಿದ್ದರು.
ಈ ಹಿನ್ನೆಲೆಯಲ್ಲಿ ಭಾರತ ತಂಡದ ಮಧ್ಯಮ ಕ್ರಮಾಂಕದ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಟೀಮ್ ಮ್ಯಾನೇಜ್‌ಮೆಂಟ್ ನಂಬಿಕಸ್ಥ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರನ್ನು ಪ್ಲೇಯಿಂಗ್ ಇಲೆವೆನ್‌ಗೆ ಕರೆತರುವ ಸಾಧ್ಯತೆ ಇದೆ. ಇನ್ನುಳಿದಂತೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾವುದೇ ಬದಲಾವಣೆ ಮಾಡುವುದು ಅನುಮಾನ.
ವೆಂಕಟೇಶ್ ಅಯ್ಯರ್‌ಗೆ ಬೌಲಿಂಗ್ ನೀಡದೆ ಇರಲು ಕಾರಣ ತಿಳಿಸಿದ ಧವನ್!
ಇನ್ನು ಬೌಲಿಂಗ್ ವಿಭಾಗದಲ್ಲಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್ ಅವರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡಿಸಬಹುದು. ಮೊದಲನೇ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ 10 ಓವರ್‌ಗಳಿಗೆ 62 ರನ್ ಬಿಟ್ಟು ಕೊಟ್ಟು ಒಂದೇ ಒಂದು ವಿಕೆಟ್ ಪಡದಿರಲಿಲ್ಲ.
ಇದೀಗ ಸಂಪೂರ್ಣ ಫಿಟ್‌ನೆಸ್‌ನೊಂದಿಗೆ ತಂಡಕ್ಕೆ ಮರಳಿರುವ ಮೊಹಮ್ಮದ್ ಸಿರಾಜ್, ಹೊಸ ಚೆಂಡಿನೊಂದಿಗೆ ಹಾಗೂ ಡೆತ್ ಓವರ್‌ಗಳಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಹಾಗಾಗಿ ಟೀಮ್ ಮ್ಯಾನೇಜ್‌ಮೆಂಟ್ ಹೈದರಾಬಾದ್ ಮೂಲದ ವೇಗಿಗೆ ಮಣೆ ಹಾಕಬಹುದು.
‘ಸುಲಭವಾಗಿ ಚೇಸ್ ಮಾಡಬಹುದಿತ್ತು’ ಸೋಲಿಗೆ ಕಾರಣ ತಿಳಿಸಿದ ರಾಹುಲ್!
ಎರಡನೇ ಓಡಿಐ ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್..
- ಕೆ.ಎಲ್ ರಾಹುಲ್(ಆರಂಭಿಕ/ನಾಯಕ)
- ಶಿಖರ್ ಧವನ್(ಆರಂಭಿಕ)
- ವಿರಾಟ್ ಕೊಹ್ಲಿ(ಬ್ಯಾಟ್ಸ್‌ಮನ್)
- ಸೂರ್ಯಕುಮಾರ್ ಯಾದವ್(ಬ್ಯಾಟ್ಸ್‌ಮನ್)
- ರಿಷಭ್ ಪಂತ್(ವಿಕೆಟ್ ಕೀಪರ್)
- ವೆಂಕಟೇಶ್ ಅಯ್ಯರ್(ಆಲ್‌ರೌಂಡರ್)
- ಶಾರ್ದುಲ್ ಠಾಕೂರ್(ಆಲ್‌ರೌಂಡರ್)
- ಆರ್ ಅಶ್ವಿನ್ (ಸ್ಪಿನ್ನರ್)
- ಜಸ್‌ಪ್ರಿತ್ ಬುಮ್ರಾ(ವೇಗಿ)
- ಮೊಹಮ್ಮದ್ ಸಿರಾಜ್(ವೇಗಿ)
- ಯುಜ್ವೇಂದ್ರ ಚಹಲ್(ಸ್ಪಿನ್ನರ್)
ಒಡಿಐ ರನ್ ಗಳಿಕೆಯಲ್ಲಿ ಸಚಿನ್ ದಾಖಲೆ ಮುರಿದ ‘ಕಿಂಗ್ ಕೊಹ್ಲಿ’!
ಪಂದ್ಯದ ವಿವರ
ಭಾರತ vs ದಕ್ಷಿಣ ಆಫ್ರಿಕಾ
ಎರಡನೇ ಏಕದಿನ ಪಂದ್ಯ
ದಿನಾಂಕ: ಜ.21, 2022
ಸಮಯ: ಮಧ್ಯಾಹ್ನ 2:00(ಭಾರತೀಯ ಕಾಲಮಾನ)
ಸ್ಥಳ: ಬೊಲೆಂಡ್ ಪಾರ್ಕ್, ಪಾರ್ಲ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
Read more
[wpas_products keywords=”deal of the day gym”]