Karnataka news paper

ಅಂತಾರಾಜ್ಯ ಜಲವಿವಾದ; ಪ್ರಕರಣಗಳ ಕುರಿತಾಗಿ ಚರ್ಚಿಸಲು ಭಾನುವಾರ ಸಭೆ ಕರೆದ ಬಸವರಾಜ ಬೊಮ್ಮಾಯಿ


ಹೈಲೈಟ್ಸ್‌:

  • ಅಂತಾರಾಜ್ಯ ಜಲವಿವಾದ ಪ್ರಕರಣಗಳ ವಿಚಾರ
  • ಚರ್ಚಿಸಲು ಭಾನುವಾರ ಸಭೆ ಕರೆದ ಬಸವರಾಜ ಬೊಮ್ಮಾಯಿ
  • ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯಲಿರುವ ಸಭೆ

ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆಯಲ್ಲಿ ಅಂತಾರಾಜ್ಯ ಜಲವಿವಾದದ ಕುರಿತಾಗಿ ಚರ್ಚಿಸಲು ಸಿಎಂ ಬಸವರಾಜ ಬೊಮ್ಮಾಯಿ ಸಭೆಯನ್ನು ಕರೆದಿದ್ದಾರೆ. ಜನವರಿ 22 ಭಾನುವಾರ ಸಭೆ ನಡೆಯಲಿದೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದ್ದು ಹಿರಿಯ ಅಧಿಕಾರಿಗಳು ಹಾಗೂ ತಜ್ಞರ ಜೊತೆ ಸಿಎಂ ವರ್ಚುವಲ್ ಮೂಲಕ ಚರ್ಚೆ ನಡೆಸಲಿದ್ದಾರೆ. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿತ್ತು. ಆದರೆ ಕೋವಿಡ್ ಕಾರಣಕ್ಕಾಗಿ ಸದ್ಯ ಪಾದಯಾತ್ರೆ ರದ್ದಾಗಿದೆ.

ಜನರಿಗೆ ತೊಂದರೆ ಕೊಡಲು ಸರ್ಕಾರಕ್ಕೆ ಇಷ್ಟವಿಲ್ಲ; ಡಾ. ಕೆ ಸುಧಾಕರ್

ಇನ್ನೇನು ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಬೆನ್ನಲ್ಲೇ ಮತ್ತೆ ಪಾದಯಾತ್ರೆ ಹಮ್ಮಿಕೊಳ್ಳಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೂ ಒತ್ತಡ ಹೆಚ್ಚಾಗಲಿದೆ.

ಇಷ್ಟೇ ಅಲ್ಲದೆ ನೀರಾವರಿ ಯೋಜನೆಗಳ ಜಾರಿಗೆ ಆಗ್ರಹಿಸಿ ಜೆಡಿಎಸ್‌ ಕೂಡಾ ಜಲಧಾರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧಾರ ಮಾಡಿದೆ. ಚುನಾವಣೆ ದೃಷ್ಟಿಯಿಂದ ಇದು ರಾಜಕೀಯ ಆಯಾಮಗಳನ್ನು ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಈ ನಿಟ್ಟಿನಲ್ಲಿ ಅಂತರರಾಜ್ಯ ಜಲವಿವಾದದ ಕುರಿತಾಗಿ ಸಿಎಂ ಕರೆದ ಸಭೆ ಮಹತ್ವ ಪಡೆದುಕೊಂಡಿದೆ. ಮೇಕೆದಾಟು, ಮಹದಾಯಿ ಯೋಜನೆಗಳ ಜಾರಿಗೆ ಇರುವ ಅಡೆತಡೆಗಳು, ಕಾನೂನಾತ್ಮಕ ತೊಡಕುಗಳ ಕುರಿತಾಗಿ ಸಭೆಯಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ.

ಅಷ್ಟೇ ಅಲ್ಲದೆ ಸದ್ಯ ಯೋಜನೆಗಳ ಜಾರಿಗೆ ರಾಜ್ಯ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳೇನು? ಹಾಗೂ ಕಾನೂನಾತ್ಮಕವಾಗಿ ಸಮಸ್ಯೆಗಳನ್ನು ಯಾವ ರೀತಿಯಾಗಿ ಬಗೆಹರಿಸಬೇಕು, ನ್ಯಾಯಾಲಯದಲ್ಲಿರುವ ಪ್ರಕರಣಗಳ ಸ್ಥಿತಿಗತಿಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.



Read more

[wpas_products keywords=”deal of the day sale today offer all”]