Karnataka news paper

ಸ್ಟವ್‌ನಿಂದ ಬಂದ ವಿಷಪೂರಿತ ಹೊಗೆ: ಮಹಿಳೆ ಮತ್ತು ಆಕೆಯ ನಾಲ್ವರು ಮಕ್ಕಳು ದುರ್ಮರಣ


ಹೈಲೈಟ್ಸ್‌:

  • ದಿಲ್ಲಿಯ ಶಹದರಾ ಪ್ರದೇಶದ ಸೀಮಾಪುರಿಯಲ್ಲಿ ನಡೆದ ದುರಂತ
  • ಸ್ಟವ್‌ನಿಂದ ಬಂದ ವಿಷಯುಕ್ತ ಹೊಗೆ ಸೇವಿಸಿ ತಾಯಿ-ಮಕ್ಕಳ ಸಾವು
  • ಚಳಿಯಿಂದ ಕೊಠಡಿಯನ್ನು ಬೆಚ್ಚಗಾಗಿಸಲು ಸ್ಟವ್ ಹಚ್ಚಿದ್ದ ತಾಯಿ

ಹೊಸದಿಲ್ಲಿ: ವಿಷಪೂರಿತ ಹೊಗೆ ಸೇವನೆಯಿಂದ 30 ವರ್ಷದ ಮಹಿಳೆ ಮತ್ತು ಆಕೆಯ ನಾಲ್ವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಮನಕಲಕುವ ಘಟನೆ ದಿಲ್ಲಿಯ ಶಹದರಾದ ಸೀಮಾಪುರಿ ಪ್ರದೇಶದಲ್ಲಿ ಬುಧವಾರ ನಡೆದಿದೆ. ಕೊಠಡಿಯೊಳಗೆ ಇರಿಸಿದ್ದ ಸ್ಟವ್‌ನಿಂದ ವಿಷಪೂರಿತ ಹೊಗೆ ಹೊರಬಂದಿದ್ದು, ಈ ಐವರನ್ನು ಬಲಿ ತೆಗೆದುಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಓಲ್ಡ್ ಸೀಮಾಪುರಿ ಪ್ರದೇಶದ ಮನೆಯೊಂದರ ಐದನೇ ಮಹಡಿಯಲ್ಲಿನ ಕೊಠಡಿಯಲ್ಲಿ ನಾಲ್ಕರಿಂದ ಐದು ಮಂದಿ ಪ್ರಜ್ಞಾಹೀನರಾಗಿ ಬಿದ್ದಿರುವ ಬಗ್ಗೆ ಬುಧವಾರ ಮಧ್ಯಾಹ್ನ 1.30ರ ವೇಳೆಗೆ ಪೊಲೀಸರಿಗೆ ಕರೆ ಬಂದಿತ್ತು. ಅಲ್ಲಿಗೆ ತೆರಳಿದ ಪೊಲೀಸರಿಗೆ, ಮಹಿಳೆ ಹಾಗೂ ಆಕೆಯ ಮೂವರು ಮಕ್ಕಳು ಮೃತಪಟ್ಟಿರುವುದು ಕಂಡುಬಂದಿತು. ಕಿರಿಯ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆ ಮಗು ಕೂಡ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜನನಿಬಿಡ ಹೂವಿನ ಮಾರುಕಟ್ಟೆಯಲ್ಲಿ ಅನುಮಾನಾಸ್ಪದ ಬ್ಯಾಗ್ ಒಳಗೆ ಬಾಂಬ್ ಪತ್ತೆ
ಮೋಹಿತ್ ಕಾಲಿಯಾ (35) ಎಂಬಾತ ತನ್ನ ಪತ್ನಿ ರಾಧಾ ಹಾಗೂ ಇಬ್ಬರು ಹೆಣ್ಣ ಮತ್ತು ಇಬ್ಬರು ಗಂಡು ಮಕ್ಕಳ ಜತೆಗೆ ಇಲ್ಲಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈ ಫ್ಲ್ಯಾಟ್ ಅಮರ್ಪಾಲ್ ಸಿಂಗ್ ಎಂಬುವವರಿಗೆ ಸೇರಿದ್ದಾಗಿದೆ ಎಂದು ಶಹದರಾ ಪೊಲೀಸ್ ಆಯುಕ್ತ ಆರ್. ಸತ್ಯಸುಂದರಂ ತಿಳಿಸಿದ್ದಾರೆ.

ಆ ಸಣ್ಣ ಕೊಠಡಿಯಲ್ಲಿ ವೆಂಟಿಲೇಷನ್ ವ್ಯವಸ್ಥೆ ಇರಲಿಲ್ಲ. ವಿಪರೀತ ಚಳಿ ಇದ್ದಿದ್ದರಿಂದ ಕೊಠಡಿಯನ್ನು ಬೆಚ್ಚಗಾಗಿಸಲು ಸ್ಟವ್ ಹಚ್ಚಿದ್ದರು. ಇದರಿಂದ ಬಂದ ವಿಷಕಾರಿ ಅನಿಲವು ಕೊಠಡಿಯನ್ನು ಆವರಿಸಿತ್ತು. ಜತೆಗೆ ಇವರೆಲ್ಲರೂ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆ ತಿಳಿಸಿದೆ. ಆದರೆ ಮರಣೋತ್ತರ ಪರೀಕ್ಷೆ ವರದಿ ಬಳಿಕ ಸಾವಿಗೆ ನೈಜ ಕಾರಣ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.



Read more

[wpas_products keywords=”deal of the day sale today offer all”]