Karnataka news paper

ಡಿಸೆಂಬರ್ 22 ರಂದು ‘ಗಜಾನನ ಅಂಡ್ ಗ್ಯಾಂಗ್’ ಟ್ರೈಲರ್ ಬಿಡುಗಡೆ


Source : The New Indian Express

ಬೆಂಗಳೂರು: ನಟ ಅಭಿಷೇಕ್ ಶೆಟ್ಟಿ ನಿರ್ದೇಶನದ, ಹಾಗೂ ಶ್ರೀ ಮಹಾದೇವ್, ಅದಿತಿ ಪ್ರಭುದೇವ್ ಅಭಿನಯದ ಗಜಾನನ ಆಂಡ್ ಗ್ಯಾಂಗ್ ಚಿತ್ರದ ಟ್ರೈಲರ್ ಇದೇ ಡಿಸೆಂಬರ್ 22 ರಂದು ಬಿಡುಗಡೆಯಾಗಲಿದೆ.

ಈ ಚಿತ್ರದಲ್ಲಿ ಶ್ರೀ ಮಹಾದೇವ್ ನಾಯಕನಾಗಿ ನಟಿಸುತ್ತಿದ್ದು, ಅವರಿಗೆ ಜೋಡಿಯಾಗಿ ಅದಿತಿ ಪ್ರಭುದೇವ್ ಅವರು ನಟಿಸುತ್ತಿದ್ದಾರೆ. 

ನಮ್ ಗಣಿ ಬಿಕಾಂ ಪಾಸ್ ಚಿತ್ರದ ನಂತರ ಇದು ಅಭಿಷೇಕ್ ಶೆಟ್ಟಿ ನಿರ್ದೇಶನದ ಎರಡನೇ ಚಿತ್ರ ಇದಾಗಿದ್ದು, ಈ ಚಿತ್ರಕ್ಕೆ ಪ್ರದ್ಯೋತ್ತನ್ ಸಂಗೀತ ನೀಡಿದ್ದಾರೆ. ಇತ್ತೀಚೆಗೆ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಡಿರುವ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಈಗ ಡಿಸೆಂಬರ್ 22ರಂದು ಟ್ರೈಲರ್ ಬಿಡುಗಡೆ ಮಾಡುವುದಾಗಿ ಹೇಳಿದೆ.

ಪಕ್ಕಾ ಹಾಸ್ಯ ಪ್ರಧಾನ ಮತ್ತು ಯುವ ಪೀಳಿಗೆ ಸುತ್ತ ಗಿರಕಿ ಹೊಡೆಯುವ ಕಥೆ ‘ಗಜಾನನ ಅಂಡ್ ಗ್ಯಾಂಗ್’ ಚಿತ್ರದಲ್ಲಿದ್ದು, ಚಿತ್ರದ ನಿರ್ದೇಶಕ ಅಭಿಷೇಕ್ ಚಿತ್ರದ ಪ್ರಮುಖ ಘಟ್ಟದಲ್ಲಿ ಕಾಣಿಸಿಕೊಳ್ಳಲಿದ್ದಾರೆ.



Read more…