ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ನಾಳೆ ಸಿಎಂ ನೇತೃತ್ವದಲ್ಲಿ ಸಭೆ ಇದೆ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ತೀವಿ. ಬೆಂಗಳೂರಿನಲ್ಲಿ ಟಫ್ ರೂಲ್ಸ್ ಬೇಕಾ ಬೇಡವಾ ಅಂತ ನಾಳೆಯ ಸಭೆಯಲ್ಲಿ ಚರ್ಚೆ ಆಗುತ್ತೆ ಎಂದರು.
ರಾಜ್ಯದಲ್ಲಿ ದಿನಕ್ಕೆ 1.20 ಲಕ್ಷ ದಷ್ಟು ಕೇಸ್ ಬರುತ್ತದೆ ಅಂತ ತಜ್ಞರು ಹೇಳಿದ್ದಾರೆ. ಬೆಸ್ಟ್ ಕೇಸ್ ಆದ್ರೆ 60-70 ಕೇಸ್ ಬರುತ್ತೆ ಅಂತ ತಜ್ಞರು ಹೇಳಿದ್ದಾರೆ ತಾಂತ್ರಿಕ ಸಮಿತಿ ತಜ್ಞರು ವರದಿ ಕೊಟ್ಟಿದ್ದಾರೆ. ತಜ್ಞರ ಜೊತೆ ಚರ್ಚೆ ಬಳಿಕ ಮುಂದಿನ ತೀರ್ಮಾನ ಮಾಡ್ತೀವಿ. ನಾಳೆ ಸಭೆಯಲ್ಲಿ ಅಂಕಿ ಅಂಶಗಳ ಮೇಲೆ ಚರ್ಚೆ ಆಗುತ್ತೆ. ಈಗ ತೆಗೆದುಕೊಂಡಿರೋ ಕ್ರಮಗಳ ಇಂಪ್ಯಾಕ್ಟ್ ಬಗ್ಗೆ ಚರ್ಚೆ ಮಾಡ್ತೀವಿ. ನಂತರ ತಜ್ಞರ ಸಲಹೆಯಂತೆ ಮುಂದಿನ ಕ್ರಮ ತಗೋತೀವಿ ಎಂದರು.
ಬಳ್ಳಾರಿಯಲ್ಲಿ ಟೆಸ್ಟಿಂಗ್ ನಲ್ಲಿ ಗೊಂದಲ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅವರು ವರದಿ ಬಂದ ಬಳಿಕ ಎಷ್ಟು ಗಂಟೆ ಬಳಿಕ ಟೆಸ್ಟ್ ಮಾಡಿಸಿಕೊಂಡಿದ್ದಾರೆ? ಅದನ್ನು ಮೊದಲು ತಿಳಿದುಕೊಳ್ಳಬೇಕಾಗುತ್ತದೆ. ನಾನು ಬಳ್ಳಾರಿ ಡಿಎಚ್‌ಓ ಜೊತೆಗೆ ಮಾತನಾಡಿ ತಿಳಿದುಕೊಳ್ಳುತ್ತೇನೆ ಎಂದು ತಿಳಿಸಿದರು.
Read more
[wpas_products keywords=”deal of the day sale today offer all”]