Online Desk
ಪಾರ್ಲ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 31 ರನ್ ಗಳಿಗೆ ಸೋಲು ಕಂಡಿದೆ.
ಪಾರ್ಲ್ ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 296 ರನ್ ಪೇರಿಸಿತ್ತು.
ಆಫ್ರಿಕಾ ನೀಡಿದ 297 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್ ಪೇರಿಸಿದ್ದು 31 ರನ್ ಗಳಿಂದ ಸೋಲು ಕಂಡಿದೆ.
ಭಾರತ ಪರ ಬ್ಯಾಟಿಂಗ್ ನಲ್ಲಿ ಕೆಎಲ್ ರಾಹುಲ್ 12, ಶಿಖರ್ ಧವನ್ 79, ಕೊಹ್ಲಿ 51, ಶಾರ್ದೂಲ್ ಠಾಕೂರ್ 50 ರನ್ ಬಾರಿಸಿದ್ದಾರೆ.
ಆಫ್ರಿಕಾ ಪರ ಎನ್ಗಡಿ, ತಬ್ರೈಸ್ ಮತ್ತು ಫೆಹ್ಲುಕ್ವಾಯೊ ತಲಾ 2 ವಿಕೆಟ್ ಪಡೆದಿದ್ದಾರೆ.
ಆಫ್ರಿಕಾ ಪರ ಡಿಕಾಕ್ 27, ಬವುಮಾ 110, ದುಸೇನ್ ಅಜೇಯ 129 ರನ್ ಬಾರಿಸಿದ್ದು ತಂಡದ ಬೃಹತ್ ಮೊತ್ತ ಕಲೆ ಹಾಕಲು ಸಾಧ್ಯವಾಯಿತು. ಭಾರತ ಪರ ಬೌಲಿಂಗ್ ನಲ್ಲಿ ಜಸ್ ಪ್ರೀತ್ ಬುಮ್ರಾ 2 ಮತ್ತು ಅಶ್ವಿನ್ 1 ವಿಕೆಟ್ ಪಡೆದಿದ್ದಾರೆ.
Read more…
[wpas_products keywords=”deal of the day sports items”]