ಹೈಲೈಟ್ಸ್:
- ಬಿಪಿನ್ ರಾವತ್ ಸೋದರ ವಿಜಯ್ ಬಿಜೆಪಿ ಸೇರ್ಪಡೆ
- ನಿವೃತ್ತ ಸೇನಾಧಿಕಾರಿಯಾಗಿರುವ ಕರ್ನಲ್ ವಿಜಯ್ ರಾವತ್
- ಉತ್ತರಾಖಂಡದ ಪೌರಿ ಘರ್‌ವಾಲ್ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ?
ಉತ್ತರಾಖಂಡ ವಿಧಾನಸಭೆ ಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೇ, ಜನರಲ್ ಬಿಪಿನ್ ರಾವತ್ ಅವರ ತವರು ನೆಲೆಯಾದ ಉತ್ತರಾಖಂಡದ ಪೌರಿ ಘರ್‌ವಾಲ್ ವಿಧಾನಸಭೆ ಕ್ಷೇತ್ರದಿಂದ ಸೋದರ ವಿಜಯ್ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಕಮಲ ಪಾಳಯಕ್ಕೆ ಸೇರಿದ ಬಳಿಕ ಮಾತನಾಡಿದ ವಿಜಯ್, ”ನನ್ನ ತಂದೆ ಕೂಡ ಬಿಜೆಪಿ ಜತೆಗೆ ಒಡನಾಟ ಹೊಂದಿದ್ದರು. ಅದೇ ಪಕ್ಷದಲ್ಲಿ ನಾನು ದುಡಿಯಲು ಉತ್ಸಾಹವಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿಶಿಷ್ಟ ಚಿಂತನೆ ಮತ್ತು ದೃಷ್ಟಿಕೋನ ನನ್ನನ್ನು ಪ್ರೇರೇಪಿಸಿದೆ,” ಎಂದಿದ್ದಾರೆ.
ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಮಹಾ ವಿಕಾಸ್ ಅಘಾಡಿ ಪಾರಮ್ಯ: ಆದ್ರೆ ಬಿಜೆಪಿಯೇ ಅತಿ ದೊಡ್ಡ ಪಕ್ಷ..!
ಇದೇ ಸಮಾರಂಭದಲ್ಲಿ ಮಾತನಾಡಿದ ಉತ್ತರಾಖಂಡ ಸಿಎಂ ಧಾಮಿ ಅವರು, ಹುತಾತ್ಮ ಬಿಪಿನ್ ರಾವತ್ ಅವರಿಗೆ ನಿವೃತ್ತಿ ಬಳಿಕ ರಾಜ್ಯಕ್ಕೆ ಮರಳಿ , ತವರಿನ ಅಭಿವೃದ್ಧಿಗೆ ಶ್ರಮಿಸುವ ಬಲವಾದ ಆಶಯವಿತ್ತು. ಅದನ್ನು ಸೋದರ ವಿಜಯ್ ಪೂರ್ಣ-ಗೊಳಿಸಲಿದ್ದಾರೆ ಎಂದರು. 2021ರ ಡಿ.8ರಂದು ತಮಿಳುನಾಡಿನ ಕುನ್ನೂರಿನಲ್ಲಿಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿಜನರಲ್ ಬಿಪಿನ್ ರಾವತ್, ಅವರ ಪತ್ನಿ ಸೇರಿ 14 ಜನ ಮೃತಪಟ್ಟಿದ್ದರು.
ಮಹಾರಾಷ್ಟ್ರ ಪಾಲಿಕೆಯಲ್ಲಿಬಿಜೆಪಿ ಜಯಭೇರಿ
ಮುಂಬಯಿ: ಮಹಾರಾಷ್ಟ್ರದಲ್ಲಿಇತ್ತೀಚೆಗೆ ನಡೆದ ನಗರಪಾಲಿಕೆ(ನಗರ ಪಂಚಾಯಿತಿ) ಚುನಾವಣೆಯ ಫಲಿತಾಂಶ ಬುಧವಾರ ಹೊರಬಿದ್ದಿದ್ದು, ಹೆಚ್ಚು ಸೀಟು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ.
ಒಟ್ಟು 1802 ಸೀಟುಗಳ ಪೈಕಿ ಬಿಜೆಪಿಗೆ 416 ಸೀಟು ದಕ್ಕಿವೆ. 24 ನಗರಪಾಲಿಕೆಗಳು ಬಿಜೆಪಿ ವಶವಾಗಿವೆ. ರಾಜ್ಯದಲ್ಲಿ ಪ್ರತಿಪಕ್ಷವಾಗಿದ್ದು ಬಿಜೆಪಿ ಮಾಡಿರುವ ದೊಡ್ಡ ಸಾಧನೆ ಇದಾಗಿದೆ. ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ಮೈತ್ರಿ ಸರಕಾರಕ್ಕೆ ಜನರು ನೀಡಿದ ಪೆಟ್ಟು ಇದಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.
Read more
[wpas_products keywords=”deal of the day sale today offer all”]