Karnataka news paper

ಧರ್ಮನಿಂದನೆಯ ಮೆಸೇಜ್ ಕಳುಹಿಸಿದ ಪಾಕ್ ಮಹಿಳೆಗೆ ಮರಣದಂಡನೆ ಶಿಕ್ಷೆ


Representative Image. Credit: iStock Photo

ಇಸ್ಲಾಮಾಬಾದ್: ಧರ್ಮನಿಂದನೆಯ ಮೆಸೇಜ್ ಅನ್ನು ಗೆಳೆಯರೊಬ್ಬರಿಗೆ ಕಳುಹಿಸಿದ ಪಾಕಿಸ್ತಾನದ ಮಹಿಳೆಗೆ ಅಲ್ಲಿನ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.

ಅನಿಕಾ ಅಥೀಕ್ ಎಂಬವರ ವಿರುದ್ಧ ಫಾರೂಕ್ ಹಸನತ್ 2020ರಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ಕುರಿತು ವಿಚಾರಣೆ ನಡೆಸಿದ ರಾವಲ್ಪಿಂಡಿ ನ್ಯಾಯಾಲಯ, ಪ್ರವಾದಿ ವಿರುದ್ಧ ಧರ್ಮ ನಿಂದನೆ, ಇಸ್ಲಾಮ್‌ಗೆ ಅವಹೇಳನ ಮತ್ತು ಸೈಬರ್‌ಕ್ರೈಮ್ ಅಪರಾಧದ ಅಡಿಯಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿದೆ.

ಅನಿಕಾ ಮತ್ತು ಫಾರೂಕ್ ಗೆಳೆತನ ಹೊಂದಿದ್ದರು. ಯಾವುದೋ ವಿಚಾರದಲ್ಲಿ ಅವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಿದ್ದು, ಸಿಟ್ಟಿನಲ್ಲಿ ಅನಿಕಾ, ಫಾರೂಕ್‌ಗೆ ವಾಟ್ಸ್‌ಆ್ಯಪ್‌ನಲ್ಲಿ ಧರ್ಮನಿಂದನೆಯ ಮೆಸೇಜ್ ಕಳುಹಿಸಿದ್ದರು.

ಅದನ್ನು ಗಮನಿಸಿದ ಫಾರೂಕ್, ಮೆಸೇಜ್ ಡಿಲೀಟ್ ಮಾಡಿ, ಕ್ಷಮೆ ಕೇಳುವಂತೆ ಸೂಚಿಸಿದ್ದರು. ಅದಕ್ಕೆ ಅನಿಕಾ ಒಪ್ಪಿರಲಿಲ್ಲ.

ನಂತರ ಫಾರೂಕ್, ಫೆಡರಲ್ ಇನ್‌ವೆಸ್ಟಿಗೇಶನ್ ಏಜೆನ್ಸಿಗೆ ಮಹಿಳೆ ವಿರುದ್ಧ ದೂರು ನೀಡಿದ್ದರು.



Read more from source

[wpas_products keywords=”deals of the day offer today electronic”]