Karnataka news paper

ಕಾಶಿ ವಿಶ್ವನಾಥನ ದರ್ಶನ ಪಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಂಪತಿ


ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮುಂಜಾನೆ ಪತ್ನಿ ಚನ್ನಮ್ಮ ಅವರ ಜೊತೆ ಕಾಶಿ ವಿಶ್ವನಾಥನ ದರ್ಶನ ಪಡೆದರು. 

ಈ ಸಂದರ್ಭದಲ್ಲಿ ಅವರು ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಯ ವ್ಯಾಪ್ತಿಯಲ್ಲಿರುವ ಕಾಶಿ ವಿಶ್ವನಾಥ ಧಾಮ ಯೋಜನೆಯ (ಕಾರಿಡಾರ್‌) ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವೇದಘೋಷಗಳ ಮಧ್ಯೆ ಸೋಮವಾರ ಉದ್ಘಾಟಿಸಿದರು. ಪಟ್ಟಣದ ಪ್ರಾಚೀನ ಭವ್ಯತೆಯನ್ನು ಅವರು ನೆನಪಿಸಿಕೊಂಡರು. ದೇಶದ ಪ್ರಾಚೀನ ಭವ್ಯತೆಯನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ನವೀಕೃತ ದೇವಾಲಯವು ಭಕ್ತರಿಗೆ ನೀಡುತ್ತದೆ ಎಂದು ಹೇಳಿದರು. 

ಈಗ ಇರುವ ದೇವಾಲಯವನ್ನು ಮಹಾರಾಣಿ ಅಹಿಲ್ಯಾಬಾಯಿ ಹೋಲ್ಕರ್‌ ಅವರು 1780ರಲ್ಲಿ ನಿರ್ಮಿಸಿದ್ದರು. 19ನೇ ಶತಮಾನದಲ್ಲಿ ಮಹಾರಾಜ ರಂಜಿತ್‌ ಸಿಂಗ್‌ ಅವರು ದೇವಾಲಯಕ್ಕೆ ಚಿನ್ನದ ಗೋಪುರ ಅಳವಡಿಸಿದ್ದರು. ₹ 399 ಕೋಟಿ ವೆಚ್ಚದಲ್ಲಿ ಕಾರಿಡಾರ್ ನಿರ್ಮಿಸಲಾಗಿದೆ.


ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಂಪತಿ



Read more from source