Karnataka news paper

ಇನ್‌ಸ್ಟಾಗ್ರಾಮ್‌ನಲ್ಲಿ ನೀವು ಆನ್‌ಲೈನ್‌ ಇರುವುದು ಕಾಣದಂತೆ ಮಾಡಲು ಹೀಗೆ ಮಾಡಿ


How To

lekhaka-Shreedevi karaveeramath

|

ಮೆಟಾ ಮಾಲೀಕತ್ವದ ಜನಪ್ರಿಯ ಸೋಶಿಯಲ್ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್ ಬಳಕೆದಾರರು ಹೆಚ್ಚು ಜಾಗರೂಕರಾಗಿರಬೇಕು. ಈ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ನೀವು ಕೊನೆಯ ಬಾರಿ ಅಪ್ಲಿಕೇಶನ್‌ನಲ್ಲಿ ಆಕ್ಟಿವ್ ಇದ್ದಾಗ ನಿಮ್ಮ ಫಾಲೊವರ್ಸಗೆ ತೋರಿಸುತ್ತದೆ. ಇನ್‌ಸ್ಟಾಗ್ರಾಮ್ ಆಪ್‌ ನ ‘ಆಕ್ಟಿವಿಟಿ ಸ್ಟೆಟಸ್’ ವೈಶಿಷ್ಟ್ಯವು ಮೆಟಾ ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ಆನ್‌ಲೈನ್ ಸ್ಥಿತಿಯನ್ನು ಬಹಿರಂಗಪಡಿಸುತ್ತದೆ.

ಇನ್‌ಸ್ಟಾಗ್ರಾಮ್‌ನಲ್ಲಿ ನೀವು ಆನ್‌ಲೈನ್‌ ಇರುವುದು ಕಾಣದಂತೆ ಮಾಡಲು ಹೀಗೆ ಮಾಡಿ

ಇದೇ ರೀತಿಯ ವೈಶಿಷ್ಟ್ಯವು ಇತರ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳಾದ, ವಾಟ್ಸಪ್ ಮತ್ತು ಫೇಸ್‌ಬುಕ್ ಮೆಸೆಂಜರ್ ನಲ್ಲಿಯೂ ಲಭ್ಯವಿದೆ. ಸ್ಟೇಟಸ್‌ ಆಯ್ಕೆಯು ನೀವು DMed (ನೇರ ಮೆಸಜ್) ಹೊಂದಿರುವ ಬಳಕೆದಾರರನ್ನು ತೋರಿಸುತ್ತದೆ, ನೀವು ಕೊನೆಯ ಬಾರಿ ಆಕ್ಟಿವ್ ಆಗಿದ್ದಿರಿ ಮತ್ತು ನೀವು ಪ್ರೆಸೆಂಟ್ ಆಕ್ಟಿವ್ ಆಗಿದ್ದು ತೋರಿಸುತ್ತದೆ. ನಿಮ್ಮನ್ನು ಯಾರಾದರೂ ಫಾಲೊ ಮಾಡಿದರೆ ಆದರೆ ನೀವು ಅವರನ್ನು ಫಾಲೊ ಮಾಡದ್ದಿದ್ದರೆ , ಅವರು ಬಹುಶಃ ನಿಮ್ಮ ಆಕ್ಟಿವಿಟಿಗಳನ್ನ ನೋಡಲು ಸಾಧ್ಯವಾಗುವುದಿಲ್ಲ. ನೀವು ನಿಮ್ಮ ನೇರ ಮೆಸಜ್‌ ಗಳಿಗೆ ಹೋದಾಗ ಫಾಲೊವರ್ಸ ಸ್ಥಿತಿಯನ್ನು ಸಹ ನೀವು ಕಾಣಬಹುದು.

ಈ ವೈಶಿಷ್ಟ್ಯವನ್ನು ಸಾಮಾನ್ಯವಾಗಿ ಎಲ್ಲಾ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಪೂರ್ವನಿಯೋಜಿತವಾಗಿ ಸಕ್ರಿಯಗೊಳಿಸಲಾಗಿದ್ದರೂ, ಪರಿಶೀಲಿಸುವುದು ಮತ್ತು ಜಾಗರೂಕರಾಗಿರುವುದು ಉತ್ತಮ. ಇನಸ್ಟಾಗ್ರಾಮ್ ಆನ್‌ಲೈನ್ ಇಂಡಿಕೆಟರನ್ನ ಡಿಸೆಬಲ್ ಮೂಲಕ ನೀವು ಅನುಸರಿಸುವ ಭಯವಿಲ್ಲದೆ ಪ್ಲಾಟ್‌ಫಾರ್ಮ್‌ನಾದ್ಯಂತ ಮುಕ್ತವಾಗಿ ಬ್ರೌಸ್ ಮಾಡಬಹುದು. ನೀವು ಬಹು ಇನಸ್ಟಾಗ್ರಾಮ್ ಖಾತೆಗಳನ್ನು ಹೊಂದಿದ್ದರೆ, ನೀವು ಪ್ರತಿ ಖಾತೆಗೆ ಪ್ರತ್ಯೇಕವಾಗಿ ಈ ಕಾರ್ಯವನ್ನು ನಿಷ್ಕ್ರಿಯಗೊಳಿಸಬೇಕು. ಅಪ್ಲಿಕೇಶನ್ ಮತ್ತು ವೆಬ್ ಬ್ರೌಸರ್‌ನಿಂದ ಇನ್‌ಸ್ಟಾಗ್ರಾಮ್ ನಲ್ಲಿ ನಿಮ್ಮ ಆನ್‌ಲೈನ್ ಇಂಡಿಕೆಟರನ್ನ ಡಿಸೆಬಲ್ ಮಾಡಲು ನೀವು ಅನುಸರಿಸಬಹುದಾದ ಹಂತಗಳು ಇಲ್ಲಿವೆ.

1. ನಿಮ್ಮ ಆಂಡ್ರಾಯ್ಡ್ ಅಥವಾ iOS ಡಿವೈಸ್ ನಲ್ಲಿ ಇನಸ್ಟಾಗ್ರಾಮ್ ಅಪ್ಲಿಕೇಶನ್ ತೆರೆಯಿರಿ. ನಿಮ್ಮ ಸ್ಕ್ರೀನ್ ಕೆಳಗಿನ ಬಲ ಮೂಲೆಯಲ್ಲಿರುವ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡುವ ಮೂಲಕ ನಿಮ್ಮ ಪ್ರೊಫೈಲ್ ವಿಭಾಗಕ್ಕೆ ಹೋಗಿ.

2.ಮೂರು ಅಡ್ಡ ಬಾರ್‌ಗಳ ಮೇಲೆ ಟ್ಯಾಪ್ ಮಾಡಿ ಮತ್ತು ಮೆನುವಿನಿಂದ ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಿ.

3.‌ ಪ್ರವೈಸಿಗೆ ಹೋಗಿ ಮತ್ತು ಆಕ್ಟಿವಿಟಿ ಸ್ಟೆಟಸ್ ನೋಡಿ. ಇಲ್ಲಿ, ನೀವು ತೋರಿಸು ಆಕ್ಟಿವಿಟಿ ಸ್ಟೆಟಸ್ ಆಯ್ಕೆಗಾಗಿ ಟಾಗಲ್ ಸ್ವಿಚ್ ಅನ್ನು ಕಾಣಬಹುದು (ಇದು ಪೂರ್ವನಿಯೋಜಿತವಾಗಿ ಸಕ್ರಿಯಗೊಳಿಸಲಾಗಿದೆ). ಅದನ್ನು ಆಫ್ ಮಾಡಲು ನೀವು ಟಾಗಲ್ ಸ್ವಿಚ್ ಅನ್ನು ಬಳಸಬಹುದು.

1. ನಿಮ್ಮ PC ಬ್ರೌಸರ್‌ನಲ್ಲಿ instagram.com ಗೆ ಭೇಟಿ ನೀಡಿ ಮತ್ತು ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ.

2.ನಿಮ್ಮ ಡಿಸ್‌ಪ್ಲೇಯ ಮೇಲಿನ ಬಲ ಮೂಲೆಯಲ್ಲಿರುವ ಪ್ರೊಫೈಲ್ ಪಿಕ್ ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ಸೆಟ್ಟಿಂಗ್‌ಗಳಿಗೆ ಹೋಗಿ.

3. ಇಲ್ಲಿ ಪ್ರವೈಸಿ ಮತ್ತು ಸೆಕ್ಯೂರಿಟಿ ಆಯ್ಕೆಯನ್ನು ನೋಡಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ. ಕಾರ್ಯವನ್ನು ನಿಷ್ಕ್ರಿಯಗೊಳಿಸಲು, ನೀವು ತೋರಿಸು ಆಕ್ಟಿವಿಟಿ ಸ್ಟೆಟಸ್ ಆಯ್ಕೆಯ ಪಕ್ಕದಲ್ಲಿರುವ ಬಾಕ್ಸ್ ಅನ್ನು ಗುರುತಿಸಬೇಡಿ.

Best Mobiles in India

  • 54,535

  • 1,19,900

  • 54,999

  • 86,999

  • 49,975

  • 49,990

  • 20,999

  • 1,04,999

  • 44,999

  • 64,999

  • 20,699

  • 49,999

  • 11,499

  • 54,999

  • 7,999

  • 8,980

  • 17,091

  • 10,999

  • 34,999

  • 39,600


  • 25,750


  • 33,590


  • 27,760


  • 44,425


  • 13,780


  • 1,25,000


  • 45,990


  • 1,35,000


  • 82,999


  • 17,999

English summary

Instagram Tricks: How To Hide Online Status On Instagram

Story first published: Thursday, January 20, 2022, 7:00 [IST]





Read more…

[wpas_products keywords=”smartphones under 15000 6gb ram”]