Karnataka news paper

90 ನಿಮಿಷಗಳಲ್ಲಿ ಓಮಿಕ್ರಾನ್ ಪತ್ತೆ ಹಚ್ಚುವ ವಿಧಾನ: ದೆಹಲಿ ಐಐಟಿ ಸಂಶೋಧಕರ ಸಾಧನೆ


Source : The New Indian Express

ನವದೆಹಲಿ: ದೇಶದ ಪ್ರತಿಷ್ಟಿತ ವಿದ್ಯಾಸಂಸ್ಥೆಯಾದ ಐಐಟಿ ದೆಹಲಿಯಲ್ಲಿನ ಸಂಶೋಧಕರು ಕೇವಲ 90 ನಿಮಿಷಗಳಲ್ಲಿ ಓಮಿಕ್ರಾನ್ ವೈರಾಣು ಸೋಂಕನ್ನು ಪತ್ತೆ ಹಚ್ಚುವ ವಿಧಾನವನ್ನು ಆವಿಷ್ಕರಿಸಿದ್ದಾರೆ.

ಇದನ್ನೂ ಓದಿ: ಏಪ್ರಿಲ್‌ ಅಂತ್ಯಕ್ಕೆ ಓಮಿಕ್ರಾನ್ ನಿಂದ 75 ಸಾವಿರ ಜನರ ಸಾವು ಸಾಧ್ಯತೆ: ಅಧ್ಯಯನ

ಸದ್ಯ ಜಗತ್ತಿನಾದ್ಯಂತ ಚಾಲ್ತಿಯಲ್ಲಿರುವ ವಿಧಾನವು ಓಮಿಕ್ರಾನ್ ಪತ್ತೆಗೆ 3 ದಿನಗಳನ್ನು ತೆಗೆದುಕೊಳ್ಳುತ್ತದೆ. ಅಂಥದ್ದರಲ್ಲಿ ಮೂರು ದಿನಗಳನ್ನು ಕೇವಲ 90 ನಿಮಿಷಗಳಿಗೆ ಇಳಿಸಿದ ಖ್ಯಾತಿ ಭಾರತೀಯ ಸಂಶೋಧಕರದ್ದು.

ಇದನ್ನೂ ಓದಿ: ಓಮಿಕ್ರಾನ್ ಆತಂಕ ನಡುವಲ್ಲೇ ಹತ್ತಿರ ಬರುತ್ತಿರುವ ಕ್ರಿಸ್’ಮಸ್: ಇನ್ನೂ ಮಾರ್ಗಸೂಚಿ ಬಿಡುಗಡೆ ಮಾಡದ ಸರ್ಕಾರ

ಈ ನೂತನ RTPCR ಆಧಾರಿತ ಓಮಿಕ್ರಾನ್ ಪತ್ತೆ ವಿಧಾನದ ಪೇಟೆಂಟ್ ಪಡೆಯಲು ಅರ್ಜಿ ಸಲ್ಲಿಸಲಾಗಿದೆ ಎಂದು ಐಐಟಿ ಆಡಳಿತ ಮಂಡಳಿ ತಿಳಿಸಿದೆ. ಭಾರತದಲ್ಲಿ ಮೊದಲ ಓಮಿಕ್ರಾನ್ ವೈರಾಣು ಬೆಂಗಳೂರಿನಲ್ಲಿ ಪತ್ತೆಯಾಗಿತ್ತು.

ಇದನ್ನೂ ಓದಿ: ಬ್ರಿಟನ್ ನಲ್ಲಿ ಒಮೈಕ್ರಾನ್‍ನಿಂದ  ಓರ್ವ ವ್ಯಕ್ತಿ ಸಾವು



Read more