Karnataka news paper

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಮಹಾ ವಿಕಾಸ್ ಅಘಾಡಿ ಪಾರಮ್ಯ: ಆದ್ರೆ ಬಿಜೆಪಿಯೇ ಅತಿ ದೊಡ್ಡ ಪಕ್ಷ..!


ಹೈಲೈಟ್ಸ್‌:

  • ಮಹಾ ವಿಕಾಸ್‌ ಅಘಾಡಿಗೆ ಸ್ಥಳೀಯ ಪಾಲಿಕೆ ಚುನಾವಣೆಯಲ್ಲಿ ಒಟ್ಟು 976 ಸೀಟುಗಳು ಒಲಿದಿವೆ
  • ಈ ಪೈಕಿ ಎನ್‌ಸಿಪಿ ಅತಿ ಹೆಚ್ಚು, ಅಂದರೆ 378 ಸೀಟುಗಳನ್ನು ಪಡೆದಿದೆ
  • ಶಿವಸೇನೆ 301 ಸೀಟು ಮತ್ತು ಕಾಂಗ್ರೆಸ್‌ 297 ಸೀಟುಗಳನ್ನು ಪಡೆದಿದೆ

ಮುಂಬಯಿ: ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ನಗರ ಪಾಲಿಕೆ (ನಗರ ಪಂಚಾಯಿತಿ) ಚುನಾವಣೆಯ ಫಲಿತಾಂಶ ಬುಧವಾರ ಹೊರ ಬಿದ್ದಿದ್ದು, ಹೆಚ್ಚು ಸೀಟು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರ ಹೊಮ್ಮಿದೆ.

ಒಟ್ಟು 1,802 ಸೀಟುಗಳ ಪೈಕಿ ಬಿಜೆಪಿಗೆ 416 ಸೀಟು ದಕ್ಕಿವೆ. 24 ನಗರ ಪಾಲಿಕೆಗಳು ಬಿಜೆಪಿ ವಶವಾಗಿವೆ. ರಾಜ್ಯದಲ್ಲಿ ಪ್ರತಿಪಕ್ಷವಾಗಿದ್ದು ಬಿಜೆಪಿ ಮಾಡಿರುವ ದೊಡ್ಡ ಸಾಧನೆ ಇದಾಗಿದೆ. ಆಡಳಿತಾರೂಢ ಮಹಾ ವಿಕಾಸ್‌ ಅಘಾಡಿ ಮೈತ್ರಿ ಸರಕಾರಕ್ಕೆ ಜನರು ನೀಡಿದ ಪೆಟ್ಟು ಇದಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್‌ ಪಾಟೀಲ್‌ ಹೇಳಿದ್ದಾರೆ.

ತಾಕತ್ತಿದ್ದರೆ ಎಂಇಎಸ್‌ ನಿಷೇಧ ಮಾಡಿ: ಬೊಮ್ಮಾಯಿ ಸರ್ಕಾರಕ್ಕೆ ಶಿವಸೇನೆಯ ಸಂಜಯ್ ರಾವತ್ ಸವಾಲು
ಉಳಿದಂತೆ ಮಹಾರಾಷ್ಟ್ರದ ಇತರ ಆರು ಪ್ರಮುಖ ನಗರ ಪಾಲಿಕೆಗಳಲ್ಲಿ ಪ್ರಾದೇಶಿಕ ಪಕ್ಷಗಳ ಜತೆಗಿನ ಮೈತ್ರಿಯ ಮೂಲಕ ಕಾರ್ಪೊರೇಟರ್‌ಗಳ ಬೆಂಬಲ ಪಡೆದು ಅಧ್ಯಕ್ಷಗಿರಿ ಹಿಡಿಯುತ್ತೇವೆ. ಕಳೆದ 26 ತಿಂಗಳಿಂದ ರಾಜ್ಯದಲ್ಲಿ ಆಡಳಿತ ನಡೆಸಿರುವ ಶಿವಸೇನೆ, ಕಾಂಗ್ರೆಸ್‌ ಮತ್ತು ಎನ್‌ಸಿಪಿ ಮೈತ್ರಿಕೂಟಕ್ಕೆ ಆದ ಭಾರಿ ಮುಖಭಂಗ ಇದಾಗಿದೆ ಎಂದು ಪಾಟೀಲ್‌ ಕುಟುಕಿದ್ದಾರೆ.

ಅಘಾಡಿಗೆ 976 ಸೀಟುಗಳು: ಮಹಾ ವಿಕಾಸ್‌ ಅಘಾಡಿಗೆ ಸ್ಥಳೀಯ ಪಾಲಿಕೆ ಚುನಾವಣೆಯಲ್ಲಿ ಒಟ್ಟು 976 ಸೀಟುಗಳು ಒಲಿದಿವೆ. ಈ ಪೈಕಿ ಎನ್‌ಸಿಪಿ ಅತಿ ಹೆಚ್ಚು, ಅಂದರೆ 378 ಸೀಟುಗಳು, ಶಿವಸೇನೆ 301 ಸೀಟು ಮತ್ತು ಕಾಂಗ್ರೆಸ್‌ 297 ಸೀಟುಗಳನ್ನು ಪಡೆದಿದೆ. ಒಟ್ಟಾರೆ 57 ಪಾಲಿಕೆಗಳು ಮೈತ್ರಿಕೂಟದ ವಶಕ್ಕೆ ಸಿಕ್ಕಿದೆ.

ಉದ್ಧವ್ ಠಾಕ್ರೆ ಪತ್ನಿ ರಶ್ಮಿ ‘ಮರಾಠಿ ರಾಬ್ರಿ ದೇವಿ’: ಬಿಜೆಪಿ ಮುಖಂಡನ ವಿವಾದ
ಪಾಲಿಕೆ ಚುನಾವಣೆ ಸಂಬಂಧ ಒಬಿಸಿ ಸಮುದಾಯದ 27% ಮೀಸಲಾತಿಯನ್ನು ಸಾಮಾನ್ಯ ವರ್ಗಕ್ಕೆ ಪರಿವರ್ತಿಸುವಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ನೀಡಿತ್ತು. 2020ರ ಮಾರ್ಚ್‌ನಲ್ಲಿ ಮಹತ್ವದ ಆದೇಶ ಹೊರಡಿಸಿದ್ದ ಸುಪ್ರೀಂ ಕೋರ್ಟ್‌, ಮಹಾರಾಷ್ಟ್ರದ ಸ್ಥಳೀಯ ಪಾಲಿಕೆಗಳಲ್ಲಿ ಒಬಿಸಿ ಮೀಸಲು ಕ್ಷೇತ್ರ ಅಥವಾ ಮೀಸಲಾತಿಯನ್ನು ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಗೆ ಕಾಯ್ದಿರಿಸಿರುವ ಒಟ್ಟು ಪ್ರಮಾಣವಾದ 50%ಗಿಂತಲೂ ಹೆಚ್ಚು ಮಾಡಲು ಸಾಧ್ಯವಿಲ್ಲ ಎಂದಿತ್ತು.

ಕಳೆದ ವರ್ಷದ ಡಿಸೆಂಬರ್‌ 21 ಹಾಗೂ ಕಳೆದ ಜನವರಿ 18 ರಂದು ರಾಜ್ಯದ 106 ನಗರ ಪಂಚಾಯಿತಿಗಳ 1,802 ಕ್ಷೇತ್ರಗಳು, ಎರಡು ಜಿಲ್ಲಾ ಸಮಿತಿಗಳ 105 ಹಾಗೂ 15 ಪಂಚಾಯಿತಿ ವ್ಯಾಪ್ತಿಯ 210 ಸ್ಥಾನಗಳಿಗೆ ಮತದಾನ ನಡೆದಿತ್ತು.

ಮೋದಿಗೆ ಹೊಡೆಯಬಲ್ಲೆ: ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ವಿವಾದ



Read more

[wpas_products keywords=”deal of the day sale today offer all”]