Karnataka news paper

ಬಜೆಟ್‌ 2022; ಸೆಕ್ಷನ್‌ 80 ಸಿ ಅಡಿ ತೆರಿಗೆ ವಿನಾಯಿತಿಗೆ ಹೂಡಿಕೆ ಮಿತಿ ವಿಸ್ತರಣೆ ಸಂಭವ


ಹೈಲೈಟ್ಸ್‌:

  • ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 80 ಸಿ ಅಡಿ ಹೂಡಿಕೆಯ ಮಿತಿ ಏರಿಸಲು ಒತ್ತಾಯ
  • ಕಳೆದ 7 ವರ್ಷಗಳಲ್ಲಿ ಏರಿಕೆಯಾಗದ 1.5 ಲಕ್ಷ ರೂ.ಗಳ ಮಿತಿ
  • ವಾರ್ಷಿಕ 2.5 ಲಕ್ಷ ರೂ.ಗೆ ಏರಿಸಲು ತೆರಿಗೆದಾರರ ಬೇಡಿಕೆ

ಹೊಸದಿಲ್ಲಿ: ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಹೂಡಿಕೆಯ ಮಿತಿ ಏರಿಸಬೇಕು ಎಂದು ತೆರಿಗೆದಾರರು ಮತ್ತು ಹಣಕಾಸು ತಜ್ಞರು ಸರಕಾರವನ್ನು ಒತ್ತಾಯಿಸಿದ್ದಾರೆ.

2023-14ರಲ್ಲಿ ಸೆಕ್ಷನ್‌ 80 ಸಿ ಅಡಿಯಲ್ಲಿ ಗರಿಷ್ಠ 1 ಲಕ್ಷ ರೂ. ಹೂಡಿಕೆಯ ಮಿತಿಯಲ್ಲಿ ತೆರಿಗೆ ವಿನಾಯಿತಿಯ ಸೌಲಭ್ಯ ಸಿಗುತ್ತಿತ್ತು. ಇದನ್ನು 2014-15ರಲ್ಲಿ 1.5 ಲಕ್ಷ ರೂ.ಗೆ ಏರಿಸಲಾಯಿತು. ಕಳೆದ 7 ವರ್ಷಗಳಲ್ಲಿ ಬದಲಾವಣೆ ಆಗದಿರುವುದರಿಂದ ಬಜೆಟ್‌ ನಲ್ಲಿ ಈ ಸಲ ಮಿತಿ ಹೆಚ್ಚಿಸಬೇಕು ಎಂಬ ಬೇಡಿಕೆ ಇದೆ.

ಕೋವಿಡ್‌-19 ಬಿಕ್ಕಟ್ಟನ್ನು ಗಮನಿಸಿ ಮಿತಿಯನ್ನು ವಾರ್ಷಿಕ 2.5 ಲಕ್ಷ ರೂ.ಗಳಿಗೆ ಏರಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಅಂದರೆ ವರ್ಷಕ್ಕೆ 2.5 ಲಕ್ಷ ರೂ.ಗಳ ತನಕ ಅರ್ಹ ಹಣಕಾಸು ಸಾಧನಗಳಲ್ಲಿ ಹೂಡಿದರೆ, ಅದಕ್ಕೆ ತೆರಿಗೆ ವಿನಾಯಿತಿಯ ಲಾಭವನ್ನು ಕೊಡಬೇಕು.

ಸ್ಟ್ಯಾಂಡರ್ಡ್‌ ಡಿಡಕ್ಷನ್‌ 30-35% ಏರಿಕೆ ಸಾಧ್ಯತೆ, ಸ್ಲಾಬ್‌ನಲ್ಲಿಲ್ಲ ಯಾವುದೇ ಬದಲಾವಣೆ!

ಏನಿದು ಸೆಕ್ಷನ್‌ 80 ಸಿ ಸೌಲಭ್ಯ?
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 80 ಸಿ ಅನ್ನು ತೆರಿಗೆ ಉಳಿತಾಯದ ಉದ್ದೇಶಕ್ಕೆ ನೀಡಲಾಗುತ್ತದೆ. ಇದು ವೈಯಕ್ತಿಕ ತೆರಿಗೆದಾರರಿಗೆ ಲಭ್ಯವಿರುವ ಅನುಕೂಲ. ನಿರ್ದಿಷ್ಟ ಉಳಿತಾಯ ಮತ್ತು ವೆಚ್ಚಗಳಿಗೆ ಇದನ್ನು ಪಡೆಯಬಹುದು. ವಾರ್ಷಿಕ ಗರಿಷ್ಠ 1.5 ಲಕ್ಷ ರೂ.ಗಳ ಮಿತಿ ಇದಕ್ಕಿದೆ.

ಜೀವ ವಿಮೆ ಪ್ರೀಮಿಯಂ, ಸಾರ್ವಜನಿಕ ಭವಿಷ್ಯನಿಧಿಯ ಹೂಡಿಕೆ, ಗೃಹ ಸಾಲ, ಮನೆ ಖರೀದಿಯ ಮುದ್ರಾಂಕ ಶುಲ್ಕ, ಸುಕನ್ಯಾ ಸಮೃದ್ಧಿ ಹೂಡಿಕೆ, ಮಕ್ಕಳ ಬೋಧನಾ ಶುಲ್ಕ, 5 ವರ್ಷಗಳ ಅವಧಿಯ ತೆರಿಗೆ ಉಳಿತಾಯ ಎಫ್‌ ಡಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಅಡಿಯಲ್ಲಿ ಮಾಡುವ ಹೂಡಿಕೆಗೆ ಈ ಸೌಲಭ್ಯ ಪಡೆಯಬಹುದು.

ಈ ಯೋಜನೆಯಿಂದ ತೆರಿಗೆದಾರರಿಗೆ ತೆರಿಗೆ ಹೊರೆ ಇಳಿಯುತ್ತದೆ. ಹಣಕಾಸು ಉಳಿತಾಯದ ಗುರಿ ಸಾಧ್ಯವಾಗುತ್ತದೆ. ಮನೆ ಖರೀದಿಗೆ ಸಹಕಾರಿಯಾಗುತ್ತದೆ. ಸರಕಾರಕ್ಕೆ ಗೃಹ ವಲಯದ ಉಳಿತಾಯ ಹೆಚ್ಚಿಸಲು ಸಹಕಾರಿ. ಹಣದುಬ್ಬರ ನಿಯಂತ್ರಿಸಲು ಪೂರಕ. ಮೂಲ ಸೌಕರ್ಯ ವಲಯಕ್ಕೆ ಹಣ ಸಂಗ್ರಹಿಸಲು ಸುಲಭವಾಗುತ್ತದೆ. ಸರಕಾರಕ್ಕೆ ಕಡಿಮೆ ಖರ್ಚಿನಲ್ಲಿ ನಿಧಿ ಸಂಗ್ರಹಿಸಬಹುದು.

ಬಜೆಟ್‌ 2022: ವರ್ಕ್‌ ಫ್ರಂ ಹೋಮ್‌ ನೌಕರರಿಗೆ ‘ಸ್ಟ್ಯಾಂಡರ್ಡ್ ಡಿಡಕ್ಷನ್’ ಮಿತಿಯನ್ನು ₹1ಲಕ್ಷಕ್ಕೆ ಹೆಚ್ಚಿಸಲು ಬೇಡಿಕೆ

ಮಕ್ಕಳ ಶಿಕ್ಷಣ ವೆಚ್ಚದ ಭಾರ ಇಳಿಸಲಿದೆಯೇ ಬಜೆಟ್‌?
ವೇತನದಾರರು 2022-23ರ ಕೇಂದ್ರ ಬಜೆಟ್‌ನಲ್ಲಿ ಎರಡು ವಿಧದ ಅನುಕೂಲಗಳನ್ನು ನಿರೀಕ್ಷಿಸುತ್ತಿದ್ದಾರೆ. ಮೊದಲನೆಯದ್ದು ಸ್ಟಾತ್ರ್ಯಂಡರ್ಡ್‌ ಡಿಡಕ್ಷನ್‌, ಎರಡನೆಯದ್ದು ಮಕ್ಕಳ ಶಿಕ್ಷಣ ವೆಚ್ಚಕ್ಕೆ ಆದಾಯ ತೆರಿಗೆಯಲ್ಲಿ ವಿನಾಯಿತಿ.

2019-20ರಿಂದ ವೇತನದಾರರಿಗೆ 50,000 ರೂ. ಸ್ಟ್ಯಾಂ ಡರ್ಡ್‌ ಡಿಡಕ್ಷನ್‌ ಸೌಲಭ್ಯ ದೊರೆಯುತ್ತದೆ. ಇದನ್ನು 75 ಸಾವಿರ ರೂ.ಗೆ ಏರಿಸಬೇಕು ಎಂಬ ಬೇಡಿಕೆ ಇದೆ. ಹಣದುಬ್ಬರ ಹೆಚ್ಚಳ ಮತ್ತು ಕೋವಿಡ್‌ ಸಂಬಂಧಿತ ಸಮಸ್ಯೆಗಳ ಹಿನ್ನೆಲೆಯಲ್ಲಿ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ವೃದ್ಧಿಸಬೇಕು ಎನ್ನುತ್ತಿದ್ದಾರೆ ವೇತನದಾರರು. ಎರಡನೆಯದಾಗಿ ಮಕ್ಕಳ ಉನ್ನತ ಶಿಕ್ಷಣಕ್ಕೆ ಉಂಟಾಗುತ್ತಿರುವ ಭಾರಿ ವೆಚ್ಚದ ಹೊರೆಯನ್ನು ಇಳಿಸಲು, ಅದಕ್ಕೆ ಆದಾಯ ತೆರಿಗೆ ಕಡಿತದ ಅನುಕೂಲ ನೀಡಬೇಕು ಎಂಬ ಒತ್ತಾಯ ಉಂಟಾಗಿದೆ. ಮಕ್ಕಳ ಶಿಕ್ಷಣ ವೆಚ್ಚದ ಸಲುವಾಗಿ ಪೋಷಕರು ಮಾಡುವ ಉಳಿತಾಯಕ್ಕೆ ತೆರಿಗೆ ವಿನಾಯಿತಿಯ ಸೌಲಭ್ಯ ಸದ್ಯಕ್ಕಿಲ್ಲ. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಮಾತ್ರ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಮಾಡುವ ಉಳಿತಾಯ ನಿಧಿಗೆ ಮಾತ್ರ ತೆರಿಗೆ ಕಡಿತದ ಸೌಲಭ್ಯ ಇದೆ.



Read more

[wpas_products keywords=”deal of the day sale today offer all”]