Karnataka news paper

ಔಷಧ ಅಂಗಡಿಗಳಲ್ಲಿ ಶೀಘ್ರದಲ್ಲೇ ಕೋವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆ ಲಭ್ಯ..!


ಹೈಲೈಟ್ಸ್‌:

  • ಮುಂಬರುವ ಜನವರಿ 23ಕ್ಕೆ ದೇಶದಲ್ಲಿ ಮೂರನೇ ಕೊರೊನಾ ಅಲೆಯು ಉತ್ತುಂಗಕ್ಕೆ
  • ನಿತ್ಯ ಸೋಂಕಿತರ ಸಂಖ್ಯೆ 4 ಲಕ್ಷ ದಾಟಲ್ಲ
  • ಐಐಟಿ ಕಾನ್ಪುರದ ವಿಜ್ಞಾನಿಗಳ ಲೆಕ್ಕಾಚಾರ

ಹೊಸ ದಿಲ್ಲಿ: ಓಮಿಕ್ರಾನ್‌ ರೂಪಾಂತರಿ ಆರ್ಭಟದಿಂದಾಗಿ ದೇಶದಲ್ಲಿ ದಾಖಲೆ ಮಟ್ಟದಲ್ಲಿ ನಿತ್ಯ ಸೋಂಕಿತರ ಸಂಖ್ಯೆಯು ಹೆಚ್ಚಾಗುತ್ತಿರುವ ನಡುವೆಯೇ, ಕೊರೊನಾ ನಿರೋಧಕ ಲಸಿಕೆಗಳಾದ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್‌ ಶೀಘ್ರವೇ ಮುಕ್ತ ಮಾರುಕಟ್ಟೆ ಪ್ರವೇಶಿಸುವ ಸುಳಿವು ಲಭಿಸಿದೆ.

ಕೇಂದ್ರೀಯ ಔಷಧ ಪ್ರಾಧಿಕಾರದ ತಜ್ಞರ ಸಮಿತಿಯು (ಎಸ್‌ಇಸಿ) ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್‌ಗಳು ಸಾಧಾರಣ ಮಾರುಕಟ್ಟೆ (ಮೆಡಿಕಲ್ಸ್‌, ಪ್ರಾಥಮಿಕ ಆರೋಗ್ಯ ಕೇಂದ್ರ)ಯಲ್ಲಿ ಲಭ್ಯವಾಗಲು ಅಗತ್ಯವಾದ ಒಪ್ಪಿಗೆ ನೀಡಿದೆ. ಇದನ್ನು ಆಧರಿಸಿ ಲಸಿಕೆ ತಯಾರಿಕೆ ಕಂಪನಿಗಳಾದ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಮತ್ತು ಭಾರತ್‌ ಬಯೊಟೆಕ್‌ ಭಾರತೀಯ ಔಷಧಗಳ ಗುಣಮಟ್ಟ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ)ಕ್ಕೆ ಅನುಮತಿಗಾಗಿ ಅರ್ಜಿ ಸಲ್ಲಿಸಿವೆ ಎಂದು ತಿಳಿದು ಬಂದಿದೆ.

ಸದ್ಯಕ್ಕೆ ತುರ್ತು ಪರಿಸ್ಥಿತಿಯಲ್ಲಿ ಬಳಕೆಗೆ ಮಾತ್ರವೇ ಕೊರೊನಾ ನಿರೋಧಕ ಲಸಿಕೆಗಳಿಗೆ ದೇಶದಲ್ಲಿ ಸರಕಾರದಿಂದ ಅನುಮತಿ ನೀಡಲಾಗಿದೆ. ಹಾಗಾಗಿ ಮುಕ್ತ ಮಾರುಕಟ್ಟೆಗಳಲ್ಲಿ ಅವುಗಳನ್ನು ಮಾರಾಟ ಮಾಡುವಂತಿಲ್ಲ.

12 ರಿಂದ 14 ವರ್ಷದ ಮಕ್ಕಳಿಗೆ ಮಾರ್ಚ್‌ 1 ರಿಂದ ಕೊರೊನಾ ಲಸಿಕೆ ನೀಡಿಕೆ ಆರಂಭ..
ಈಗಾಗಲೇ 100 ಕೋಟಿಗೂ ಅಧಿಕ ಡೋಸ್‌ ಕೋವಿಶೀಲ್ಡ್‌ ಲಸಿಕೆಯನ್ನು ದೇಶಾದ್ಯಂತ ಜನರಿಗೆ ನೀಡಲಾಗಿದೆ. 15 – 18 ವರ್ಷದ ಮಕ್ಕಳ ಲಸಿಕಾ ಅಭಿಯಾನದ ಅಡಿಯಲ್ಲಿ ಲಕ್ಷಾಂತರ ಡೋಸ್‌ ಕೋವ್ಯಾಕ್ಸಿನ್ ನೀಡಲಾಗುತ್ತಿದೆ.

ಮುಂಬಯಿನಲ್ಲಿ ಇಳಿಕೆ, ಮಹಾರಾಷ್ಟ್ರದಲ್ಲಿ ಆರ್ಭಟ: ಬುಧವಾರ ಒಂದೇ ದಿನ ಮುಂಬಯಿ ನಗರದಲ್ಲಿ ದಾಖಲಾದ ಹೊಸ ಕೊರೊನಾ ಸೋಂಕಿತರ ಸಂಖ್ಯೆಯು 6,032ಗೆ ಇಳಿಕೆಯಾಗಿದೆ. ಮಂಗಳವಾರದಂದು ಈ ಸಂಖ್ಯೆ 6,149 ಇತ್ತು. ಆದರೆ, ಮಹಾರಾಷ್ಟ್ರದಲ್ಲಿ ನಿತ್ಯ ಸೋಂಕಿತರ ಸಂಖ್ಯೆ ಒಟ್ಟಾರೆಯಾಗಿ ಏರಿಕೆ ಕಂಡಿದೆ. ಸುಮಾರು 4 ಸಾವಿರ ಕೇಸ್‌ಗಳು ಹೆಚ್ಚಳವಾಗಿ, ಬುಧವಾರದಂದು 43,697 ಜನರಿಗೆ ಸೋಂಕು ತಗುಲಿದೆ.

ಕೊರೊನಾ ಲಸಿಕೆ ಅಭಿಯಾನಕ್ಕೆ 1 ವರ್ಷ: ದೇಶದಲ್ಲಿ 157 ಕೋಟಿ ದಾಟಿದ ವ್ಯಾಕ್ಸಿನೇಷನ್‌: ಪ್ರಧಾನಿ ಶ್ಲಾಘನೆ
ಮತ್ತೊಂದೆಡೆ ದಿಲ್ಲಿಯಲ್ಲಿ ಬುಧವಾರ ಒಂದೇ ದಿನ 13,785 ಜನರಿಗೆ ಹೊಸದಾಗಿ ಕೊರೊನಾ ಸೋಂಕು ತಗುಲಿದೆ. ಜತೆಗೆ 35 ಸೋಂಕಿತರು ಬಲಿಯಾಗಿದ್ದಾರೆ. ಪಾಸಿಟಿವಿಟಿ ಪ್ರಮಾಣವು 23.86% ಮುಟ್ಟಿದೆ. ಸೋಂಕಿತರು 2.5 ಲಕ್ಷ ವರದಿಯಾಗುತ್ತಿದ್ದು, ಗರಿಷ್ಠ 4 ಲಕ್ಷ ಕೇಸ್‌ಗಳ ಒಳಗೇ ಇದು ಉಳಿಯಲಿದೆ ಎಂದಿದ್ದಾರೆ.

ಜನವರಿ 23ಕ್ಕೆ 3ನೇ ಅಲೆ ಉತ್ತುಂಗಕ್ಕೆ

ಮುಂಬರುವ ಜನವರಿ 23ಕ್ಕೆ ದೇಶದಲ್ಲಿ ಮೂರನೇ ಕೊರೊನಾ ಅಲೆಯು ಉತ್ತುಂಗಕ್ಕೆ ತಲುಪಲಿದೆ. ಆದರೆ, ನಿತ್ಯ ಸೋಂಕಿತರ ಸಂಖ್ಯೆ 4 ಲಕ್ಷ ದಾಟಲ್ಲ ಎಂದು ಐಐಟಿ ಕಾನ್ಪುರದ ವಿಜ್ಞಾನಿಗಳು ತಿಳಿಸಿದ್ದಾರೆ. ಅವರು ತಮ್ಮ ಸೂತ್ರ ಕೋವಿಡ್‌ ಮಾಡೆಲ್‌ ಮೂಲಕ ಸಂಭಾವ್ಯ ಕೊರೊನಾ ಉತ್ತುಂಗವನ್ನು ಪತ್ತೆ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವಿಟಿ ಏರಿಕೆ: ಲಸಿಕೆಗೆ ಮತ್ತೆ ಬಂತು ಬೇಡಿಕೆ..!



Read more

[wpas_products keywords=”deal of the day sale today offer all”]