ಹೈಲೈಟ್ಸ್:
- ಸಿಎಂ ನಿವಾಸಕ್ಕೆ ಭದ್ರತೆಗೆಂದು ನಿಯೋಜಿಸಲಾದ ಇಬ್ಬರು ಪೊಲೀಸರು ಗಾಂಜಾ ಮಾರಾಟ ದಂಧೆಯಲ್ಲಿ ಭಾಗಿ
- ಇಂಥಹ ಕೃತ್ಯವನ್ನು ಪತ್ತೆ ಮಾಡಿ ಕಾನೂನು ಕ್ರಮ ತೆಗೆದುಕೊಂಡ ಅಧಿಕಾರಿಗಳನ್ನು ಅಭಿನಂದಿಸುವೆ
- ಬೆಂಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡುತ್ತಿದ್ದ ಸಚಿವರು, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ, ಸಾರ್ವಜನಿಕರ ಜೀವ ಹಾಗೂ ಆಸ್ತಿಪಾಸ್ತಿಗಳನ್ನು ರಕ್ಷಿಸಬೇಕಾದ, ಹೊಣೆಗಾರಿಕೆ ಹೊಂದಿರುವ, ಪೊಲೀಸ್ ಸಿಬ್ಬಂದಿಗಳೇ ಅಪರಾಧ ಎಸಗುವುದನ್ನು ಸಹಿಸಲಾಗುವುದಿಲ್ಲ ಎಂದರು.
ಎಸ್ ಆರ್ ವಿಶ್ವನಾಥ್ ಹತ್ಯೆ ಸಂಚು ಕುರಿತಾದ ವಿಡಿಯೋ, ಗಂಭೀರ ತನಿಖೆ; ಆರಗ ಜ್ಞಾನೇಂದ್ರ
ರಾಜ್ಯದಲ್ಲಿ ಸರಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳಿದ್ದು ಕೇವಲ ಬೆರಳೆಣಿಕೆಯಷ್ಟು ಸಿಬ್ಬಂದಿಗಳು ಮಾಡುವ ಕೆಟ್ಟ ಕೆಲಸದಿಂದ ಇಡೀ ಇಲಾಖೆಯ ಬಗ್ಗೆ, ಸಾರ್ವಜನಿಕರಲ್ಲಿ ಋಣಾತ್ಮಕ ಭಾವನೆ ಬೆಳೆಯಲು ಕಾರಣವಾಗುತ್ತದೆ.ಅಂಥಹ ಸಿಬ್ಬಂದಿ ಗಳನ್ನು ಸಸ್ಪೆಂಡ್ ಅಷ್ಟೇ ಅಲ್ಲಾ, ಡಿಸ್ ಮಿಸ್ ಮಾಡುವ ಬಗ್ಗೆಯೂ ಸೂಚಿಸಲಾಗುವುದು ಎಂದರು.
ಮುಖ್ಯಮಂತ್ರಿಗಳ ನಿವಾಸದ ಸಮೀಪ, ಭದ್ರತೆಗೆಂದು ನಿಯೋಜಿಸಲಾದ ಇಬ್ಬರು ಪೊಲೀಸರು ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿಕೊಡಿರುವುದು ಬೆಳಕಿಗೆ ಬಂದಿದೆ. ಇಂಥಹ ಕೃತ್ಯವನ್ನು ಪತ್ತೆ ಮಾಡಿ ಕಾನೂನು ಕ್ರಮ ತೆಗೆದುಕೊಂಡ ಅಧಿಕಾರಿಗಳನ್ನು ಅಭಿನಂದಿಸುವೆ ಹಾಗೂ ಸೂಕ್ತ ಬಹುಮಾನ ಘೋಷಿಸಲು ನಿರ್ದೇಶನ ನೀಡಿದ್ದೇನೆ ಎಂದು ಸಚಿವರು ತಿಳಿಸಿದರು.
Read more
[wpas_products keywords=”deal of the day sale today offer all”]