ಹೇಮಂತ್ ಎಂ.ರಾವ್ ನಿರ್ದೇಶನದ, ನಟ ರಕ್ಷಿತ್ ಶೆಟ್ಟಿ ಅಭಿನಯಿಸುತ್ತಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಮೊದಲಾರ್ಧದ ಚಿತ್ರೀಕರಣ ಪೂರ್ಣಗೊಂಡಿದೆ.
ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ರಕ್ಷಿತ್ ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ. ರಕ್ಷಿತ್‌ಗೆ ಜೋಡಿಯಾಗಿ ನಟಿ ರುಕ್ಮಿಣಿ ವಸಂತ್ ಬಣ್ಣಹಚ್ಚಿದ್ದು, ಮೊದಲ ಹಂತದ ಚಿತ್ರೀಕರಣದಲ್ಲಿನ ‘ಮನು–ಪ್ರಿಯಾ’ ಜೋಡಿಯ ಕೆಲ ಫೋಟೊಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಕಳೆದ ಡಿಸೆಂಬರ್‌ನಲ್ಲೇ ಚಿತ್ರ ಬಿಡುಗಡೆಗೆ ನಿರ್ಧರಿಸಲಾಗಿತ್ತಾದರೂ, ಚಿತ್ರತಂಡವು ಇದನ್ನು ಮುಂದೂಡಿತ್ತು. ಕೋವಿಡ್ ಎರಡನೇ ಅಲೆಯ ಕಾರಣದಿಂದಾಗಿ 21 ದಿನಕ್ಕೇ ಮೊದಲ ಹಂತದ ಚಿತ್ರೀಕರಣವನ್ನು ಚಿತ್ರತಂಡ ಕಳೆದ ಮೇ ತಿಂಗಳಲ್ಲಿ ಸ್ಥಗಿತಗೊಳಿಸಿತ್ತು. ಇದೀಗ ಚಿತ್ರದ ಮೊದಲಾರ್ಧ ಪೂರ್ಣಗೊಂಡಿದೆ.
‘ಸಪ್ತ ಸಾಗರದಾಚೆ ಎಲ್ಲೋ’ ದಶಕದ ಹಿಂದೆ ನಡೆಯುವ ಪ್ರೇಮಕಥೆಯಾಗಿದ್ದು, ಚಿತ್ರದಲ್ಲಿ ಎರಡು ಶೇಡ್‌ಗಳಲ್ಲಿ ರಕ್ಷಿತ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಮೊದಲಾರ್ಧದ ಪಾತ್ರಕ್ಕಾಗಿ ರಕ್ಷಿತ್ ಅವರು 10–15 ಕೆ.ಜಿ. ತೂಕ ಇಳಿಸಿಕೊಂಡಿದ್ದು, ನಂತರದ ಪಾತ್ರಕ್ಕೆ ದಪ್ಪ ಆಗಬೇಕಾಗಿದೆ. ಇದಕ್ಕಾಗಿ ದ್ವಿತೀಯಾರ್ಧದ ಚಿತ್ರೀಕರಣಕ್ಕೆ ತಿಂಗಳ ಅಂತರ ಇಟ್ಟುಕೊಳ್ಳಲಾಗಿದೆ.
Read More…Source link
[wpas_products keywords=”deal of the day party wear for men wedding shirt”]