Karnataka news paper

ಮಾಲ್ಡೀವ್ಸ್ ನಲ್ಲಿ ಭಾರತದ ವಿರುದ್ಧ ಭುಗಿಲೆದ್ದ ಆಕ್ರೋಶ: ದೇಶದಿಂದ ಭಾರತೀಯ ಸೇನೆ ನಿರ್ಗಮನಕ್ಕೆ ಒತ್ತಾಯ 


The New Indian Express

ನವದೆಹಲಿ: ಮಾಲ್ಡೀವ್ಸ್ ನಲ್ಲಿ ಭಾರತದ ವಿರುದ್ಧದ ಆಕ್ರೋಶ ಭುಗಿಲೆದ್ದಿದೆ. ದೇಶದ ನೆಲದಲ್ಲಿ ಭಾರತೀಯ ಸೇನೆ ಕಾರ್ಯಾಚರಿಸುತ್ತಿರುವುದನ್ನು ಪ್ರತಿಪಕ್ಷಗಳು ವಿರೋಧಿಸಿದ್ದು, ಮಾಜಿ ಅಧ್ಯಕ್ಷ  ಅಬ್ದುಲ್ಲಾ ಯಾಮೀನ್, ತಮ್ಮ ದೇಶದ ನೆಲದಿಂದ ಭಾರತೀಯ ಸೇನೆ ಕಾಲ್ತೆಗೆಯಬೇಕು ಎಂದು ಪಟ್ಟು ಹಿಡಿದಿದ್ದಾರೆ. 

ಇದನ್ನೂ ಓದಿ: ಶ್ರೀಲಂಕಾ: ಬಂದರು, ಮೂಲಭೂತ ಸೌಕರ್ಯ ನಿರ್ಮಾಣ ಕ್ಷೇತ್ರದಲ್ಲಿ ಹೂಡಿಕೆ ನಡೆಸಲು ಭಾರತಕ್ಕೆ ಆಹ್ವಾನ

ಪ್ರತಿಭಟನಾಕಾರರ ಆಕ್ರೋಶ ಮಾಲ್ಡೀವ್ಸ್ ನಲ್ಲಿ ನೆಲೆಸಿರುವ ಭಾರತೀಯ ಮೂಲದ ಶಿಕ್ಷಕರ ಮೇಲೆ ತಿರುಗಿದೆ. ಪ್ರತಿಭಟನಾಕಾರುರು ಇಬ್ಬರು ಭಾರತೀಯ ಶಿಕ್ಷಕರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. 

ಇದನ್ನೂ ಓದಿ: ಶ್ರೀಲಂಕಾಗೆ 6,600 ಕೋಟಿ ರೂ. ಸಾಲದ ನೆರವು: ಆರ್ಥಿಕ ಸಂಕಷ್ಟದಲ್ಲಿರುವ ಮಿತ್ರರಾಷ್ಟ್ರದ ಕೈಹಿಡಿದ ಭಾರತ 

ಪ್ರತಿಭಟನಾಕಾರರು ‘ಇಂಡಿಯಾ ಔಟ್’ ಘೋಷಣೆಗಳನ್ನು ಕೂಗಿದ್ದಾರೆ. ಮಾಜಿ ಅಧ್ಯಕ್ಷ  ಅಬ್ದುಲ್ಲಾ ಯಾಮೀನ್ ಅವರು ಪ್ರತಿಭಟನೆ ಕುಮ್ಮಕ್ಕು ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಭಾರತದ ವಿರುದ್ಧದ ಕೂಗಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಲ್ಡೀವ್ಸ್ ಸರ್ಕಾರ ಮಿತ್ರರಾಷ್ಟ್ರದ ವಿರುದ್ಧ ಕೇಳಿಬರುತ್ತಿರುವ ಈ ಬಗೆಯ ಕೂಗು ದುರದೃಷ್ಟಕರ ಎಂದಿದೆ.

ಇದನ್ನೂ ಓದಿ: ಲಡಾಖ್ ಉದ್ವಿಗ್ನತೆ ಹೊರತಾಗಿಯೂ 2021 ರಲ್ಲಿ ಭಾರತ-ಚೀನಾ ನಡುವೆ ವ್ಯಾಪಾರ ದಾಖಲೆಯ 125 ಶತಕೋಟಿ ಡಾಲರ್ ಗೆ ಹೆಚ್ಚಳ



Read more

[wpas_products keywords=”deal of the day”]