Karnataka news paper

ನಂಜನಗೂಡಿನಲ್ಲಿ ಹುರುಳಿ ಒಕ್ಕಣೆ ಎಫೆಕ್ಟ್: ನಡುರಸ್ತೆಯಲ್ಲಿ ಆಂಬ್ಯುಲೆನ್ಸ್‌ನಲ್ಲೇ ಗಂಟೆಗಟ್ಟಲೆ ನರಳಾಡಿದ ಗರ್ಭಿಣಿ..


ಹೈಲೈಟ್ಸ್‌:

  • ರಸ್ತೆ ಮೇಲೆ ಹರಡಿದ್ದ ಹುರುಳಿ ಸೊಪ್ಪಿನಿಂದ ಅನಾಹುತ
  • ಗರ್ಭಿಣಿಯನ್ನು ಹೊತ್ತು ಸಾಗುತ್ತಿದ್ದ ಆಂಬ್ಯುಲೆನ್ಸ್
  • ಅರ್ಧ ಗಂಟೆಗಳ ಕಾಲ ನಿಂತಲ್ಲೇ ನಿಲ್ಲಬೇಕಾದ ಪರಿಸ್ಥಿತಿ..!

ಮೈಸೂರು: ವೈದ್ಯಕೀಯ ಲೋಕ ಎಷ್ಟೇ ಮುಂದುವರೆದಿದ್ರೂ ಹಳ್ಳಿಗಾಡು ಪ್ರದೇಶಗಳಲ್ಲಿ ಇನ್ನೂ ಕೂಡ ಸೂಕ್ತ ವೈದ್ಯಕೀಯ ಸೌಲಭ್ಯ ಮರಿಚಿಕೆಯಾಗಿಯೇ ಉಳಿದಿದೆ. ಹಳ್ಳಿ ಜನರು ಚಿಕಿತ್ಸೆಗೆ ಪಟ್ಟಣವನ್ನೇ ಅವಲಂಬಿತರಾಗುತ್ತಾರೆ. ಹೆರಿಗೆಗೆ ಮಹಿಳೆಯರು ಅನುಭವಿಸೋ ಪಾಡು ಅಂತಿಂಥದಲ್ಲ. ಇಂಥಾ ಹೊತ್ತಲ್ಲೇ ಎಷ್ಟೋ ಅನಾಹುತಗಳು ನಡೆದು ಹೋಗುತ್ತವೆ. ಅಂಥದ್ದೇ ಒಂದು ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ರಸ್ತೆ ಮೇಲೆ ಹರಡಿದ್ದ ಹುರುಳಿ ಸೊಪ್ಪಿನಿಂದ ಗರ್ಭಿಣಿಯನ್ನು ಹೊತ್ತು ಸಾಗುತ್ತಿದ್ದ ಆಂಬ್ಯುಲೆನ್ಸ್ ಅರ್ಧ ಗಂಟೆಗಳ ಕಾಲ ನಿಂತಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಬುಧವಾರ ಮೈಸೂರಲ್ಲಿ ನಿರ್ಮಾಣವಾಗಿತ್ತು. ಮೈಸೂರಿನ ನಂಜನಗೂಡು ತಾಲೂಕಿನ ಕೂಡ್ಲಾಪುರ ಗ್ರಾಮದ ಬಳಿ ಘಟನೆ ನಡೆದಿದ್ದು, ಇದ್ರಿಂದ ಕ್ಷಣ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಾರ್ವಜನಿಕ ರಸ್ತೆಯಲ್ಲಿ ಧಾನ್ಯ ಒಕ್ಕಣೆ ಮಾಡುವುದಕ್ಕೆ ಸರ್ಕಾರ ನಿರ್ಬಂಧ ಹೇರಿದೆ. ಹೀಗಿದ್ದೂ ಇಂತಹ ಕಾರ್ಯಗಳು ರಾಜ್ಯದ ಅನೇಕ ಕಡೆ ಇವತ್ತಿಗೂ ನಡೆಯುತ್ತಿದೆ. ಇದರಿಂದ ಆಗಾಗ ಯಡವಟ್ಟುಗಳು ಸಂಭವಿಸುತ್ತಲೇ ಇದೆ.

ಆಂಬ್ಯುಲೆನ್ಸ್ ಪರದಾಟ..!

ಮೈಸೂರು ಜಿಲ್ಲೆಯಲ್ಲಿ ಬುಧವಾರ ಗರ್ಭಿಣಿಯೊಬ್ಬರು ಅನುಭವಿಸಿದ ಯಾತನೆ ಕ್ಷಣ ಕಾಲ ಆತಂಕ ಸೃಷ್ಟಿಸಿತ್ತು. ಒಕ್ಕಣೆ ಮಾಡುತ್ತಿದ್ದ ಜಾಗದಲ್ಲಿ ಆಂಬ್ಯುಲೆನ್ಸ್ ಸಿಲುಕಿ ಹೈ ಡ್ರಾಮಾಕ್ಕೆ ಸಾಕ್ಷಿಯಾಯ್ತು. ಟೈರಿಗೆ ಸಿಲುಕಿದ ಹುರುಳಿ ಒಣ ಸೊಪ್ಪನ್ನು ಬಿಡಿಸಿಕೊಂಡು ಸಾಗುವಷ್ಟರಲ್ಲಿ ಅರ್ಧ – ಮುಕ್ಕಾಲು ಗಂಟೆ ತಡವಾಯ್ತು. ಅತ್ತ ಗರ್ಭಿಣಿ ನೋವಿನಿಂದ ನರಳುತ್ತಿದ್ದರೆ, ರೈತರು ಸೊಪ್ಪನ್ನು ಚಕ್ರದಿಂದ ಬಿಡಿಸಲು ನಿರಂತರಾಗಿದ್ದರು. ಕಡೆಗೆ ಸ್ಥಳೀಯರ ನೆರವಿನೊಂದಿಗೆ ಹುರಳಿ ಸೊಪ್ಪನ್ನ ಬಿಡಿಸಿ ಆಂಬ್ಯುಲೆನ್ಸ್ ಮುಂದೆ ಸಾಗಲು ಅನುವು ಮಾಡಿಕೊಡಲಾಯಿತು.

ಕಮಿಷನ್‌ ಆಸೆಗಾಗಿ ರೋಗಿಗಳನ್ನು ‘108’ ಆಂಬ್ಯುಲೆನ್ಸ್‌ನಲ್ಲಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ಜಾಲ ಸಕ್ರಿಯ!
ಅರ್ಧ ಗಂಟೆ ಆತಂಕ..!

ಹೆರಿಗೆಗೆ ಕುಡ್ಲಾಪುರ ಸಮೀಪದ ಗ್ರಾಮದ ಮಹಿಳೆಯನ್ನ ಸಾಗಿಸಲಾಗುತ್ತಿತ್ತು. ರಸ್ತೆಗೆ ಹರಡಿದ್ದ ಹುರುಳಿ ಸೊಪ್ಪು ಧಿಡೀರ್ ಆಂಬ್ಯುಲೆನ್ಸ್ ಚಕ್ರಕ್ಕೆ ಸಿಲುಕಿತ್ತು. ಅತ್ತ ಮುಂದಿಕ್ಕೂ ಹೋಗಲಾರದೆ ಹಿಂದಿಕ್ಕೂ ಹೋಗಲು ಆಗದೇ ನಿಂತಲ್ಲೇ ನಿಲ್ಲೋ ಪರಿಸ್ಥಿತಿ ನಿರ್ಮಾಣವಾಯ್ತು. ಒಳಗಡೆ ಇದ್ದ ಗರ್ಭಿಣಿಗೆ ಹೆರಿಗೆ ನೋವು ಹೆಚ್ಚಾಯ್ತು. ಪಕ್ಕದಲ್ಲಿದ್ದ ಕುಟುಂಬಸ್ಥರು ಕ್ಷಣ ಕಾಲ ಗಾಬರಿಗೊಂಡ್ರು. ಪರಿಸ್ಥಿತಿ ಗಂಭೀರತೆ ಅರಿತ ಸ್ಥಳದಲ್ಲಿದ್ದ ರೈತರು ಹುಲ್ಲನ್ನು ಚಕ್ರದಿಂದ ಬಿಡಿಸಿದ್ರು. ನಂತರ ಆಸ್ಪತ್ರೆಗೆ ಗರ್ಭಿಣಿಯನ್ನ ಕರೆದೊಯ್ಯಲಾಯ್ತು.

ಆರೋಗ್ಯ ಕವಚ 108: ಹೊಸ ವರ್ಷದ ತುರ್ತು ಪ್ರತಿಸ್ಪಂದನಕ್ಕಾಗಿ ಸಜ್ಜು
ಅನೇಕ ಕಡೆ ಅನಾಹುತ..!

ಇನ್ನು ಇದೇ ಪ್ರಕರಣಕ್ಕೆ ಹೋಲುವಂತೆ ಜಿಲ್ಲೆಯ ಅನೇಕ ಕಡೆ ಒಕ್ಕಣೆಯಿಂದಾಗಿ ಬೆಂಕಿ ಅನಾಹುತ ಹಾಗೂ ಬಸ್‌ಗಳಿಗೆ ಹುಲ್ಲು ಸಿಲುಕಿ ಅವಾಂತರಗಳು ಸೃಷ್ಟಿಯಾಗ್ತಿರೋ ಅನೇಕ ಪ್ರಕರಣಗಳು ವರದಿಯಾಗ್ತಿವೆ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಅದೃಷ್ಟವಶಾತ್ ಗರ್ಭಿಣಿಯಿದ್ದ ಆಂಬ್ಯುಲೆನ್ಸ್ ಬುಧವಾರ ಸುರಕ್ಷಿತವಾಗಿ ಆಸ್ಪತ್ರೆ ಸೇರಿದೆ.

ಗುಜರಿ ಆಂಬ್ಯುಲೆನ್ಸ್‌ಗಳ ಬಳಕೆ, ರೋಗಿಗಳಿಗೆ ಪ್ರಾಣ ಸಂಕಟ; ನಕಲಿ ರೋಗಿಗಳ ಸೃಷ್ಟಿ, ಕೋಟ್ಯಂತರ ರೂ. ಕನ್ನ!



Read more

[wpas_products keywords=”deal of the day sale today offer all”]