Karnataka news paper

ಗೋವಾ ವಿಧಾನಸಭೆ ಚುನಾವಣೆ: ಆಪ್ ಸಿಎಂ ಅಭ್ಯರ್ಥಿಯಾಗಿ ವಕೀಲ ಅಮಿತ್ ಪಾಲೇಕರ್ ಆಯ್ಕೆ


ANI

ಪಣಜಿ: ಪಂಚರಾಜ್ಯಗಳ ಚುನಾವಣಾ ಕಸರತ್ತು ಭರದಿಂದ ಸಾಗಿದ್ದು, ಇತ್ತ  ಗೋವಾದ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಖ್ಯಾತ ವಕೀಲ ಅಮಿತ್ ಪಾಲೇಕರ್ ಅವರನ್ನು ಆಯ್ಕೆ ಮಾಡಲಾಗಿದೆ.

ವಕೀಲ ಅಮಿತ್ ಪಾಲೇಕರ್ ಎಎಪಿಯ ಗೋವಾ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದು, ಪಾಲೇಕರ್ ಅವರು ತಮ್ಮ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿರುವ ಗೋವಾದ ಕೊರ್ಟಲಿಮ್ ಗ್ರಾಮದಲ್ಲಿ ಕೇಜ್ರಿವಾಲ್ ಭಾನುವಾರ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ್ದರು. ಪ್ರಚಾರದ ಭಾಗವಾಗಿ, ಕೇಜ್ರಿವಾಲ್ ಇತರ ಪಕ್ಷದ ಸದಸ್ಯರೊಂದಿಗೆ ಕೊರ್ಟಾಲಿಮ್‌ನಲ್ಲಿ ಮತದಾರರೊಂದಿಗೆ ಸಂವಾದ ನಡೆಸಿದ್ದರು.

ಗೋವಾ ವಿಧಾನಸಭೆಗೆ ಫೆಬ್ರವರಿ 14 ರಂದು ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. 



Read more

[wpas_products keywords=”deal of the day”]