Karnataka news paper

ಸ್ಯಾಂಡಲ್ ವುಡ್ ‘ಸ್ವೀಟಿ’ ರಾಧಿಕಾ ಕುಮಾರಸ್ವಾಮಿ ಡ್ಯಾನ್ಸ್ ವಿಡಿಯೋ ವೈರಲ್!


Online Desk

ಬೆಂಗಳೂರು: ಸ್ಯಾಂಡಲ್ ವುಡ್ ‘ಸ್ವೀಟಿ’ ಎಂದೇ ಖ್ಯಾತರಾದ ರಾಧಿಕಾ ಕುಮಾರಸ್ವಾಮಿ ಅವರ ಡ್ಯಾನ್ಸ್ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೋದಲ್ಲಿ ಹಿಂದಿ ಹಾಡೊಂದಕ್ಕೆ ಮಸ್ತು ಸ್ಟೆಪ್ ಹಾಕಿದ್ದಾರೆ. 

ಹಿಂದಿಯ ‘ಮೇರಾ ಯಾರಾದ ಕವರ್’ ಸಾಂಗ್ ಗೆ ರಾಧಿಕಾ ಕುಮಾರಸ್ವಾಮಿ ಹೆಜ್ಜೆ ಹಾಕಿದ್ದಾರೆ.ಅವರ ಈ ಇನ್ಸ್ಟಗ್ರಾಮ್ ರೀಲ್ ಸದ್ಯ ವೈರಲ್ ಆಗಿದ್ದು, ಅಭಿಮಾನಿಗಳು ಪಿಧಾ ಆಗಿದ್ದಾರೆ. ಕಪ್ಪು ಬಣ್ಣದ ಗೌನ್ ತೊಟ್ಟು  ಹರೆಯದ ಹುಡುಗಿಯರು ಕೂಡಾ ನಾಚುವಂತೆ ರಾಧಿಕಾ ಕುಮಾರಸ್ವಾಮಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸಾಕಷ್ಟು ಮೆಚ್ಚುಗೆ ಗಳಿಸಿದೆ. 

ಈ ಹಿಂದೆ ಬೀಚ್ ಮುಂದೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದನ್ನು ರಾಧಿಕಾ ಕುಮಾರಸ್ವಾಮಿ ಹಂಚಿಕೊಂಡಿದ್ದರು. ಅದು ಕೂಡಾ ಸಾಕಷ್ಟು ವೈರಲ್ ಆಗಿತ್ತು. 





Read more…

[wpas_products keywords=”party wear dress for women stylish indian”]