ಹೈಲೈಟ್ಸ್:
- ಡಿಸೆಂಬರ್ 24ರಂದು ತೆರೆಕಂಡಿದ್ದ ‘ಬಡವ ರಾಸ್ಕಲ್’ ಸಿನಿಮಾ
- ಧನಂಜಯ್ & ಅಮೃತಾ ಅಯ್ಯಂಗಾರ್ ಜೋಡಿಯ ‘ಬಡವ ರಾಸ್ಕಲ್’
- ‘ಬಡವ ರಾಸ್ಕಲ್’ ಸಿನಿಮಾದ ಓಟಿಟಿ ಪ್ರಸಾರದ ದಿನಾಂಕ ನಿಗದಿ
ಜನವರಿ 26ಕ್ಕೆ ಓಟಿಟಿಯಲ್ಲಿ ‘ಬಡವ ರಾಸ್ಕಲ್‘
ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 26ರಂದು ವೂಟ್ ಸೆಲೆಕ್ಟ್‌ನಲ್ಲಿ ‘ಬಡವ ರಾಸ್ಕಲ್’ ಸಿನಿಮಾ ಪ್ರಸಾರವಾಗಲಿದೆ. ಶ್ರೀಮಂತ ರಾಜಕಾರಣಿಯ ಮಗಳು ಸಂಗೀತಾ (ಅಮೃತಾ) ಮತ್ತು ಮಧ್ಯಮ ವರ್ಗ ಕುಟುಂಬದ ಶಂಕರ್ (ಧನಂಜಯ್) ನಡುವೆ ಪ್ರೇಮ ಬೆಳೆದು ಅಂತಿಮವಾಗಿ ಅವರಿಬ್ಬರು ಒಂದಾಗಲಿದ್ದಾರೆಯೇ ಎಂಬುದೇ ಸಿನಿಮಾದ ಕಥೆ. ಹಲವು ತಿರುವುಗಳುಳ್ಳ ಈ ಸಿನಿಮಾದಲ್ಲಿ ಮಧ್ಯಮ ವರ್ಗದ ಜೀವನದ ಬಗ್ಗೆಯೂ ಹೇಳಲಾಗಿದೆ. ಈ ಚಿತ್ರವೂ ಈಗಾಗಲೇ ಯಶಸ್ವಿ ಪ್ರದರ್ಶನ ಕಂಡು, ಜನರಿಂದ ಮೆಚ್ಚುಗೆ ಪಡೆದಿದೆ. ಇದೀಗ ವೂಟ್ ಸೆಲೆಕ್ಟ್ ಮೂಲಕ ಪ್ರತಿಯೊಬ್ಬರ ಮನೆಬಾಗಿಲಿಯೇ ಈ ಸಿನಿಮಾ ಬರುತ್ತಿದೆ.
ಚಿತ್ರದ ಬಗ್ಗೆ ಮಾತನಾಡುವ ನಟ ಡಾಲಿ ಧನಂಜಯ್, ‘ಈ ಚಿತ್ರ ನನಗೆ ಎರಡು ಕಾರಣಗಳಿಂದ ಬಹಳ ಹತ್ತಿರವೆನಿಸುತ್ತದೆ. ಒಂದು, ಇದರ ಚಿತ್ರತಂಡ. ಮತ್ತೊಂದು, ಈ ಚಿತ್ರದಲ್ಲಿನ ಕಥೆ. ಬಡತನದ ಸೂಕ್ಷ್ಮಮತೆಯನ್ನು ತೋರಿಸುವಲ್ಲಿ ಈ ಚಿತ್ರತಂಡ ಯಶಸ್ವಿಯಾಗಿದೆ. ಒಬ್ಬ ಸಾಮಾನ್ಯ ಮನುಷ್ಯ ತನ್ನ ಕನಸುಗಳನ್ನು ಹೇಗೆ ಬೆನ್ನಟ್ಟಿ ಯಶಸ್ವಿಯಾಗುತ್ತಾನೆ. ಜೊತೆಗೆ ಪ್ರೀತಿಯನ್ನೂ ಬಿಟ್ಟುಕೊಡದೇ ಹೇಗೆಲ್ಲಾ ಕಷ್ಟ ಪಡುತ್ತಾನೆ ಎಂಬುದನ್ನು ಅತಿ ಭಾವನಾತ್ಮಕವಾಗಿ ತೋರಿಸಲಾಗಿದೆ’ ಎಂದು ಹೇಳಿದ್ದಾರೆ.
Ramya: ಕನ್ನಡ ಸಿನಿಮಾಗಳ ಸಪೋರ್ಟ್‌ಗೆ ನಿಂತ ‘ಸ್ಯಾಂಡಲ್‌ವುಡ್ ಕ್ವೀನ್’ ರಮ್ಯಾ
‘ಡಾಲಿ ಪಿಕ್ಚರ್ಸ್’ ಬ್ಯಾನರ್‌ನಲ್ಲಿ ಈ ಸಿನಿಮಾವನ್ನು ಧನಂಜಯ್ ನಿರ್ಮಾಣ ಮಾಡಿದ್ದರೆ, ಚೊಚ್ಚಲ ಬಾರಿಗೆ ಶಂಕರ್ ಗುರು ನಿರ್ದೇಶನ ಮಾಡಿದ್ದಾರೆ. ಧನಂಜಯ್‌ಗೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ‘ಪಾಪ್‌ಕಾರ್ನ್ ಮಂಕಿ ಟೈಗರ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ಧನು ಮತ್ತು ಅಮೃತಾ ಈ ಸಿನಿಮಾದಲ್ಲೂ ಮೋಡಿ ಮಾಡಿದ್ದಾರೆ. ಉಳಿದಂತೆ, ರಂಗಾಯಣ ರಘು ಹಾಗೂ ತಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ಸ್ವರ್ಶ’ ರೇಖಾ, ನಾಗಭೂಷಣ್, ಪೂರ್ಣಚಂದ್ರ ಮೈಸೂರು, ನಿರಂಜನ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಚಿತ್ರದ ಹಾಡುಗಳಿಗೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಡುಗಳು ಈಗಾಗಲೇ ದೊಡ್ಡ ಹಿಟ್ ಆಗಿವೆ.
‘ರಾಮಾ ರಾಮಾ ರೇ’ ಸತ್ಯ ಪ್ರಕಾಶ್ ಸಾರಥ್ಯದಲ್ಲಿ ಸಿನಿಮಾ ವಿತರಣಾ ಸಂಸ್ಥೆ; ಸಾಥ್ ನೀಡಿದ ಧನಂಜಯ್
Read more
[wpas_products keywords=”deal of the day party wear dress for women stylish indian”]